ಟ್ರೋಲಿಗರ ಬಾಯ್ಮುಚ್ಚಿಸಿದ ರಾಜ, ಸಿರಾಜನ ಕ್ರಿಕೆಟ್ ಬದುಕಿನ ಚಿತ್ರಣ

ಅಶೋಕ್ ದಿಂಡಾ, ಆಶೀಶ್ ನೆಹ್ರಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಅಷ್ಟೇಕೆ ವಿನಯ್ ಕುಮಾರ್ ರನ್ನು ಟ್ರೋಲಿಗರು ಬಿಟ್ಟಿಲ್ಲ. ಚುಟುಕು ಕ್ರಿಕೆಟ್ ಆಟದಲ್ಲಿ ಅತಿಹೆಚ್ಚು ದಂಡನೆಗೆ ಒಳಗಾಗುವುದು ಬೌಲರ್ಸ್ ಎಂಬುದು ನಿರ್ವಿವಾದ. ಈ ಎಲ್ಲಾ ಬೌಲರ್ ಗಳು ಅತಿ ಹೆಚ್ಚು ರನ್ ತೆತ್ತು ವಿಕೆಟ್ ಕೂಡಾ ಕೀಳದೆ ದುಬಾರಿಯಾಗಿ ತಮ್ಮ ತಂಡದ ಬದಲಿಗೆ ಎದುರಾಳಿಗೆ ತಂಡಕ್ಕೆ ನೆರವಾಗುತ್ತಾರೆ ಎಂದು ಗೇಲಿ ಮಾಡಿ ನಕ್ಕವರು ಒಬ್ಬರ ಇಬ್ಬರಾ ಟ್ವಿಟ್ಟರ್, ಇನ್ಸ್ಟಾಗ್ರಾಂ ತುಂಬಾ ಇದ್ದಾರೆ. ಆದರೆ ಟ್ರೋಲಿಗರು, ಟೀಕಾಕಾರರು ಬಾಯ್ಮುಚ್ಚುವಂಥ ಪ್ರದರ್ಶನವನ್ನು ಸಿರಾಜ್ ನೀಡಿದ್ದಾರೆ.

ಕಠಿಣ ಪರಿಶ್ರಮ, ಅವಿರತ ಸಾಧನೆಯ ಫಲವಾಗಿ ಐಪಿಎಲ್ ನಲ್ಲಿ ಉದಯೋನ್ಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ 10ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಬಂದಾಗ ಇದ್ದ ಉತ್ಸಾಹ ಈಗಲೂ ನನ್ನಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

ಅಂದು ಸಿರಾಜ್ 20 ಲಕ್ಷ ರು ಮೂಲಬೆಲೆ ಮೀರಿ ಕೋಟಿಗಟ್ಟಲೆ ಮೌಲ್ಯಕ್ಕೆ ಸಿರಾಜ್ ಅವರು ಹೈದರಾಬಾದ್ ಪಾಲಾಗಿದ್ದರು. ಆದರೆ, ಸಿರಾಜ್ ಲಕ್ ತಿರುಗಿದ್ದು, ಆರ್ ಸಿಬಿ 2.60 ಕೋಟಿ ರು ನೀಡಿ ಸಿರಾಜ್ ರನ್ನು ಪ್ಲೇ ಬೋಲ್ಡ್ ಆರ್ಮಿಗೆ ಸೇರಿಸಿಕೊಂಡ ಮೇಲೆ ಎನ್ನಬಹುದು.

ರಿಕ್ಷಾ ಚಾಲಕರಾಗಿದ್ದ ತಂದೆ ಮುಹಮ್ಮದ್ ಗೌಸ್ ಮತ್ತು ತಾಯಿ ಶಬನಾ ಬೇಗಮ್ ಅವರಿಗೆ ನೆಲೆಸಲು ಸೂಕ್ತ ಮನೆ ಕಟ್ಟಿಕೊಡುವ ಕನಸಿನೊಂದಿಗೆ ಐಪಿಎಲ್ ಗೆ ಬಂದ ಸಿರಾಜ್ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಟೀಂ ಇಂಡಿಯಾಕ್ಕೂ ಆಯ್ಕೆಯಾಗಿದ್ದಾರೆ. ಆದರೆ, ಸಿರಾಜ್ ಪ್ರತಿಭೆ ಸರಿಯಾಗಿ ಪ್ರಕಟವಾಗಿದ್ದು ಐಪಿಎಲ್ 2020ರಲ್ಲಿ ಎಂದರೆ ತಪ್ಪಾಗಲಾರದು.

ಐಪಿಎಲ್ ಸೇರಿದ್ದು ಹೇಗೆ?

