ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ವಿಲಿಯಮ್ಸನ್ ಇಬ್ಬರಲ್ಲಿ ಅತ್ಯುತ್ತಮ ಟೆಸ್ಟ್ ಆಟಗಾರ ಯಾರು ಗೊತ್ತಾ? ಅಂಕಿಅಂಶಗಳು ಹೇಳಿದ್ದಿಷ್ಟು

Who is the better Test batsman between Virat Kohli and Kane Williamson? Take a look

ಟೆಸ್ಟ್ ಕ್ರಿಕೆಟ್, ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ಸಹ ಅತಿ ಕಠಿಣವಾದ ಕ್ರಿಕೆಟ್ ಮಾದರಿ. ಹೀಗಾಗಿಯೇ ಅನೇಕ ಯುವ ಆಟಗಾರರ ಆಟದ ಸಾಮರ್ಥ್ಯವನ್ನು ಟೆಸ್ಟ್ ಕ್ರಿಕೆಟ್ ಮೂಲಕ ಅಳೆಯಲಾಗುತ್ತದೆ. ಹೌದು ಯುವ ಆಟಗಾರ ಟೆಸ್ಟ್ ಕ್ರಿಕೆಟ್‍ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದರೆ ಸಾಕು ಆತನನ್ನು ಪ್ರತಿಭಾವಂತ ಆಟಗಾರ ಎಂದು ಪರಿಗಣಿಸಲಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ. ಇಂತಹ ಟೆಸ್ಟ್ ಕ್ರಿಕೆಟ್‍ನಲ್ಲಿ ಪ್ರಸ್ತುತ ತಲೆಮಾರಿನ ಆಟಗಾರರಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ಹಾಗೂ ಬಾಬರ್ ಅಜಮ್ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ.

ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!

ಈ ಆಟಗಾರರ ನಡುವೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹೋಲಿಕೆಗಳು ನಡೆಯುತ್ತಲೇ ಇರುತ್ತವೆ. ಯಾರು ಅತ್ಯುತ್ತಮ, ಯಾವ ದೇಶದ ಪಿಚ್‌ಗಳಲ್ಲಿ ಯಾರು ಉತ್ತಮ ಆಟಗಾರ, ಯಾವ ಆಟಗಾರ ಅತಿಹೆಚ್ಚು ರನ್ ಗಳಿಸಿದ್ದಾನೆ ಹೀಗೆ ಇನ್ನೂ ಮುಂತಾದ ಆಯಾಮಗಳಲ್ಲಿ ಈ ಆಟಗಾರರ ನಡುವೆ ಹೋಲಿಕೆಗಳನ್ನು ಆಗಾಗ ಮಾಡಲಾಗುತ್ತಾ ಇರುತ್ತದೆ. ಸದ್ಯಕ್ಕೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು ಇತ್ತಂಡಗಳ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ನಡುವೆ ಸಾಕಷ್ಟು ಹೋಲಿಕೆಗಳು ನಡೆಯುತ್ತಿವೆ.

ಕನ್ನಡ ಬರುತ್ತಾ ಎಂದು ಕೇಳಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಉತ್ತರ; ಕನ್ನಡಿಗರು ಫಿದಾಕನ್ನಡ ಬರುತ್ತಾ ಎಂದು ಕೇಳಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಉತ್ತರ; ಕನ್ನಡಿಗರು ಫಿದಾ

ಈ ಇಬ್ಬರೂ ಆಟಗಾರರ ಪೈಕಿ ಯಾರು ಉತ್ತಮ ಎಂಬ ಚರ್ಚೆಗಳು ನಡೆಯುತ್ತಿದ್ದು, ಯಾವ ಆಟಗಾರ ಯಾವ ಆಯಾಮದಲ್ಲಿ ಉತ್ತಮ ಎಂಬ ಮಾಹಿತಿ ಮುಂದೆ ಇದೆ ಓದಿ..

ಒಟ್ಟಾರೆ ಟೆಸ್ಟ್ ಕ್ರಿಕೆಟ್ ಅಂಕಿಅಂಶ

ಒಟ್ಟಾರೆ ಟೆಸ್ಟ್ ಕ್ರಿಕೆಟ್ ಅಂಕಿಅಂಶ

ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಇದುವರೆಗೂ 153 ಟೆಸ್ಟ್ ಇನ್ನಿಂಗ್ಸ್‌ ಆಡಿ 7490 ರನ್ ಗಳಿಸಿ 27 ಶತಕ, 25 ಅರ್ಧಶತಕ ಹಾಗೂ 7 ದ್ವಿಶತಕಗಳನ್ನು ಸಿಡಿಸಿದ್ದು ಅಜೇಯ 254 ರನ್ ಕೊಹ್ಲಿಯ ಅತ್ಯಧಿಕ ಟೆಸ್ಟ್ ರನ್ ಆಗಿದೆ.


