ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಗತ್ತಿನ ಅತಿ ತೂಕದ ಈ 'ದೈತ್ಯ' ಕ್ರಿಕೆಟಿಗನ ಬಗ್ಗೆ ಗೊತ್ತೇ?

Who Is Rahkeem Conrwall Worlds Heaviest Cricketer From West Indies

ಕಿಂಗ್‌ಸ್ಟನ್, ಆಗಸ್ಟ್ 31: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯುತ್ತಿರುವ ಎರಡನೆಯ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ನೋಡುತ್ತಿರುವವರಿಗೆ ಮೈದಾನದಲ್ಲಿನ 'ದೈತ್ಯ' ಪ್ರತಿಭೆಯೊಂದು ಅಚ್ಚರಿ ಮೂಡಿಸಿರುತ್ತದೆ. ವೆಸ್ಟ್ ಇಂಡೀಸ್‌ನ ಜನರು ಸಾಮಾನ್ಯವಾಗಿ ಎತ್ತರದ ನಿಲುವು ಮತ್ತು ದೊಡ್ಡ ದೇಹ ಹೊಂದಿರುತ್ತಾರೆ. ಕ್ರಿಕೆಟ್ ಮುಂತಾದ ಕ್ರೀಡೆ ಬಯಸುವುದು ಹೆಚ್ಚು ಫಿಟ್ ಆದ ಆಟಗಾರರನ್ನು. ಅವರು ಫಿಟ್ ಆಗಿದ್ದರೆ ಮಾತ್ರ ಪ್ರತಿಭೆ ಪ್ರದರ್ಶಿಸಲು ಜಾಗ ಸಿಗುತ್ತದೆ.

ಆದರೆ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವ ರಕೀಮ್ ಕಾರ್ನ್‌ವಾಲ್ ಎಂಬ ಆಫ್ ಸ್ಪಿನ್ನರ್, ತೂಕ ಈಗ ಎಲ್ಲೆಡೆ ಚರ್ಚೆಗೆ ಒಳಗಾಗಿದೆ. ಎರಡನೆಯ ಟೆಸ್ಟ್‌ನಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಕಾರ್ನ್‌ವಾಲ್, ಭಾರತದ ಪ್ರಮುಖ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರ ಮಹತ್ವದ ವಿಕೆಟ್ ಪಡೆದು ಸಂಭ್ರಮದಲ್ಲಿ ಕುಪ್ಪಳಿಸಿದ್ದಾರೆ. ಜತೆಗೆ ಸ್ಲಿಪ್‌ನಲ್ಲಿ ಎರಡು ಕ್ಯಾಚ್‌ಗಳನ್ನೂ ಹಿಡಿದಿದ್ದಾರೆ.

ಭಾರತ vs ವಿಂಡೀಸ್, 2ನೇ ಟೆಸ್ಟ್, Live: ಪೂಜಾರ ವಿಕೆಟ್ ಮುರಿದ ದೈತ್ಯ!ಭಾರತ vs ವಿಂಡೀಸ್, 2ನೇ ಟೆಸ್ಟ್, Live: ಪೂಜಾರ ವಿಕೆಟ್ ಮುರಿದ ದೈತ್ಯ!

ಸಬೀನಾ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಕಾರ್ನ್‌ವಾಲ್, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ ಅತ್ಯಂತ ತೂಕದ ಅಟಗಾರ ಎಂಬ 'ಕೀರ್ತಿ'ಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್‌ಸ್ಟ್ರಾಂಗ್ ಅವರ ದಾಖಲೆ ಮುರಿದಿದ್ದಾರೆ. ಆರ್ಮ್‌ಸ್ಟ್ರಾಂಗ್ ಅವರು 133-139 ಕೆಜಿ ತೂಕವಿದ್ದರು. 2007ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಬರ್ಮುಡಾದ ಡ್ವೇಯ್ನ್ ಲೆವೆರೊಕ್ 127 ಕೆಜಿ ತೂಕವಿದ್ದರು.

6.4 ಅಡಿ ಎತ್ತರದ ದೇಹ

6.4 ಅಡಿ ಎತ್ತರದ ದೇಹ

1993ರ ಫೆ.1ರಂದು ಆಂಟಿಗುವಾದಲ್ಲಿ ಜನಿಸಿದ 26 ವರ್ಷದ ಕಾರ್ನ್‌ವಾಲ್ ಎತ್ತರ 6.4 ಅಡಿ. 2012ರಲ್ಲಿ ಪ್ರಥಮ ದರ್ಜೆ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. 2011ರಲ್ಲಿ 18 ವರ್ಷದವರಿದ್ದಾಗ ಲೀವರ್ಡ್ ಐಲ್ಯಾಂಡ್ ತಂಡದ ಪರ ಟ್ರಿನಿಡಾಡ್ & ಟೊಬಾಗೋ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು. ವಿಕೆಟ್ ಸಿಗದಿದ್ದರೂ 4 ಓವರ್‌ಗಳಲ್ಲಿ 21 ರನ್ ನೀಡಿ ನಿಯಂತ್ರಿಸಿದ್ದರು.

