ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!

who will be the captain of team india ofter virat kohli

ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಉಪನಾಯಕವಾಗಿ ರೋಹಿತ್ ಶರ್ಮಾ ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಯುವ ಮತ್ತು ಹಿರಿಯ ಆಟಗಾರರೊಂದಿಗೆ ವಿರಾಟ್ ಕೊಹ್ಲಿ ಹೊಂದಾಣಿಕೆಯಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆದರೆ ಕಾಲ ಮುಂದುವರಿಯುತ್ತಿದೆ. 31 ವರ್ಷದ ವಿರಾಟ್ ಕೊಹ್ಲಿ ಮುಂದಿನ ಕೆಲ ವರ್ಷಗಳ ಕಾಲ ಸಹಜವಾಗಿಯೇ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆದರೆ ಆನಂತರ ಟೀಮ್ ಇಂಡಿಯಾದ ನಾಯಕತ್ವ ಯಾರ ಹೆಗಲಿಗೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!

ಈ ಪ್ರಶ್ನೆಗೆ ಬಿಸಿಸಿಐ ಸೂಕ್ತ ಉತ್ತರಕ್ಕಾಗಿ ಹುಡುಕಾಟವನ್ನು ನಡೆಸಿದೆ. ಕೆಲ ತಯಾರಿಗಳೂ ಈ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂಬುದನ್ನೂ ಗಮನಿಸಬೇಕಿದೆ.

ವಿರಾಟ್ ನಂತರ ರೋಹಿತ್‌ಗಿಲ್ಲ ನಾಯಕತ್ವ

ವಿರಾಟ್ ನಂತರ ರೋಹಿತ್‌ಗಿಲ್ಲ ನಾಯಕತ್ವ

ಟೀಮ್ ಇಂಡಿಯಾ ನಾಯಕನಾಗಿರುವ ವಿರಾಟ್ ಕೊಹ್ಲಿಯ ಬಳಿಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಬಹುದು ಎಂಬುದು ನಿಮ್ಮ ಊಹೆಯಾಗಿದ್ದರೆ ಅದು ನಿಜವಾಗಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ರೋಹಿತ್ ವಯಸ್ಸು. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಯುವ ನಾಯಕನನ್ನೇ ಆಯ್ಕೆ ಮಾಡುವುದರಲ್ಲಿ ಅನುಮಾನವಿಲ್ಲ.

ಯುವ ಆಟಗಾರರ ಮೇಲೆ ಬಿಸಿಸಿಐ ಕಣ್ಣು

ಯುವ ಆಟಗಾರರ ಮೇಲೆ ಬಿಸಿಸಿಐ ಕಣ್ಣು

ಟೀಮ್ ಇಂಡಿಯಾದ ಯುವ ಆಟಗಾರರ ಮೇಲೆ ಬಿಸಿಸಿಐ ಈಗಾಗಲೆ ಕಣ್ಣಿಟ್ಟಿದೆ. ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲು ಈಗಾಗಲೇ ಯುವ ಕ್ರಿಕೆಟಿಗರನ್ನು ಸದ್ದಿಲ್ಲದೆ ಸಜ್ಜುಗೊಳಿಸುತ್ತಿದೆ. ಟೀಮ್ ಇಂಡಿಯಾವನ್ನು ಮುನ್ನಡೆಸಲು ಬೇಕಾಗುವ ತಯಾರಿಗಳನ್ನು ಯುವ ಆಟಗಾರರಿಗೆ ನೀಡುತ್ತಿದೆ.

ಇಬ್ಬರ ಮೇಲಿಟ್ಟಿದೆ ಮಂಡಳಿ ಕಣ್ಣು

ಇಬ್ಬರ ಮೇಲಿಟ್ಟಿದೆ ಮಂಡಳಿ ಕಣ್ಣು

ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿಕೊಳ್ಳಬಹುದಾದ ಇಬ್ಬರು ಆಟಗಾರರನ್ನು ಬಿಸಿಸಿಐ ಈಗಾಗಲೆ ಗುರುತಿಸಿದೆ. ಆ ಇಬ್ಬರು ಆಟಗಾರರ ಪ್ರದರ್ಶನ, ಒತ್ತಡದಲ್ಲಿ ಆಡುವ ರೀತಿ, ಅವರಲ್ಲಿರುವ ನಾಯಕತ್ವದ ಗುಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಬಿಸಿಸಿಐ.

ಕೆಎಲ್ ರಾಹುಲ್‌ಗಿದೆ ಚಿನ್ನದಂತಾ ಅವಕಾಶ

ಕೆಎಲ್ ರಾಹುಲ್‌ಗಿದೆ ಚಿನ್ನದಂತಾ ಅವಕಾಶ

ಭವಿಷ್ಯದಲ್ಲಿ ಟೀಮ್ ಇಂಡಿಯಾದ ನಾಯಕನಾಗುವ ಚಿನ್ನದಂತಾ ಅವಕಾಶ ರಾಹುಲ್ ಮುಂದಿದೆ. ಶಾಂತ ಸ್ವಭಾವದ ಕೆಎಲ್ ರಾಹುಲ್ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ವಿಕೆಟ್ ಕೀಪಿಂಗ್ ಕೂಡ ನಡೆಸುತ್ತಿರುವ ರಾಹುಲ್‌ಗೆ ಟೀಮ್ ಇಂಡಿಯಾ ಪಟ್ಟವಾದರೆ ಅಚ್ಚರಿಯಿಲ್ಲ.