ಕೇನ್ ವಿಲಿಯಮ್ಸನ್: ವಿಲಿಯಮ್ಸನ್ ಇದುವರೆಗೂ 144 ಟೆಸ್ಟ್ ಇನ್ನಿಂಗ್ಸ್ ಆಡಿ 7115 ರನ್ ಗಳಿಸಿ 24 ಶತಕ, 32 ಅರ್ಧಶತಕ ಹಾಗೂ 4 ದ್ವಿಶತಕಗಳನ್ನು ಸಿಡಿಸಿದ್ದು, 251 ವಿಲಿಯಮ್ಸನ್ ಸಿಡಿಸಿರುವ ಅತ್ಯಧಿಕ ಟೆಸ್ಟ್ ರನ್ ಆಗಿದೆ.

ನಾಲ್ಕನೇ ಇನ್ನಿಂಗ್ಸ್‌ನ ಅಂಕಿಅಂಶ

ನಾಲ್ಕನೇ ಇನ್ನಿಂಗ್ಸ್‌ನ ಅಂಕಿಅಂಶ

ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನ್ನಿಂಗ್ಸ್ ಆಟಗಾರನೋರ್ವನಿಗೆ ಬಲು ಸವಾಲಿನಿಂದ ಕೂಡಿರಲಿದೆ. ಟೆಸ್ಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಒಟ್ಟು 24 ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಟವಾಡಿದ್ದು 968 ರನ್ ಬಾರಿಸಿ 2 ಶತಕ ಹಾಗೂ 7 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅತ್ತ ಕೇನ್ ವಿಲಿಯಮ್ಸನ್ 19 ನಾಲ್ಕನೇ ಇನ್ನಿಂಗ್ಸ್‌ಗಳನ್ನಾಡಿದ್ದು 688 ರನ್ ಗಳಿಸಿ 3 ಶತಕ ಹಾಗೂ 3 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಸ್ವದೇಶಿ ಮತ್ತು ವಿದೇಶಿ ಪಿಚ್‌ಗಳಲ್ಲಿ ಇಬ್ಬರು ಆಟಗಾರರ ಅಂಕಿಅಂಶ

ಸ್ವದೇಶಿ ಮತ್ತು ವಿದೇಶಿ ಪಿಚ್‌ಗಳಲ್ಲಿ ಇಬ್ಬರು ಆಟಗಾರರ ಅಂಕಿಅಂಶ

ಸ್ವದೇಶದಲ್ಲಿನ ಟೆಸ್ಟ್ ಪಂದ್ಯಗಳ ಅಂಕಿ ಅಂಶ:

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ ನೆಲದಲ್ಲಿ 66 ಟೆಸ್ಟ್ ಇನ್ನಿಂಗ್ಸ್‌ ಆಡಿದ್ದು 3788 ರನ್ ಗಳಿಸಿ 13 ಶತಕ ಮತ್ತು 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ 66 ಇನ್ನಿಂಗ್ಸ್ ಆಡಿದ್ದು 3730 ರನ್ ಗಳಿಸಿ 13 ಶತಕ ಹಾಗೂ 12 ಅರ್ಧಶತಕಗಳನ್ನು ಕಲೆಹಾಕಿದ್ದಾರೆ.


ವಿದೇಶದಲ್ಲಿನ ಟೆಸ್ಟ್ ಪಂದ್ಯಗಳ ಅಂಕಿ ಅಂಶ:

ಅನ್ಯ ದೇಶಗಳ ಪಿಚ್‌ಗಳಲ್ಲಿ ವಿರಾಟ್ ಕೊಹ್ಲಿ 87 ಇನ್ನಿಂಗ್ಸ್‌ ಆಡಿ 3760 ರನ್ ಗಳಿಸಿ 14 ಶತಕ ಹಾಗೂ 13 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ 78 ಇನ್ನಿಂಗ್ಸ್ ಆಡಿ 3327 ರನ್ ಗಳಿಸಿ 11 ಶತಕ ಹಾಗೂ 14 ಅರ್ಧಶತಕಗಳನ್ನು ಸಿಡಿಸಿದ್ದಾರೆ.

