ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಗಕ್ಕರ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೊಂಡಿದ್ದು ಯಾಕೆ ಗೊತ್ತಾ? ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ ಕಾರಣ!

Why Did Kumar Sangakkara Learn Dance? Russel Arnold Reveals!

ಕುಮಾರ್ ಸಂಗಕ್ಕರ ಶ್ರೀಲಂಕಾ ಕ್ರಿಕೆಟ್‌ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಸಂಗಕ್ಕರ ತನ್ನ ಸಾಮರ್ಥ್ಯ ಎಂತದ್ದು ಎಂಬುದನ್ನು ತನ್ನ ಒಂದೂವರೆ ದಶಕದ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಬೀತು ಪಡಿಸಿದ್ದಾರೆ. ಶ್ರೀಲಂಕಾ ಕಂಡ ಈ ಶ್ರೇಷ್ಠ ಆಟಗಾರನ ಬಗೆಗಿನ ಕುತೂಹಲಕರ ಸಂಗತಿಯನ್ನು ಅವರ ಸಹ ಆಟಗಾರನಾಗಿದ್ದ ರಸೆಲ್ ಅರ್ನಾಲ್ಡ್ ವಿಡಿಯೋವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಕುಮಾರ ಸಂಗಕ್ಕರ ಕಿರಿಯ ವಯಸ್ಸಿನಲ್ಲಿ ಡ್ಯಾನ್ಸ್ ಕ್ಲಾಸ್‌ಗೆ ತೆರಳುತ್ತಿದ್ದರು ಎಂಬ ಕುತೂಹಲಕಾರಿ ಸಂಗತಿಯನ್ನು ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ. ಆದರೆ ಅದಕ್ಕೆ ಕಾರಣವೂ ಇತ್ತು. ಮತ್ತು ಆ ಕಾರಣ ಕ್ರಿಕೆಟ್‌ಗೆ ಸಂಬಂಧಿಸಿದ್ದಾಗಿತ್ತು ಎಂಬುದು ಮತ್ತೊಂದು ಕುತೂಹಲಕಾರಿ ವಿಚಾರ. ಆ ವಿಶೇಷತೆಯೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ಫೂಟ್‌ವರ್ಕ್‌ ಉತ್ತಮಗೊಳಿಸಲು ಸಂಗಾ ಕಸರತ್ತು

ಫೂಟ್‌ವರ್ಕ್‌ ಉತ್ತಮಗೊಳಿಸಲು ಸಂಗಾ ಕಸರತ್ತು

ಕುಮಾರ ಸಂಗಕ್ಕರ ಮತ್ತು ರಸೆಲ್ ಅರ್ನಾಲ್ಡ್ ಫೂಟ್‌ವರ್ಕ್ ಉತ್ತಮಗೊಳಿಸಬೇಕು ಎಂಬ ಕಾರಣಕ್ಕೆ ನೃತ್ಯ ತರಬೇತಿಗೆ ತೆರಳುತ್ತಿದ್ದರು ಎಂಬುದನ್ನು ಸ್ವತಃ ಅರ್ನಾಲ್ಡ್ ಹೇಳಿಕೊಂಡಿದ್ದಾರೆ. ನಿಜ, ನಾವುಬ್ಬರೂ ಯುವಕರಾಗಿದ್ದಾಗ ಕೊಲಂಬೋದಲ್ಲಿ ನೃತ್ಯ ತರಬೇತಿ ತರಗತಿಗೆ ಸೇರಿಕೊಂಡಿದ್ದೆವು. ಪಾದಗಳ ಚಲನೆ ಮತ್ತು ಸಮತೋಲನವನ್ನು ಚೆನ್ನಾಗಿ ಪಡೆಯಬಹುದೆಂದು ಆ ನಿರ್ಧಾರಕ್ಕೆ ಬಂದಿದ್ದೆವು ಎಂದು ಅರ್ನಾಲ್ಡ್ ಹೇಳಿದ್ದಾರೆ.

