ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!

Why CSK win and RCB lose: Rahul Dravid points out big differences

ಬೆಂಗಳೂರು, ಮಾರ್ಚ್ 25: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಐಪಿಎಲ್‌ನಲ್ಲಿ ಕಪ್ಪೇ ಗೆಲ್ಲದೆ ನಿರಾಶೆ ಮೂಡಿಸಿರುವ ಐಪಿಎಲ್ ತಂಡಗಳಲ್ಲಿ ಆರ್‌ಸಿಬಿ ಕೂಡ ಇದೆ. ಆರ್‌ಸಿಬಿ ನೀರಸ ಪ್ರದರ್ಶನಕ್ಕೆ ಒಂದಿಷ್ಟು ಕಾರಣಗಳೂ ಇವೆ. ತಂಡ ತಿದ್ದಿಕೊಳ್ಳಬೇಕಾದ ಸಂಗತಿಗಳೂ ಸಾಕಷ್ಟಿವೆ. ಆರ್‌ಸಿಬಿ ಎಡವುತ್ತಿರುವುದೆಲ್ಲಿ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ವಿವರಿಸಿದ್ದಾರೆ.

ಕ್ರೀಡಾಲೋಕದಲ್ಲೊಂದು ಕರಾಳ ಅಧ್ಯಾಯ: ಪ್ರೇಮಿಗಳ ದಿನವೇ ಪ್ರೇಯಸಿಗೆ ಸಾವಿನ ಗಿಫ್ಟ್‌ ನೀಡಿದ್ದ ಬ್ಲೇಡ್ ರನ್ನರ್ಕ್ರೀಡಾಲೋಕದಲ್ಲೊಂದು ಕರಾಳ ಅಧ್ಯಾಯ: ಪ್ರೇಮಿಗಳ ದಿನವೇ ಪ್ರೇಯಸಿಗೆ ಸಾವಿನ ಗಿಫ್ಟ್‌ ನೀಡಿದ್ದ ಬ್ಲೇಡ್ ರನ್ನರ್

ಹಾಗೆ ನೋಡಿದರೆ ಐಪಿಎಲ್ ಯಾವತ್ತಿಗೂ ಬಲಿಷ್ಠ ಆಟಗಾರರನ್ನೊಳಗೊಂಡ ತಂಡವೆ. ಆದರೆ ಉಳಿದ ತಂಡಗಳು ಪಾಲಿಸುವ ಅನೇಕ ಸಂಗತಿಗಳನ್ನು ಆರ್‌ಸಿಬಿ ಕಡೆಗಣಿಸುತ್ತಿದೆ. ತಂಡವನ್ನು ಸಮತೋಲನದಲ್ಲಿ ನಿಭಾಯಿಸುವಲ್ಲಿ ಆರ್‌ಸಿಬಿ ವೈಫಲ್ಯ ಅನುಭವಿಸುತ್ತಿದೆ ಎಂದು ದ್ರಾವಿಡ್ ಅಭಿಪ್ರಾಯಿಸಿದ್ದಾರೆ.

ಭಾರತದ ಟಾಪ್ ಫೀಲ್ಡರ್‌ಗಳ ಹೆಸರಿಸಿದ ಮಾಜಿ ಆಟಗಾರ ಹರ್ಷ ಭೋಗ್ಲೆಭಾರತದ ಟಾಪ್ ಫೀಲ್ಡರ್‌ಗಳ ಹೆಸರಿಸಿದ ಮಾಜಿ ಆಟಗಾರ ಹರ್ಷ ಭೋಗ್ಲೆ

ಸಿಎಸ್‌ಕೆ ಗೆಲುವಿಗೆ, ಆರ್‌ಸಿಬಿ ಸೋಲಿಗೆ ಇಲ್ಲಿ ದ್ರಾವಿಡ್ ಕೆಲವೊಂದಿಷ್ಟು ಕಾರಣಗಳನ್ನು ವಿವರಿಸಿದ್ದಾರೆ. ಈ ಕಾರಣಗಳೆಲ್ಲ ನೋಡುವಾಗ ನಿಜವೂ ಅನ್ನಿಸುತ್ತೆ.