ಐಪಿಎಲ್ ಸೇರಿದ್ದು ಹೇಗೆ?

ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ಸಿರಾಜ್ ಅವರನ್ನು ಐಪಿಎಲ್ ಅಂಗಳಕ್ಕೆ ಕರೆ ತಂದಿದ್ದು, ಅವರು ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ನೀಡಿದ ಪ್ರದರ್ಶನ ಎನ್ನಬಹುದು. ಭಾರತ 'ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಐಪಿಎಲ್ ತಂಡ ಸೇರಲು ನೆರವಾಯಿತು , ಸಿರಾಜ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸ್ಟೈಲಿಷ್ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್. ಐಪಿಎಲ್ ನಲ್ಲಿ ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ದರು. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡದಲ್ಲಿ ಆಡಿದ ಅನುಭವ ನನಗೆ ಲಾಭ ತಂದಿದೆ. ಕೋಚ್ ಭರತ್ ಅರುಣ್ ಅವರ ಸಲಹೆ ಸೂಚನೆ ಪಾಲಿಸಿದ್ದು ನೆರವಾಗಿದೆ ಎಂದು ಈಗಲೂ ಸಿರಾಜ್ ಸ್ಮರಿಸುತ್ತಾರೆ.

ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ

ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ

ನನ್ನ ಈ ಸಾಧನೆಗೆ ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ. ಆಟೋರಿಕ್ಷಾ ಚಾಲಕರಾಗಿದ್ದರೂ ನಮ್ಮ ಮೇಲೆ ಕುಟುಂಬದ ಕಷ್ಟ ಬೀಳದಂತೆ ನನ್ನಪ್ಪ ನೋಡಿಕೊಂಡರು. ಇದರಿಂದ ನಾನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.

ಸತತ ಎರಡು ಮೇಡನ್, 3 ವಿಕೆಟ್ ಸಿರಾಜ್ ಜಿಂದಾಬಾದ್!

25 ಓವರ್‌ಗಳ ಕ್ಲಬ್ ಮ್ಯಾಚ್ ವೊಂದರಲ್ಲಿ 20 ರನ್ನಿಗೆ ಎದುರಾಳಿ ತಂಡದ 9 ವಿಕೆಟ್‌ ಗಳನ್ನು ಉರುಳಿಸಿದ್ದೆ. ಆಗ ನನ್ನ ಚಿಕ್ಕಪ್ಪ ನನಗೆ 500 ರೂ. ಬಹುಮಾನ ನೀಡಿದ್ದರು. ಅದು ನಾನು ಪಡೆದ ದೊಡ್ಡ ಬಹುಮಾನ. ಇದಾದ ಬಳಿಕ ಹರಾಜಿನಲ್ಲಿ ಐಪಿಎಲ್ ತಂಡಕ್ಕೆ ಆಯ್ಕೆಯಾಗಿದ್ದು ಅವಿಸ್ಮರಣೀಯ ಕ್ಷಣ ಎಂದಿದ್ದಾರೆ ಸಿರಾಜ್.

ತಂದೆ ತಾಯಿ ಈಗ ನನ್ನ ಬಗ್ಗೆ ಹೆಮ್ಮೆಯಿಂದ ನೋಡುತ್ತಾರೆ

ತಂದೆ ತಾಯಿ ಈಗ ನನ್ನ ಬಗ್ಗೆ ಹೆಮ್ಮೆಯಿಂದ ನೋಡುತ್ತಾರೆ

ನನ್ನ ಅಣ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ, ನನಗೆ ಮೊದಲಿನಿಂದಲೂ ಓದಿಗಿಂತ ಕ್ರಿಕೆಟ್ ನತ್ತ ಆಸಕ್ತಿ ಬೆಳೆಯಿತು. ನನ್ನ ತಾಯಿಗೆ ಮಾತ್ರ ನಾನು ನನ್ನ ಅಣ್ಣನಂತೆ ಇಂಜಿನಿಯರ್ ಆಗಬೇಕು ಎಂಬ ಆಸೆಯಿತ್ತು. ಆದರೆ, ಈಗ ನನ್ನ ಬಗ್ಗೆ ಹೆಮ್ಮೆಯಿಂದ ಮೊಹಲ್ಲಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ವಿವಿಧ ಹಂತಗಳಲ್ಲಿ ಆಡಿ ಬೆಳೆದ ಸಿರಾಜ್