ನಾಲ್ಕು ದಿನದ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅವರು ಇದುವರೆಗೂ 55 ಪಂದ್ಯಗಳಲ್ಲಿ 23.9ರ ಸರಾಸರಿಯಲ್ಲಿ 260 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

2018-19ರಲ್ಲಿ ಅತ್ಯಧಿಕ ವಿಕೆಟ್

2018-19ರಲ್ಲಿ ಅತ್ಯಧಿಕ ವಿಕೆಟ್

ಈ ದಾಂಡಿಗ ಬ್ಯಾಟಿಂಗ್‌ನಲ್ಲಿಯೂ ಭರ್ಜರಿಯಾಗಿ ಬ್ಯಾಟ್ ಬೀಸಬಲ್ಲರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 24.43ರ ಸರಾಸರಿಯಲ್ಲಿ 2,224 ರನ್ ಗಳಿಸಿದ್ದಾರೆ. 2018-19ರಲ್ಲಿ ಅತ್ಯಧಿಕ ವಿಕೆಟ್ ಪಡೆದ ದೇಶಿ ಆಟಗಾರರ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಸ್ಥಾನ ಗಳಿಸಿದ್ದಾರೆ. 9 ಪಂದ್ಯಗಳಿಂದ 17.68ರ ಸರಾಸರಿಯಲ್ಲಿ ಅವರು 54 ವಿಕೆಟ್‌ಗಳನ್ನು ಕೆಡವಿದ್ದರು. 108 ರನ್‌ ನೀಡಿ ಎಂಟು ವಿಕೆಟ್ ಗಳಿಸಿರುವುದು ಅವರ ಸಾಧನೆ.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್

ಕೊಹ್ಲಿ, ರಹಾನೆ ವಿಕೆಟ್ ಪಡೆದಿದ್ದ ಕಾರ್ನ್‌ವಾಲ್

ಕೊಹ್ಲಿ, ರಹಾನೆ ವಿಕೆಟ್ ಪಡೆದಿದ್ದ ಕಾರ್ನ್‌ವಾಲ್

2015ರಲ್ಲಿ ಭಾರತ ತಂಡವು ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕಾರ್ನ್‌ವಾಲ್ ಅವರು ಐದು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಅದರಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರ ವಿಕೆಟ್‌ಗಳೂ ಸೇರಿದ್ದವು. ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 41 ರನ್ ಬಾರಿಸಿ, ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ್ದರು.

ವಿಂಡೀಸ್ ಎ ತಂಡದಲ್ಲಿ ಕಾಯಂ

ವಿಂಡೀಸ್ ಎ ತಂಡದಲ್ಲಿ ಕಾಯಂ

ಈ ರೀತಿ ಗಮನ ಸೆಳೆದ ಬಳಿಕ ಅವರು ವೆಸ್ಟ್ ಇಂಡೀಸ್ ಎ ತಂಡದಲ್ಲಿ ನಿರಂತರವಾಗಿ ಸ್ಥಾನ ಪಡೆದುಕೊಂಡಿದ್ದರು. ಶ್ರೀಲಂಕಾಕ್ಕೆ ಪ್ರವಾಸ ಮಾಡಿದ ಸಂದರ್ಭದಲ್ಲಿ 23 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಹಾಗೆಯೇ ಶ್ರೀಲಂಕಾ ತಂಡವು ವಿಂಡೀಸ್ ಪ್ರವಾಸ ಮಾಡಿದ್ದಾಗ 14 ವಿಕೆಟ್ ಕಬಳಿಸಿದ್ದರು. ಕಳೆದ ವರ್ಷ ತವರಿನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಸರಣಿಯಲ್ಲಿ 18.42ರ ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.

85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!

ತೂಕ ಇಳಿಸಲು ಹೊರಟ ಕಾರ್ನ್‌ವಾಲ್

ತೂಕ ಇಳಿಸಲು ಹೊರಟ ಕಾರ್ನ್‌ವಾಲ್

ಕಾರ್ನ್‌ವಾಲ್‌ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತೂಕ ಇಳಿಸಿಕೊಂಡರಷ್ಟೇ ಸುದೀರ್ಘ ಸಮಯ ಕ್ರೀಡಾ ಬದುಕಿನಲ್ಲಿ ಉಳಿಯಲು ಸಾಧ್ಯ ಎನ್ನುವುದು ಅವರಿಗೆ ತಿಳಿದಿದೆ. ಅದಕ್ಕಾಗಿ ಟ್ರಿನಿಡಾಡ್ ತರಬೇತುದಾರ ರೊನಾಲ್ಡ್ ರೋಜರ್ಸ್ ಅವರಿಂದ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.

''ನನ್ನ ಗಾತ್ರದ ಕಾರಣ ಎಷ್ಟ ಮಂದಿ ನನ್ನನ್ನು ಕಡೆಗಣಿಸುತ್ತಾರೆ. ನಾನು ಬಹು ಸಂಖ್ಯೆಯ ಜನರನ್ನು ಮೂರ್ಖರನ್ನಾಗಿಸಿದ್ದೇನೆ. ಅದರಲ್ಲಿಯೂ ಮುಖ್ಯವಾಗಿ ನನ್ನ ಎತ್ತರದಿಂದ ಬೌಲಿಂಗ್ ಮಾಡುವುದು ಮತ್ತು ಹೆಚ್ಚು ಸ್ಪಿನ್ ಮಾಡುವುದರಿಂದ ಅವರು ಪೇಚಿಗೆ ಬೀಳುತ್ತಾರೆ. ನನ್ನ ತೂಕವನ್ನು ಕಳೆದುಕೊಳ್ಳುವುದು ಎಲ್ಲದಕ್ಕಿಂತಲೂ ಮುಖ್ಯವಾಗಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದರೆ, ಈಗ ನಾನು ಆರೋಗ್ಯವಾಗಿದ್ದೇನೆ'' ಎಂದು ಅವರು ಹೇಳುತ್ತಾರೆ.

Story first published: Saturday, August 31, 2019, 15:40 [IST]
Other articles published on Aug 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X