'ಸೆನಾ' ದೇಶಗಳಲ್ಲಿ ಇಬ್ಬರ ಟೆಸ್ಟ್ ಅಂಕಿಅಂಶಗಳು

'ಸೆನಾ' ದೇಶಗಳಲ್ಲಿ ಇಬ್ಬರ ಟೆಸ್ಟ್ ಅಂಕಿಅಂಶಗಳು

'ಸೆನಾ' ದೇಶಗಳೆಂದರೆ ಸೌತ್ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳು ಎಂದರ್ಥ. ಈ ದೇಶಗಳಲ್ಲಿ ಒಳ್ಳೆಯ ಅಂಕಿ ಅಂಶಗಳನ್ನು ಹೊಂದಿರುವ ಆಟಗಾರನನ್ನು ಅತ್ಯುತ್ತಮ ಆಟಗಾರನೆಂದೇ ಪರಿಗಣಿಸಲಾಗುತ್ತದೆ. ಸೆನಾ ದೇಶಗಳಲ್ಲಿ ಕೇನ್ ವಿಲಿಯಮ್ಸನ್ 95 ಇನ್ನಿಂಗ್ಸ್ ಆಡಿ 4719 ರನ್ ಗಳಿಸಿ 16 ಶತಕ ಹಾಗೂ 21 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ 63 ಇನ್ನಿಂಗ್ಸ್ ಆಡಿ 2889 ರನ್ ಗಳಿಸಿ 11 ಶತಕ ಹಾಗೂ 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಕೇನ್ ವಿಲಿಯಮ್ಸನ್ ತವರು ನೆಲ ಕೂಡ ಈ ಸೆನಾ ದೇಶಗಳಲ್ಲಿ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಪಂದ್ಯ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಏಷ್ಯಾದಲ್ಲಿ ಇಬ್ಬರ ಟೆಸ್ಟ್ ಅಂಕಿಅಂಶಗಳು

ಏಷ್ಯಾದಲ್ಲಿ ಇಬ್ಬರ ಟೆಸ್ಟ್ ಅಂಕಿಅಂಶಗಳು

ಸೆನಾ ದೇಶಗಳಲ್ಲಿ ಕೇನ್ ವಿಲಿಯಮ್ಸನ್ ಅನುಕೂಲ ಹೊಂದಿದ್ದ ರೀತಿ ಏಷ್ಯಾದೇಶಗಳಲ್ಲಿ ಖಂಡಿತವಾಗಿಯೂ ವಿರಾಟ್ ಕೊಹ್ಲಿ ಹೆಚ್ಚಿನ ಅನುಕೂಲವನ್ನು ಹೊಂದಿದ್ದಾರೆ. ಕೊಹ್ಲಿ ಏಷ್ಯಾ ಖಂಡದ ಪಿಚ್‌ಗಳಲ್ಲಿ 77 ಇನ್ನಿಂಗ್ಸ್ ಆಡಿ 4138 ರನ್ ಗಳಿಸಿ 15 ಶತಕ ಹಾಗೂ 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ ಏಷ್ಯಾಖಂಡದ ಕ್ರೀಡಾಂಗಣಗಳಲ್ಲಿ 34 ಇನ್ನಿಂಗ್ಸ್ ಆಡಿ 1545 ರನ್ ಗಳಿಸಿ 5 ಶತಕ ಹಾಗೂ 7 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮೇಲಿನ ಎಲ್ಲಾ ವಿಭಾಗಗಳನ್ನೂ ಹೋಲಿಕೆ ಮಾಡಿ ನೋಡಿದ ನಂತರ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ಸಹ ಬಹುತೇಕ ಸಮಬಲವನ್ನು ಸಾಧಿಸಿದ್ದಾರೆ. ಆದರೆ ಟೆಸ್ಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಹಾಗೂ ಟೆಸ್ಟ್ ಪಂದ್ಯವೊಂದರ ಪ್ರಮುಖ ಘಟ್ಟವಾದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಲಿಯಮ್ಸನ್‌ಗಿಂತ ತುಸು ಹೆಚ್ಚೇ ಅಪಾಯಕಾರಿ ಎಂದು ಹೇಳಬಹುದು.

Story first published: Sunday, May 30, 2021, 13:58 [IST]
Other articles published on May 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X