ಹೇಳಿಕೊಳ್ಳುವಂತಾ ಆಟಗಾರ ಆಗಿರಲಿಲ್ಲ ಸಂಗಕ್ಕರ

ಹೇಳಿಕೊಳ್ಳುವಂತಾ ಆಟಗಾರ ಆಗಿರಲಿಲ್ಲ ಸಂಗಕ್ಕರ

ಸಂಗಕ್ಕರ ಶಾಲಾ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಅಂತಾ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರ ಆಗಿರಲಿಲ್ಲ. ಆತನ ಪ್ರದರ್ಶನ ಸಾಮಾನ್ಯವಾಗಿತ್ತು. 22-23ನೇ ವಯಸ್ಸಿನಲ್ಲಿ ಆತ ಕ್ಲಬ್‌ ಕ್ರಿಕೆಟ್‌ಗೆ ಸೇರಿಕೊಂಡ ನಂತರ ಆತನ ನಿಜವಾದ ಸಾಮರ್ಥ್ಯ ಹೊರಗೆ ಬಂದಿತ್ತು. ಬಳಿಕ ಆತ ಮತ್ತೊಂದು ಎತ್ತರಕ್ಕೆ ಏರಿದ್ದ ಎಂದು ಅರ್ನಾಲ್ಡ್ ಸ್ಮರಿಸಿಕೊಂಡಿದ್ದಾರೆ.

ಕ್ರಿಕೆಟ್ ಪ್ರಾಕ್ಟೀಸ್ ನಂತರ ನೃತ್ಯ ತರಬೇತಿ

ಕ್ರಿಕೆಟ್ ಪ್ರಾಕ್ಟೀಸ್ ನಂತರ ನೃತ್ಯ ತರಬೇತಿ

ನಮ್ಮ ತಂಡದ ಕೆಲ ಆಟಗಾರರೊಂದಿಗೆ ತಾನು ಮತ್ತು ಸಂಗಕ್ಕರ ಗೆಳತಿಯರ ಜೊತೆಗೆ ಡ್ಯಾನ್ಸ್ ಕ್ಲಾಸ್‌ಗೆ ತೆರಳುತ್ತಿದ್ದೆವು. ನಮ್ಮ ಕ್ರಿಕೆಟ್ ಕ್ಲಬ್, ಸ್ಟೇಡಿಯಮ್ ಮತ್ತು ನೃತ್ಯ ತರಬೇತಿ ಕೇಂದ್ರ ಒಂದೇ ಪ್ರದೇಶದಲ್ಲಿತ್ತು. ಕ್ರಿಕೆಟ್ ಅಭ್ಯಾಸವನ್ನು ನಡೆಸಿದ ಬಳಿಕ ಸಂಜೆ ಏಳು ಗಂಟೆಯ ನಂತರ ನಾವು ನೃತ್ಯ ತರಬೇತಿಗೆ ತೆರಳುತ್ತಿದ್ದೆವು ಎಂದು ಅರ್ನಾಲ್ಡ್ ಹೇಳಿದ್ದಾರೆ.

ಅರ್ಧಕ್ಕೇ ಬಿಟ್ಟಿದ್ದರು ಅರ್ನಾಲ್ಡ್

ಅರ್ಧಕ್ಕೇ ಬಿಟ್ಟಿದ್ದರು ಅರ್ನಾಲ್ಡ್

ಕೆಲ ದಿನಗಳ ನಂತರ ನನ್ನ ರಿಧಮ್ ನೃತ್ಯಕ್ಕೆ ಹೊಂದಿಕೊಳ್ಳುತ್ತಿಲ್ಲ ಎಂದು ಅರಿವಿಗೆ ಬಂದ ನಂತರ ನಾನು ಹೋಗುವುದನ್ನು ನಿಲ್ಲಿಸಿದ್ದೆ. ಆದರೆ ಸಂಗಕ್ಕರ ತನ್ನ ಅಂದಿನ ಗೆಳತಿ ಎಹಲಿ(ಈಗ ಪತ್ನಿ) ಜೊತೆಗೆ ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದನ್ನು ಮುಂದುವರಿಸಿದ್ದರು ಎಂದು ಕುಮಾರ ಸಂಗಕ್ಕರ ಕುರಿತ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ.

Story first published: Friday, June 26, 2020, 21:38 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X