ಚೆನ್ನೈ ಗೆಲುವಿನ ಗುಟ್ಟು

ಚೆನ್ನೈ ಗೆಲುವಿನ ಗುಟ್ಟು

ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿಗೆ ಮುಖ್ಯ ಕಾರಣ ಆ ಫ್ರಾಂಚೈಸಿ ಮಾಲಕರಾದ ಇಂಡಿಯಾ ಸಿಮೆಂಟ್. ಅವರಿಗೆ ಕ್ರಿಕೆಟ್ ತಂಡವೊಂದನ್ನು ಹೇಗೆ ಮುನ್ನಡೆಸಬೇಕೆಂದು ಗೊತ್ತಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಕ್ರಿಕೆಟ್‌ ತಂಡ ನಿಭಾಯಿಸುವ ಬಗೆ ಅವರಿಗೆ ಗೊತ್ತಿತ್ತು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. 'ಚೆನ್ನೈ ಬಹುಶಃ ಇತರ ಫ್ರಾಂಚೈಸಿಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ಏಕೆಂದರೆ ಅವರ ಮಾಲಕರಾದ ಇಂಡಿಯಾ ಸಿಮೆಂಟ್ಸ್ ಈಗಾಗಲೇ ಕ್ರಿಕೆಟ್ ತಂಡಗಳನ್ನು ನಡೆಸುವ ವ್ಯವಹಾರದಲ್ಲಿದ್ದರು,' ಎಂದು ದ್ರಾವಿಡ್ ವಿವರಿಸಿದ್ದಾರೆ.

ಅತ್ಯಂತ ವ್ಯವಸ್ಥಿತ ತಂಡ

ಅತ್ಯಂತ ವ್ಯವಸ್ಥಿತ ತಂಡ

'ಈಗಿರುವ ತಂಡಗಳಲ್ಲಿ ಸಿಎಸ್‌ಕೆ ಅತ್ಯಂತ ಉನ್ನತ ತಂಡವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ ಅತ್ಯಂತ ವ್ಯವಸ್ಥಿತ ತಂಡ. ಇದೇ ಕಾರಣಕ್ಕೆ ಆ ತಂಡಕ್ಕೆ ಉಳಿದ ತಂಡಕ್ಕಿರುವ ಅಭಿಮಾನಿಗಳಿಗಿಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ,' ಎಂದು ರಾಹುಲ್ ನುಡಿಸಿದ್ದಾರೆ.

ಆರ್‌ಸಿಬಿಯ ಯೋಚನೆ ಸರಿಯಿಲ್ಲ

ಆರ್‌ಸಿಬಿಯ ಯೋಚನೆ ಸರಿಯಿಲ್ಲ

ಆರ್‌ಸಿಬಿ ಮತ್ತು ಸಿಎಸ್‌ಕೆ ಮಧ್ಯೆ ಹೋಲಿಕೆ ಮಾಡಿ ಮಾತನಾಡಿದ ದ್ರಾವಿಡ್, ತಂಡವನ್ನು ಆರಿಸುವಾಗ ಆರ್‌ಸಿಬಿ ಯೋಚನೆ ದುರ್ಬಲವಾಗಿರುತ್ತದೆ ಎಂದಿದ್ದಾರೆ. 'ಬೆಂಗಳೂರು ಯಾವತ್ತಿಯೂ ತಮ್ಮ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಸಮತೋಲನಗೊಳಿಸಿಲ್ಲ. ಅವರ ಹರಾಜು ಮತ್ತು ಆಯ್ಕೆಯ ಯೋಚನೆ ಬಹಳ ಬಡವಾಗಿರುತ್ತದೆ ಎಂದು ನನಗನ್ನಿಸುತ್ತಿದೆ,' ಎಂದು ಗ್ರೇಟ್ ವಾಲ್ ಹೇಳಿಕೊಂಡಿದ್ದಾರೆ.

ದ್ರಾವಿಡ್ ಕೊಟ್ಟ ಉದಾಹರಣೆ

ದ್ರಾವಿಡ್ ಕೊಟ್ಟ ಉದಾಹರಣೆ

ತಂಡವನ್ನು ಉತ್ತಮ ರೀತಿಯಲ್ಲಿ ಸಮತೋಲನಗೊಳಿಸುವಲ್ಲಿ ಆರ್‌ಸಿಬಿ ಸೋಲುತ್ತಿರುವುದಕ್ಕೆ ದ್ರಾವಿಡ್ ಉದಾಹಣೆಯನ್ನೂ ನೀಡಿದ್ದಾರೆ. 'ಮಿಚೆಲ್ ಸ್ಟಾರ್ಕ್‌ನಂತ ಬೌಲರ್, ತಂಡ ಸೇರಿಕೊಳ್ಳಲು ಸಮೀಪದಲ್ಲಿದ್ದಾಗ ಆರ್‌ಸಿಬಿ ತನ್ನ ಅತ್ಯುತ್ತಮ ವರ್ಷವನ್ನು ಕಾಣುವುದರಲ್ಲಿತ್ತು. ಆದರೆ ಫ್ರಾಂಚೈಸಿ ಆವತ್ತು ಸ್ಟಾರ್ಕ್ ಅವರನ್ನು ಬಿಟ್ಟು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೆಕ್ಕುವತ್ತಲೇ ಗಮನ ಹರಿಸಿತು,' ಎಂದು ರಾಹುಲ್ ವಿವರಿಸಿದರು.

Story first published: Wednesday, March 25, 2020, 17:43 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X