ವಿವಿಧ ಹಂತಗಳಲ್ಲಿ ಆಡಿ ಬೆಳೆದ ಸಿರಾಜ್

2015ರಿಂದ ಲೆದರ್ ಬಾಲ್ ಕ್ರಿಕೆಟ್ ಆಡಲು ಆರಂಭಿಸಿದ ಸಿರಾಜ್ , ಹೈದರಾಬಾದ್ ನ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡಕ್ಕೆ ಆಡಿದ ಸಾಧನೆ ಮಾಡಿದ್ದಾರೆ. ಭಾರತ ‘ಎ' ತಂಡದಲ್ಲಿ ಆಡುವ ಅವಕಾಶ ಕೂಡಾ ಪಡೆದರು. 2016-17 ರಣಜಿ ಋತುವಿನಲ್ಲಿ ಹೈದರಾಬಾದ್ ಪರ 9 ಪಂದ್ಯಗಳಲ್ಲಿ 41 ವಿಕೆಟ್ ಗಳಿಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ 6 ಪಂದ್ಯಗಳಿಂದ 10 ವಿಕೆಟ್ ಪಡೆದರು. ನಂತರ 2.20 ಕೋಟಿ ರುಗೆ ಆರ್ ಸಿಬಿ ಸೇರಿಕೊಂಡರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆಡಿದ ಭಾರತ ತಂಡಕ್ಕೆ ಸಿರಾಜ್ ಹಾಗೂ ಶ್ರೇಯಸ್ ಅಯ್ಯರ್ ಒಟ್ಟಿಗೆ ಆಯ್ಕೆಯಾಗಿದ್ದು ಎಂಬುದನ್ನು ಮರೆಯುವಂತಿಲ್ಲ. ಒಟ್ಟಾರೆ ಐಪಿಎಲ್ ನಲ್ಲಿ 30 ಪಂದ್ಯಗಳಲ್ಲಿ 34 ವಿಕೆಟ್ 4/32 ಹಾಗೂ 3/8 ಶ್ರೇಷ್ಠ ಬೌಲಿಂಗ್ ಪ್ರದರ್ಶನ. ಎಕಾನಾಮಿ ತುಸು ಅಧಿಕ 9.02. ಆದರೆ, ಐಪಿಎಲ್ 2020ರಲ್ಲಿ ಎಕಾನಾಮಿ 7. 85 ಕಾಪಾಡಿಕೊಂಡಿದ್ದಾರೆ.

ಕೆಕೆಆರ್ ವಿರುದ್ಧ ಸಾಧನೆ ಮಾಡಿದ ಸಿರಾಜ್

ಕೆಕೆಆರ್ ವಿರುದ್ಧ ಸಾಧನೆ ಮಾಡಿದ ಸಿರಾಜ್

ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಮೇಡನ್ ಮಾಡಿದ ಮೊದಲ ಬೌಲರ್ ಮೊಹಮ್ಮದ್ ಸಿರಾಜ್(2-2-0-3), ಪವರ್ ಪ್ಲೇನಲ್ಲಿ ಸತತ ಎರಡು ಮೇಡನ್ ಓವರ್ ಎಸೆದ ಮೊದಲ ಬೌಲರ್ ಎನಿಸಿಕೊಂಡರು. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ವಿಕೆಟ್ ಕೀಪರ್ ಎಬಿ ಡಿ ವಿಲಿಯರ್ಸ್ ಅವರಿಗೆ ಕ್ಯಾಚಿತ್ತರೆ, ನಿತಿಶ್ ರಾಣಾ ಅವರ ಆಫ್ ಸ್ಟಂಪ್ ಉಡಾಯಿಸಿದ ಸಿರಾಜ್ ಮುಂದಿನ ಬೇಟೆ ಟಾಮ್ ಬಾಂಟನ್ ಆಗಿದ್ದರು.

"ಮೊದಲು ನನ್ನ ಈ ಪ್ರದರ್ಶನಕ್ಕೆ ನಾನು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡನ್ನು ನೀಡಿದ ವಿರಾಟ್‌ ಭಾಯಿಗೆ ಧನ್ಯವಾದಗಳು. ಹೊಸ ಚೆಂಡಿನೊಂದಿಗೆ ನಾನು ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ. ನಾನು ಆರಂಭದಲ್ಲೇ ಬೌಲಿಂಗ್ ಮಾಡುತ್ತೇನೆ ಎಂದು ನಾವು ಯೋಜಿಸಿರಲಿಲ್ಲ ರಾಣಾಗೆ ಎಸೆದ ಚೆಂಡು ತುಂಬಾ ಚೆನ್ನಾಗಿತ್ತು. ನಾನು ಯೋಜಿಸಿದ್ದನ್ನು ನಿಖರವಾಗಿ ಕಾರ್ಯಗತಗೊಳಿಸಿದೆ "ಎಂದು ಸಿರಾಜ್ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 22, 2020, 14:28 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X