ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ or ಜಡೇಜಾ: ಯಾರು ಅತ್ಯುತ್ತಮ ಫೀಲ್ಡರ್ ಚರ್ಚೆಗೆ ತಕ್ಷಣವೇ ಅಂತ್ಯ ಹಾಡಿದ ಕೊಹ್ಲಿ

Who’s the Better Fielder: Virat Kohli or Ravindra Jadeja? Here’s a Quick End to the Debate

ಟೀಮ್ ಇಂಡಿಯಾ ಹಾಲಿ ತಂಡದಲ್ಲಿ ಅತ್ಯುತ್ತಮ ಫೀಲ್ಡರ್ ಯಾರು? ಈ ಪ್ರಶ್ನೆಗೆ ಬಹುತೇಕರು ಒಂದೇ ಹೆಸರನ್ನು ಆಯ್ಕೆ ಮಾಡುತ್ತಾರೆ. ಅದು ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ. ಇದರ ಜೊತೆಗೆ ಟೀಮ್ ಇಂಡಿಯಾ ನಾಯಕನೂ ಅತ್ಯುತ್ತಮ ಫೀಲ್ಡರ್ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಹಿನ್ನಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಈ ಬಗ್ಗೆ ಪ್ರಶ್ನೆಯೊಂದನ್ನು ಪರೋಕ್ಷವಾಗಿ ವೀಕ್ಷಕರ ಮುಂದಿಟ್ಟಿತ್ತು. "ಒಂದೇ ಅವಕಾಶದಲ್ಲಿ ಚೆಂಡನ್ನು ವಿಕೆಟ್‌ಗೆ ಎಸೆದು ಜೀವನವನ್ನು ಉಳಿಸಿಕೊಳ್ಳುವ ಸಂದರ್ಭ ಬಂದಾಗ ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ? ಎಂದು ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಸೂಚಿಸಿತ್ತು. ಆದರೆ ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ.

ತನ್ನ ವಿಶ್ವದಾಖಲೆ ಮುರಿಯಬಲ್ಲ ಆಟಗಾರರ ಹೆಸರು ಹೇಳಿದ ಯುವರಾಜ್ ಸಿಂಗ್ತನ್ನ ವಿಶ್ವದಾಖಲೆ ಮುರಿಯಬಲ್ಲ ಆಟಗಾರರ ಹೆಸರು ಹೇಳಿದ ಯುವರಾಜ್ ಸಿಂಗ್

ಸ್ಟಾರ್ ಸ್ಪೋರ್ಟ್ಸ್ ಕೇಳಿದ ಈ ಪ್ರಶ್ನೆಗೆ ವಿರಾಟ್ ಕೊಹ್ಲಿಯೇ ಪ್ರತಿಕ್ರಿಯೆ ನೀಡಿದರು. ವಿರಾಟ್ ಕೊಹ್ಲಿ ನೀಡಿದ ಒಂದು ಪ್ರತಿಕ್ರಿಯೆ ಆ ಚರ್ಚೆ ಮುಂದುವರಿಯಲು ಅವಕಾಶವನ್ನೇ ನೀಡಲಿಲ್ಲ. ಒಂದೇ ವಾಕ್ಯದಲ್ಲಿ ವಿರಾಟ್ ಕೊಹ್ಲಿ ಈ ಪ್ರಶ್ನೆಗೆ ಉತ್ತರವನ್ನು ನೀಡಿ ಮುಗಿಸಿದ್ದರು.

ಇದಕ್ಕೆ ವಿರಾಟ್ ಕೊಹ್ಲಿ, "ಪ್ರತಿ ಬಾರಿಯೂ ಜಡ್ಡು, ಇಲ್ಲಿಗೆ ಈ ಚರ್ಚೆ ಮುಕ್ತಾಯವಾಯಿತು" ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಸ್ವತಃ ವಿರಾಟ್ ಕೊಹ್ಲಿಯೇ ತಮ್ಮ ಸಹ ಆಟಗಾರನನ್ನು ಶ್ರೇಷ್ಠ ಫೀಲ್ಡರ್ ಎಂದು ಒಪ್ಪಿಕೊಂಡು ಚರ್ಚೆಗೆ ಪೂರ್ಣ ವಿರಾಮವಿಡುವ ಪ್ರಯತ್ನ ಮಾಡಿದರು.

ಕಾಲೆಳೆದ ರೋಹಿತ್, ವಾರ್ನರ್‌ಗೆ ಬೊಂಬಾಟ್ ಉತ್ತರ ಕೊಟ್ಟ ಶಿಖರ್ ಧವನ್ಕಾಲೆಳೆದ ರೋಹಿತ್, ವಾರ್ನರ್‌ಗೆ ಬೊಂಬಾಟ್ ಉತ್ತರ ಕೊಟ್ಟ ಶಿಖರ್ ಧವನ್

ಆಲ್‌ರೌಂಡರ್ ಆಗಿರುವ ಜಡೇಜಾ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಸಾಕಷ್ಟು ಬಾರಿ ತಂಡಕ್ಕೆ ನೆರವಾಗಿದ್ದಾರೆ. ಪ್ರಸಕ್ತ ವಿಶ್ವ ಕ್ರಿಕೆಟ್‌ನಲ್ಲಿ ಆಡುತ್ತಿರುವ ಆಟಗಾರರಲ್ಲಿ ಜಡೇಜಾನೆ ಶ್ರೇಷ್ಠ ಫೀಲ್ಡರ್ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿದೆ. ಮತ್ತೊಂದೆಡೆ ನಾಯಕನಾಗಿ ಫೀಲ್ಡಿಂಗ್‌ನಲ್ಲೂ ವಿರಾಟ್ ಕೊಹ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಿರುವುದು ಇತರ ಆಟಗಾರರಿಗೂ ಸಹಜವಾಗಿಯೇ ಪ್ರೇರಣೆಯಾಗುತ್ತದೆ.

Story first published: Friday, May 15, 2020, 14:11 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X