ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಾಯಕತ್ವದ ಆರ್‌ಸಿಬಿ ಪರ ಆಡಿದ್ದ ಈತ ಇಂದು ಕ್ರಿಕೆಟ್ ಶಿಶು ನಮೀಬಿಯಾವನ್ನು ಸೂಪರ್12ಗೆ ಕರೆತಂದ!

Who is David Wiese? Know The Story of Former South Africa All-rounder To A Namibian Cricketer in Kannada

ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾದಾಗ ನಮೀಬಿಯಾ ತಂಡ ಸೂಪರ್ 12 ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು, ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದ್ದ ನಮೀಬಿಯಾ ತನ್ನ ಮೊದಲನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನಮೀಬಿಯಾ 96 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಶ್ರೀಲಂಕಾ 7 ವಿಕೆಟ್‍ಗಳ ಜಯವನ್ನು ಸಾಧಿಸಿತ್ತು.

ಹೀಗೆ ಟೂರ್ನಿಯ ಅರ್ಹತಾ ಸುತ್ತಿನ ತನ್ನ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲನ್ನು ಕಾಣುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿದ್ದ ನಮೀಬಿಯಾ ಇದೀಗ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದೆ. ಶ್ರೀಲಂಕಾ ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಸೋತಿದ್ದ ನಮೀಬಿಯಾ ನಂತರ ನಡೆದ ನೆದರ್ಲೆಂಡ್ಸ್ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ 4 ಅಂಕಗಳನ್ನು ಪಡೆದುಕೊಂಡು ಸೂಪರ್ 12 ಸುತ್ತಿಗೆ ಲಗ್ಗೆ ಇಟ್ಟಿದೆ.

ಅಕ್ಟೋಬರ್ 20ರ ಬುಧವಾರದಂದು ನಡೆದಿದ್ದ ನೆದರ್ಲೆಂಡ್ಸ್ ಮತ್ತು ನಮೀಬಿಯಾ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 164 ರನ್ ಕಲೆ ಹಾಕಿತ್ತು. ಇನ್ನು ನೆದರ್ಲೆಂಡ್ಸ್ ನೀಡಿದ 165 ರನ್‌ಗಳ ಗುರಿಯನ್ನು ಬೆನ್ನತ್ತಿದ ನಮೀಬಿಯಾ 19 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸುವುದರ ಮೂಲಕ ಇನ್ನೂ 1 ಓವರ್ ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದು ಬೀಗಿತ್ತು. ಹೀಗೆ ನೆದರ್ಲೆಂಡ್ಸ್ ನೀಡಿದ್ದ ಪೈಪೋಟಿಯುತ ಮೊತ್ತವನ್ನು ಬಾರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಮೊದಲನೇ ಗೆಲುವನ್ನು ದಾಖಲಿಸಿದ ನಮೀಬಿಯಾ ನಂತರ ಇಂದು (ಅಕ್ಟೋಬರ್ 22) ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್

ಐರ್ಲೆಂಡ್ ಮತ್ತು ನಮೀಬಿಯಾ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125 ರನ್ ಗಳಿಸುವುದರ ಮೂಲಕ ಎದುರಾಳಿ ನಮೀಬಿಯಾ ತಂಡಕ್ಕೆ 126 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಕೂಡ ನಮೀಬಿಯಾ ಯಶಸ್ವಿಯಾಗಿ 18.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ 8 ವಿಕೆಟ್‍ಗಳ ಜಯ ಸಾಧಿಸಿ ಸೂಪರ್ 12 ಹಂತಕ್ಕೆ ಅಧಿಕೃತವಾಗಿ ಪ್ರವೇಶವನ್ನು ಪಡೆದುಕೊಂಡು ಗ್ರೂಪ್ 2ಗೆ ಸೇರಿಕೊಂಡಿದೆ.

ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!

ಇನ್ನು ಮೊದಲ ಪಂದ್ಯದಲ್ಲಿ ಮಂಕಾಗಿದ್ದ ನಮೀಬಿಯಾ ನಂತರ ನಡೆದ 2 ಪಂದ್ಯಗಳಲ್ಲಿ ಯಶಸ್ವಿಯಾಗಿ ಜಯ ಸಾಧಿಸುವಲ್ಲಿ ಕಾರಣಕರ್ತರಾದ ಆಟಗಾರರ ಪೈಕಿ ಪ್ರಮುಖರಾದವರು ಡೇವಿಡ್ ವೈಸ್. ಹೌದು, ಈ ಎರಡೂ ಪಂದ್ಯಗಳಲ್ಲಿಯೂ ಡೇವಿಡ್ ವೈಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಮೀಬಿಯಾ ಈ ಯಶಸ್ಸನ್ನು ಗಳಿಸಿತು ಎಂದರೆ ತಪ್ಪಾಗಲಾರದು. ಅಂದಹಾಗೆ ನಮೀಬಿಯಾ ಪಾಲಿಗೆ ಹೀರೋ ಆಗಿ ಮಿಂಚಿರುವ ಡೇವಿಡ್ ವೈಸ್‌ಗೆ ಸೌತ್ ಆಫ್ರಿಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಂಟಿದೆ. ಅಷ್ಟಕ್ಕೂ ಡೇವಿಡ್ ವೈಸ್‌ಗೆ ಸೌತ್ ಆಫ್ರಿಕಾ ತಂಡದ ಜೊತೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಹೇಗೆ ನಂಟು ಎಂಬ ಮಾಹಿತಿ ಮುಂದೆ ಇದೆ ಓದಿ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 2 ವರ್ಷ ಆಡಿದ್ದ ಡೇವಿಡ್ ವೈಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 2 ವರ್ಷ ಆಡಿದ್ದ ಡೇವಿಡ್ ವೈಸ್


