ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ, ರೋಹಿತ್‌ ಏಕೆ ಆಡುತ್ತಿಲ್ಲ?

ಕಾನ್ಪುರದ ಗ್ರೀನ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್‌ ಮಾಡುತ್ತಿದೆ. ಪ್ರಮುಖ ಸ್ಟಾರ್‌ ಆಟಗಾರರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನ ಮುನ್ನಡೆಸುತ್ತಿದ್ದಾರೆ. ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ತಂಡದಲ್ಲಿಲ್ಲ.

ಟೀಂ ಇಂಡಿಯಾದ ಪ್ರಮುಖ ಆಟಗಾರರ ಆಧಾರಗಳಿಲ್ಲದೆ ಭಾರತ ಇಂದು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಎದುರಿಸುತ್ತಿದೆ. ಕಿವೀಸ್ ಬೌಲರ್‌ಗಳನ್ನ ಎದುರಿಸಲು ತಡಬಡಾಯಿಸಿ ಎರಡು ಸೆಷನ್‌ಗಳಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಹೀಗಿರುವಾಗ ತಂಡವು ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ.

ಇಬ್ಬರೂ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೆಚ್ಚು ಪಂದ್ಯಗಳನ್ನ ವಿಶ್ರಾಂತಿಯಿಲ್ಲದೆ ಆಡುತ್ತಿರುವುದರಿಂದ ಇತ್ತೀಚೆಗಷ್ಟೇ ಕೊಹ್ಲಿ ಟಿ20 ಸರಣಿಯಲ್ಲಿ ಆಡಲಿಲ್ಲ. ಜೊತೆಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡದೆ ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವಾಂಖೆಡೆ ಮೈದಾನದಲ್ಲಿ ತಯಾರಿ ನಡೆಸುತ್ತಿದ್ದಾರೆ.

ಕೊಹ್ಲಿ ಅಷ್ಟೇ ಅಲ್ಲದೆ, ಹಿಟ್‌ ಮ್ಯಾನ್ ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಬಯಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ದೂರ ಉಳಿದರು. ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನೆಡೆಸಿದ್ದ ರೋಹಿತ್ ದ್ವಿತೀಯ ಟೆಸ್ಟ್‌ನಲ್ಲೂ ಭಾಗಿಯಾವುದಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮರಳಲಿರುವ ರೋಹಿತ್

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮರಳಲಿರುವ ರೋಹಿತ್

ಎರಡು ಟೆಸ್ಟ್ ಪಂದ್ಯಗಳನ್ನ ಮಿಸ್ ಮಾಡಿಕೊಂಡಿರುವ ರೋಹಿತ್ ಶರ್ಮಾ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದಲ್ಲಿ ಟೀಂ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ರೋಹಿತ್ ದೀರ್ಘಾವಧಿ ಫಾರ್ಮೆಟ್‌ನಿಂದ ಹೊರಗುಳಿದ್ರು.

ಇನ್ನು ರೋಹಿತ್ ಅಷ್ಟೇ ಅಲ್ಲದೆ ಸ್ನಾಯು ಸೆಳೆತದಿಂದ ಕೆ.ಎಲ್ ರಾಹುಲ್ ಕೂಡ ಟೆಸ್ಟ್ ಸರಣಿಯಿಂದ ಹೊರಬಂದಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಆಗಮಿಸಿ ಫಿಟ್ ಆಗುತ್ತಿದ್ದಾರೆ.

ಪ್ರಮುಖ ವೇಗಿಗಳಿಗೂ ರೆಸ್ಟ್‌

ಪ್ರಮುಖ ವೇಗಿಗಳಿಗೂ ರೆಸ್ಟ್‌

ಟೆಸ್ಟ್ ಸರಣಿಯಲ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಕೂಡ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಕಳೆದ 12 ತಿಂಗಳುಗಳಲ್ಲಿ ಭಾರತದ ವೇಗದ ಬೌಲಿಂಗ್ ಜವಾಬ್ದಾರಿಯನ್ನ ಹೊತ್ತಿದ್ದರು. ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಕೂಡ ಅರ್ಹವಾದ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಅನುಭವಿ ಕೀಪರ್ ವೃದ್ಧಿಮಾನ್ ಸಹಾ ತಂಡದಲ್ಲಿ ಸ್ಥಾನ ಪಡೆದ್ರು.

ಕೊಹ್ಲಿ, ರೋಹಿತ್‌ ಶರ್ಮಾ ಸ್ಥಾನದಲ್ಲಿ ಯಾರಿಗೆ ಅವಕಾಶ?

ಕೊಹ್ಲಿ, ರೋಹಿತ್‌ ಶರ್ಮಾ ಸ್ಥಾನದಲ್ಲಿ ಯಾರಿಗೆ ಅವಕಾಶ?

ಮೊದಲ ಟೆಸ್ಟ್‌ನಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಕೊಹ್ಲಿ ಜವಾಬ್ದಾರಿಯನ್ನ ಪಡೆದುಕೊಂಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಡರ್‌ ನಾಲ್ಕನೇ ಕ್ರಮಾಂಕದಲ್ಲಿ ಇಂದು ಬ್ಯಾಟಿಂಗ್‌ ಮಾಡಿದ್ರು. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತವು ಡೆಲ್ಲಿ ಕ್ಯಾಪಿಟಲ್ಸ್‌ನ ಮಾಜಿ ನಾಯಕ ಶ್ರೇಯಸ್ ಅಯ್ಯರ್‌ಗೆ ಚೊಚ್ಚಲ ಪಂದ್ಯದ ಅವಕಾಶ ಒದಗಿಸಿತು.

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಸರಣಿಯಿಂದ ಮಿಸ್ ಆಗಿರುವುದರಿಂದ ಟೀಮ್ ಇಂಡಿಯಾ ಹೊಸ ಓಪನಿಂಗ್ ಜೋಡಿ ಮಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್‌ರನ್ನ ಹೊಂದಿದೆ.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ೀಂ‌ ಇಂಡಿಯಾ ಆಟಗಾರರ ಮುಂದೆ ಸ್ಪಿನ್ ಕೈಚಳಕ ತೋರಿದ ರಾಹುಲ್ ದ್ರಾವಿಡ್ | Oneindia Kannada
ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡ ಭಾರತ

ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡ ಭಾರತ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಎರಡು ಸೆಷನ್‌ಗಳಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಶುಭ್ಮನ್ ಗಿಲ್ ಅರ್ಧಶತಕಗಳಿಸಿ ವಿಕೆಟ್ ಒಪ್ಪಿಸಿದ್ರೆ, ಮಯಾಂಕ್ ಮೊದಲ ಸೆಷನ್‌ನಲ್ಲೇ 13ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು.

ಭಾರತವು ಟೀ ವಿರಾಮದ ಹೊತ್ತಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. ಭಾರತ ಪರ ಮಯಾಂಕ್ 13, ಶುಭ್ಮನ್ ಗಿಲ್ 52, ಚೇತೇಶ್ವರ ಪೂಜಾರ 26, ಅಜಿಂಕ್ಯ ರಹಾನೆ 35 ರನ್‌ಗಳಿಸಿ ಔಟಾದ್ರು. ಕಿವೀಸ್ ಪರ ಕೈಲ್ ಜೇಮಿಸನ್ ಮೂರು ಪ್ರಮುಖ ವಿಕೆಟ್ ಪಡೆದು ಮೇಲುಗೈ ಸಾಧಿಸಿದ್ರು.

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 14:35 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X