ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಗೆ ಧೋನಿ ಸೇರ್ಪಡೆ, ಏಕದಿನದಿಂದ ಪಂತ್‌ ಕಿಕ್‌ಔಟ್ ಗುಟ್ಟು ರಟ್ಟು!

why Dhoni included in Indias T20I squad, Rishabh Pant dropped from ODI side?

ನವದೆಹಲಿ, ಡಿಸೆಂಬರ್ 25: ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತದ ಟಿ20 ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿದೆ. ಏಕದಿನದಲ್ಲೂ ಸ್ಥಾನ ನೀಡಲಾಗಿದೆ. ಆದರೆ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದೆ. ಇವೆರಡಕ್ಕೂ ಒಂದು ಲಿಂಕಿದೆ!

ಬಾಕ್ಸಿಂಗ್ ಡೇ ಟೆಸ್ಟ್‌: ರಾಹುಲ್- ವಿಜಯ್ ಡ್ರಾಪ್, ಕನ್ನಡಿಗ ಮಯಾಂಕ್ ಪಾದಾರ್ಪಣೆಬಾಕ್ಸಿಂಗ್ ಡೇ ಟೆಸ್ಟ್‌: ರಾಹುಲ್- ವಿಜಯ್ ಡ್ರಾಪ್, ಕನ್ನಡಿಗ ಮಯಾಂಕ್ ಪಾದಾರ್ಪಣೆ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಯಿಂದಲೂ ಎಂಎಸ್‌ ಧೋನಿ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆದರೆ ಬಿಸಿಸಿಐ ಸೋಮವಾರ (ಡಿಸೆಂಬರ್ 24) ಪ್ರಕಟಿಸಿರುವ ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಗೆ ಧೋನಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಆಸೀಸ್ ವಿರುದ್ಧ ಏಕದಿನ, ನ್ಯೂಜಿಲ್ಯಾಂಡ್ ವಿರುದ್ಧ ಟಿ20ಗೆ ಭಾರತ ತಂಡ ಪ್ರಕಟಆಸೀಸ್ ವಿರುದ್ಧ ಏಕದಿನ, ನ್ಯೂಜಿಲ್ಯಾಂಡ್ ವಿರುದ್ಧ ಟಿ20ಗೆ ಭಾರತ ತಂಡ ಪ್ರಕಟ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಬಳಿಕ ನಡೆಯಲಿರುವ ಏಕದಿನ ಸರಣಿಗೆ ಮತ್ತು ಮುಂಬರಲಿರುವ ನ್ಯೂಜಿಲ್ಯಾಂಡ್ ಏಕದಿನ ಸರಣಿಗೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಧೋನಿ ಸ್ಥಾನ ಪಡೆದುಕೊಂಡಿದ್ದಾರೆ. ಇದರ ಹಿಂದೊಂದು ಲೆಕ್ಕಾಚಾರವಿದೆ.

ಅನುಭವಕ್ಕೆ ಮಣೆ

ಅನುಭವಕ್ಕೆ ಮಣೆ

ವೆಸ್ಟ್ ಇಂಡೀಸ್ ಮತ್ತು ಆಸೀಸ್ ಎರಡೂ ಸರಣಿಗಳನ್ನು ಗಮನಿಸಿದರೂ ರಿಷಬ್ ಪಂತ್ ಗಮನಾರ್ಹ ಅನ್ನಿಸುವ ಪ್ರದರ್ಶನವೇನೂ ನೀಡಿಲ್ಲ. ಯುವ ಬ್ಯಾಟ್ಸ್ಮನ್‌ ಪಂತ್‌ಗೆ ಅವಕಾಶ ನೀಡಿದ್ದ ಬಿಸಿಸಿಐ ಪ್ರಯೋಗ ಅಂಥದ್ದೇನೂ ಕೆಲಸ ಮಾಡಿದಂತೆ ಕಂಡಿಲ್ಲ. ಹೀಗಾಗಿ ತಂಡ ಸಮಿತಿ ಮತ್ತೆ ಅನುಭವಿ ಆಟಗಾರನ ಮೊರೆ ಹೋದಂತಿದೆ.

ರಾಹುಲ್ ಕೈ ಬಿಡೋದೇಯಿಲ್ಲ!

ರಾಹುಲ್ ಕೈ ಬಿಡೋದೇಯಿಲ್ಲ!

