ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್ ರವಿಶಾಸ್ತ್ರಿ ಸ್ಥಾನ ತುಂಬುವವರು ಯಾರು?: ಸೆಹ್ವಾಗ್ ಸಹಿತ ರೇಸ್‌ನಲ್ಲಿದ್ದಾರೆ 3 ಅಭ್ಯರ್ಥಿಗಳು

Who will be the Team India Head Coach: 3 possible successors to Ravi shastri

ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಈಗ ಅತ್ಯುತ್ತಮ ಸ್ಥಾನದಲ್ಲಿದೆ. ಎಲ್ಲಾ ತಂಡಗಳು ಕೂಡ ಭಾರತ ತಂಡವನ್ನು ಸೋಲಿಸಬೇಕೆಂಬ ಗುರಿಯನ್ನಿಟ್ಟುಕೊಂಡು ಸ್ಪರ್ಧೆಗಿಳಿಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಟೀಮ್ ಇಂಡಿಯಾ ಸಾಧಿಸಿದ ಮೈಲಿಗಲ್ಲುಗಳು ಹುಬ್ಬೇರಿಸುವಂತಿದೆ. ಟೀಮ್ ಇಂಡಿಯಾದ ಈ ಸಾಧನೆಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಕೊಡುಗೆ ಅತ್ಯಂತ ಪ್ರಮುಖವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಇಬ್ಬರ ನಡುವಿನ ಹೊಂದಾಣಿಕೆಯೂ ಅದ್ಭುತವಾಗಿರುವ ಕಾರಣದಿಂದಾಗಿ ತಂಡದೊಳಗೆ ಆಟಗಾರರ ನಡುವಿನ ವಾತಾವರಣವೂ ಅಷ್ಟೇ ಉತ್ತಮವಾಗಿದೆ.

2019ರಲ್ಲಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಿಂದ ಹಿಡಿದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರುವವರೆಗೆ ಹಾಗೂ ಆಸ್ಟ್ರೇಲಿಯಾದ ನೆಲದಲ್ಲಿ ಸಾಧಿಸಿದ ಅಭೂತವೂರ್ವ ಗೆಲುವುಗಳು ಕೋಚ್ ರವಿ ಶಾಸ್ತ್ರಿ ಮೇಲೆ ಬಿಸಿಸಿಐ ಹಾಗೂ ಅಭಿಮಾನಿಗಳು ಇಟ್ಟ ನಂಬಿಕೆಯನ್ನು ಹೆಚ್ಚಿಸಿದೆ.

ಆದರೆ ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಹುದ್ದೆಯ ಅವಧಿ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪಾಲಿಗೆ ಅಂತಿಮ ಟೂರ್ನಿಯಾಗಿರಲಿದೆ. ಹೀಗಾಗಿ ರವಿ ಶಾಸ್ತ್ರಿ ಸ್ಥಾನಕ್ಕೆ ಸೂಕ್ತವಾದ ಉತ್ತರಾಧಿಕಾರಿಯ ಹುಟುಕಾಟದಲ್ಲಿ ಮಗ್ನವಾಗಿದೆ ಬಿಸಿಸಿಐ.

ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋ

ಹಾಗಾದರೆ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಸೂಕ್ತವೆನಿಸಬಲ್ಲ ಅಭ್ಯರ್ಥಿಗಳು ಯಾರ್ಯಾರು? ಮುಂದೆ ಓದಿ..

ವಿಕ್ರಂ ರಾಥೋರ್

ವಿಕ್ರಂ ರಾಥೋರ್

ವಿಕ್ರಂ ರಾಥೋರ್ ಸದ್ಯ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಬಳಗದಲ್ಲಿ ತಂಡದೊಂದಿಗೆ ಸಾಕಷ್ಟು ಕಾಲದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ತಂಡದ ಕಾರ್ಯಾಚರಣೆಯ ಬಗ್ಗೆ ಸಂಪೂರ್ಣ ಅರಿವು ಅವರಿಗೆ. ಹೀಗಾಗಿ ಮುಖ್ಯ ಕೋಚ್ ಆದಾಗ ತಂಡದೊಂದಿಗಿನ ಹೊಂದಾಣಿಕೆಯೂ ಸುಲಭ ಸಾಧ್ಯವಾಗುತ್ತದೆ. ಸದ್ಯ ಮೂಲಗಳ ಮಾಹಿತಿ ಪ್ರಕಾರ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ವಿಕ್ರಂ ರಾಥೋರ್ ಪ್ರಮುಖ ಹೆಸರಾಗಿ ಕೇಳಿ ಬರುತ್ತಿದೆ.