ನ್ಯೂಜಿಲೆಂಡ್ ವಿರುದ್ಧ ನಾಯಕನಾಗಿದ್ದ ರಾಹುಲ್

ನ್ಯೂಜಿಲೆಂಡ್ ವಿರುದ್ಧ ನಾಯಕನಾಗಿದ್ದ ರಾಹುಲ್

ನ್ಯೂಜಿಲೆಂಡ್ ವಿರುದ್ದದ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್‌ಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅನಿರೀಕ್ಷಿತ ಅವಕಾಶವೊಂದು ಬಂದಿತ್ತು. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನಾಗಿದ್ದರು. ಆದರೆ ಪಂದ್ಯದ ಮಧ್ಯೆ ಶರ್ಮಾ ಗಾಯಗೊಂಡು ಹೊರ ಹೋದರು. ಬಳಿಕ ಭಾರತ ತಂಡವನ್ನು ಕೀಪರ್ ರಾಹುಲ್ ಮುನ್ನಡೆಸಿದ್ದರು. ಈ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು.

ಶ್ರೇಯಸ್ ಅಯ್ಯರ್ ಮತ್ತೊಂದು ಆಯ್ಕೆ

ಶ್ರೇಯಸ್ ಅಯ್ಯರ್ ಮತ್ತೊಂದು ಆಯ್ಕೆ

ಬಿಸಿಸಿಐ ಕಣ್ಣಿಟ್ಟಿರುವ ಮತ್ತೋರ್ವ ಯುವ ಆಟಗಾರನೆಂದರೆ ಅದು ಮಧ್ಯಮ ಕ್ರಮಾಂಕದಲ್ಲಿ ಮಿಂಚುತ್ತಿರುವ ಶ್ರೇಯಸ್ ಅಯ್ಯರ್. ವಯಸ್ಸು, ಮಾನಸಿಕ ಸ್ಥಿರತೆ, ನಾಯಕತ್ವ ಗುಣಗಳನ್ನು ಅಯ್ಯರ್ ಹಲವು ಸಂದರ್ಭಗಳಲ್ಲಿ ಪ್ರದರ್ಶಿಸಿದ್ದಾರೆ ಇದು ನಾಯಕನಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಐಪಿಎಲ್‌ನಲ್ಲಿ ನಾಯಕನಾಗಿರುವ ಅಯ್ಯರ್

ಐಪಿಎಲ್‌ನಲ್ಲಿ ನಾಯಕನಾಗಿರುವ ಅಯ್ಯರ್

ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಯುವ ಆಟಗಾರರನ್ನೇ ಹೊಂದಿರುವ ಈ ತಂಡದಲ್ಲಿ ನಾಯಕನಾಗಿ ಐಯ್ಯರ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ. ಇದು ಬಿಸಿಸಿಐ ಮುಖ್ಯಸ್ಥರ ಗಮನವನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ.

ಭಾರತ 'ಎ' ತಂಡಕ್ಕೂ ಅಯ್ಯರ್ ನಾಯಕ

ಭಾರತ 'ಎ' ತಂಡಕ್ಕೂ ಅಯ್ಯರ್ ನಾಯಕ

ಭಾರತ ಎ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಈಗಾಗಲೆ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಈ ಜವಾಬ್ಧಾರಿಯನ್ನು ಬಿಸಿಸಿಐ ಭವಿಷ್ಯ ದೃಷ್ಟಿಯಿಂದಲೇ ನೀಡಿತ್ತು ಎಂಬುದನ್ನು ಗಮನಿಸಬೇಕು. ವಯಸ್ಸು, ಆಟದಲ್ಲಿ ತೀರಿಸುವ ಪಕ್ವತೆ ನಾಯಕತ್ವದ ರೇಸ್‌ನಲ್ಲಿ ಅಯ್ಯರ್‌ ಟೀಮ್ ಇಂಡಿಯಾ ನಾಯಕತ್ವದ ರೇಸ್‌ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.

ಕೊಹ್ಲಿಗೆ ಮಾರ್ಗದರ್ಶಕ ಧೋನಿ

ಕೊಹ್ಲಿಗೆ ಮಾರ್ಗದರ್ಶಕ ಧೋನಿ

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಮಾರ್ಗದರ್ಶಕರಾಗಿದ್ದರು. ವಿರಾಟ್ ನಾಯಕನಾಗುವ ಮುನ್ನ ಅದಕ್ಕೆ ಬೇಕಾದ ತಯಾರಿಯನ್ನು ಧೋನಿ ವಿರಾಟ್‌ಗೆ ಮಾಡಿದ್ದರು. ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕವೂ ಕೊಹ್ಲಿಗೆ ಬೆನ್ನೆಲುಬಾಗಿದ್ದರು. ಈಗ ವಿರಾಟ್‌ ಕೊಹ್ಲಿಯ ಮುಂದೆಯೂ ರಾಹುಲ್ ಹಾಗೂ ಐಯ್ಯರ್ ಅವರನ್ನು ತಯಾರುಗೊಳಿಸುವ ಜವಾಬ್ಧಾರಿಯಿದೆ.

Story first published: Wednesday, March 25, 2020, 19:28 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X