ಕನ್ನಡಿಗ, ಯುವ ಆಟಗಾರ ಕೆಎಲ್ ರಾಹುಲ್‌ ಕೈಯನ್ನು ಬಿಡೋದೇಯಿಲ್ಲ ಎಂಬಂತಿದೆ ಬಿಸಿಸಿಐ. ಇತ್ತೀಚಿನ ಯಾವುದೇ ಸರಣಿಯಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡಿಲ್ಲ. ನೀಡಿಲ್ಲ ಅನ್ನೋದಕ್ಕಿಂತಲೂ ಸೊನ್ನೆ ಸುತ್ತಿ ಸುತ್ತಿ ನಗೆಪಾಟಲಿಗೀಡಾಗಿದ್ದೇ ಹೆಚ್ಚು. ಆದರೂ ಭಾರತದ ಆಯ್ಕೆ ಸಮಿತಿಗೆ ರಾಹುಲ್ ಮೇಲಿನ ಲವ್ ಕಡಿಮೆಯಾದಂತಿಲ್ಲ. ರಾಹುಲ್ ಅವರು ಆಸೀಸ್ ಏಕದಿನ, ನ್ಯೂಜಿಲ್ಯಾಂಡ್ ಟಿ20 ಮತ್ತು ಏಕದಿನ ಮೂರರಲ್ಲೂ ಕಾಣಿಸಿಕೊಂಡಿದ್ದಾರೆ.

ಧೋನಿಗೆ 11 ಪಂದ್ಯಗಳು

ಧೋನಿಗೆ 11 ಪಂದ್ಯಗಳು

ಆಯ್ಕೆ ಸಮಿತಿಯಲ್ಲಿನ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಪಿಟಿಐ ಜೊತೆ ಮಂಗಳವಾರ (ಡಿ.25) ಮಾತನಾಡಿ, 'ಆಸೀಸ್ ವಿರುದ್ಧ ಮೂರು ಮತ್ತು ಕಿವೀಸ್ ವಿರುದ್ಧ ಐದು ಸೇರಿ ಒಟ್ಟು 8 ಏಕದಿನ ಪಂದ್ಯಗಳಿವೆ. ಧೋನಿಗೆ ಸಾಧ್ಯವಾದಷ್ಟೂ ಹೆಚ್ಚಿನ ಅವಕಾಶ ನೀಡಲು ಆಯ್ಕೆ ಸಮಿತಿ ಬಯಸಿದೆ. ಮೂರು ಟಿ20 ಪಂದ್ಯಗಳೂ ಸೇರಿ ಒಟ್ಟು 11 ಪಂದ್ಯಗಳು ಧೋನಿ ಪಾಲಿಗಿವೆ' ಎಂದರು.

ಗುಟ್ಟು-ರಟ್ಟು!

ಗುಟ್ಟು-ರಟ್ಟು!

23ರ ಹರೆಯದ ಪಂತ್‌ಗಿಂತ 37ರ ಅನುಭವಿ ಆಟಗಾರ ಮಾಜಿ ನಾಯಕ ಎಂಎಸ್‌ ಧೋನಿ ಅವರ ಅವಶ್ಯಕತೆಯನ್ನು ಬಿಸಿಸಿಐ ಮನಗಂಡಿದೆ. ಕಾರಣ 2019ರ ವರ್ಲ್ಡ್ ಕಪ್. ಕೊಂಚ ಫಾರ್ಮ್ ಕಳೆದುಕೊಂಡಂತೆ ಕಂಡರೂ ಚೇತರಿಸಿಕೊಳ್ಳಲು ಧೋನಿಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಹೀಗಾಗಿ ಆಯ್ಕೆ ಸಮಿತಿ ಕೂಲ್ ಕ್ಯಾಪ್ಟನ್‌ನತ್ತ ಹೊರಳಿದೆ.ಏಕದಿನದಿಂದ ಹೊರ ಬಿದ್ದಿರುವ ರಿಷಬ್ ಪಂತ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ತಂಡದಲ್ಲಿ ಉಳಿದುಕೊಂಡಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿ 2019 ಮೇ 30ರಂದು ಆರಂಭಗೊಳ್ಳಲಿದೆ.

Story first published: Tuesday, December 25, 2018, 17:10 [IST]
Other articles published on Dec 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X