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಭಾರತೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಕೇಳಿ ಬರುತ್ತಿರುವ ಮತ್ತೊಂದು ಪ್ರಮುಖ ಹೆಸರು. ತಮ್ಮದೇ ಶೈಲಿಯಲ್ಲಿ ಯೋಚನೆಯನ್ನು ಮಾಡುವುದರಲ್ಲಿ ವಿರೇಂದ್ರ ಸೆಹ್ವಾಗ್ ನಿಸ್ಸೀಮರು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಪಂಜಾಬ್ ಫ್ರಾಂಚೈಸಿಯ ಭಾಗವಾಗಿದ್ದ ಸೆಹ್ವಾಗ್ ಕೋಚ್ ಹುದ್ದೆಯ ಮೇಲೆ ತಮಗಿದ್ದ ಒಲವನ್ನು ತೋರಿಸಿಕೊಂಡಿದ್ದರು. ಈಗ ಭಾರತೀಯ ಕ್ರಿಕೆಟ್ ತಂಡಕ್ಕೆ ವಿರೇಂದ್ರ ಸೆಹ್ವಾಗ್ ಮುಖ್ಯ ಕೋಚ್ ಆಗಿ ಆಯ್ಕಯಾದರೆ ತಂಡಕ್ಕೆ ಹೊಸತನ ತರುವುದರಲ್ಲಿ ಅನುಮಾನವಿಲ್ಲ. ಸೆಹ್ವಾಗ್ ಅವರು ವಿಶೇಷವಾಗಿ ಯೋಚಿಸುವ ರೀತಿಯಿಂದಾಗಿ ಟೀಮ್ ಇಂಡಿಯಾದ ಪ್ರದರ್ಶನ ಮತ್ತೊಂದು ಹತ್ತಕ್ಕೇರುವ ನಿರೀಕ್ಷೆಯಿಟ್ಟುಕೊಳ್ಳಬಹುದು.

ಮೈದಾನದಲ್ಲಿ Ganguly ಹಾಗೂ Virat ನಡುವೆ ಗುಸು ಗುಸು ಮಾತು | Oneindia Kannada
ಲಾಲ್‌ಚಂದ್ ರಜಪೂತ್

ಲಾಲ್‌ಚಂದ್ ರಜಪೂತ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರನೂ ಆಗಿರುವ ಲಾಲ್‌ಚಂದ್ ರಜಪೂತ್ ಟೀಮ್ ಇಂಡಿಯಾದ ಕೋಚ್ ಹುದ್ದೆಯ ರೇಸ್‌ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಪ್ರಮುಖ ಹೆಸರು. ಈಗಾಗಲೇ ಹಲವು ಬಾರಿ ತಂಡದ ಮ್ಯಾನೇಜರ್ ಆಗಿ ಕರ್ತವ್ಯವನ್ನು ನಿಭಾಯಿಸಿದ ಅನುಭವ ರಜಪೂತ್‌ಗೆ ಇದೆ. ಹೀಗಾಗಿ ತಂಡದ ಕಾರ್ಯಾಚರಣೆಯ ಬಗ್ಗೆ ರಜಪೂತ್‌ಗೆ ಉತ್ತಮ ಅರಿವಿದೆ. ಕೋಚ್ ಆಗಿ ಆಯ್ಕೆಯಾದರೆ ಅದು ಉತ್ತಮ ಆಯ್ಕೆಯೂ ಆಗಲಿದೆ. 1985-87ರ ಅವಧಿಯಲ್ಲಿ ಲಾಲ್‌ಚಂದ್ ರಜಪೂತ್ ಭಾರತ ತಂಡದ ಪರವಾಗಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಹಾಗೂ ನಾಲ್ಕು ಏಕದಿನ ಪಂದ್ಯಗಳಲ್ಲಿ ಆಡಿದ್ದರು. 59ರ ಹರೆಯದ ರಜಪೂತ್‌ಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಯಿದೆ. 2007ರಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ತಂಡದ ಮ್ಯಾನೇಜರ್ ಆಗಿದ್ದರು ಈ ಲಾಲ್‌ಚಂದ್ ರಜಪೂತ್. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾಗೂ ಜಿಂಬಾಬ್ವೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವವೂ ಇವರಿಗಿದೆ.

Story first published: Monday, August 23, 2021, 15:58 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X