ಸದ್ಯ ನಮೀಬಿಯಾ ಪರ ಆಡುತ್ತಿರುವ ಡೇವಿಡ್ ವೈಸ್ 2015 ಮತ್ತು 2016ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಟವನ್ನಾಡಿದ್ದರು. ಒಟ್ಟು 15 ಐಪಿಎಲ್ ಪಂದ್ಯಗಳನ್ನಾಡಿರುವ ಡೇವಿಡ್ ವೈಸ್ 8 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿ 127 ರನ್ ಗಳಿಸಿದ್ದಾರೆ. ಹಾಗೂ ಆಲ್ ರೌಂಡರ್ ಆಗಿರುವ ಡೇವಿಡ್ ವೈಸ್ 15 ಐಪಿಎಲ್ ಪಂದ್ಯಗಳ ಪೈಕಿ 16 ವಿಕೆಟ್‍ಗಳನ್ನು ಕೂಡ ಪಡೆದಿದ್ದಾರೆ.

ಡೇವಿಡ್ ವೈಸ್ ಮೂಲತಃ ಸೌತ್ ಆಫ್ರಿಕಾ ಆಟಗಾರ

ಡೇವಿಡ್ ವೈಸ್ ಮೂಲತಃ ಸೌತ್ ಆಫ್ರಿಕಾ ಆಟಗಾರ


ಮೇ 18, 1985ರಲ್ಲಿ ಸೌತ್ ಆಫ್ರಿಕಾದಲ್ಲಿ ಜನಿಸಿದ ಡೇವಿಡ್ ವೈಸ್ ಸೌತ್ ಆಫ್ರಿಕಾ ಪರ 2013ರಿಂದ 2016ರವರೆಗೆ ಅಂತರ ರಾಷ್ಟ್ರೀಯ ತಂಡದಲ್ಲಿ ಆಟಗಾರನಾಗಿದ್ದರು. ಆಗಸ್ಟ್ 2, 2013ರಲ್ಲಿ ನಡೆದಿದ್ದ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಆಗಸ್ಟ್ 19, 2015ರಲ್ಲಿ ನಡೆದಿದ್ದ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದ ಡೇವಿಡ್ ವೈಸ್ ಫೆಬ್ರವರಿ 14, 2016ರಲ್ಲಿ ನಡೆದ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು.

ಇಷ್ಟು ಕೋಟಿ ಬಿಗ್ ಆಫರ್ ಕೊಟ್ರೂ ಕೋಚ್ ಆಗೋದಕ್ಕೆ ದ್ರಾವಿಡ್ ಯಾಕೆ ಒಪ್ತಿಲ್ಲ | Oneindia Kannada
ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಡೇವಿಡ್ ವೈಸ್ ಅಬ್ಬರ

ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಡೇವಿಡ್ ವೈಸ್ ಅಬ್ಬರ


ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ನಮೀಬಿಯಾದ ದ್ವಿತೀಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಅಬ್ಬರಿಸಿದ ಡೇವಿಡ್ ವೈಸ್ 40 ಎಸೆತಗಳಲ್ಲಿ ಅಜೇಯ 66 ರನ್ ಗಳಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದಲ್ಲಿ ಡೇವಿಡ್ ವೈಸ್ 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ಇಂದು ( ಅಕ್ಟೋಬರ್ 22 ) ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಅಬ್ಬರಿಸಿರುವ ಡೇವಿಡ್ ವೈಸ್ 14 ಎಸೆತಗಳಿಗೆ 28 ರನ್ ಬಾರಿಸುವುದರ ಮೂಲಕ ಮಿಂಚಿ ಈ ಪಂದ್ಯದಲ್ಲಿಯೂ ಕೂಡಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿರುವ ಡೇವಿಡ್ ವೈಸ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್‍ಗಳನ್ನು ಪಡೆದಿದ್ದಾರೆ.

Story first published: Saturday, October 23, 2021, 9:27 [IST]
Other articles published on Oct 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X