ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಬೆಂಗಳೂರು: 2004ರಲ್ಲಿ ನಡೆದಿದ್ದ ಪಂದ್ಯವದು. ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್‌ ಬಳಗ ಮುಲ್ತಾನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿತ್ತು. ಈ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ದಂತಕತೆ ಸಚಿನ್ ತೆಂಡೂಲ್ಕರ್ ಅವರು 194 ರನ್‌ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಲಾಗಿತ್ತು. ತಂಡದ ಪ್ರಮುಖ ಆಟಗಾರನೊಬ್ಬ ರನ್ ಮೈಲಿಗಲ್ಲು ಸ್ಫಾಪಿಸಲಿದ್ದಾನೆ ಅನ್ನುವಾಗ ಡಿಕ್ಲೇರ್ ಘೋಷಿಸಿದ್ದ ದ್ರಾವಿಡ್ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಆಗ ಬಹಳ ಚರ್ಚೆಗೀಡು ಮಾಡಿತ್ತು.

'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ

ಯಾರಿಗಾದರೂ ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನಿರ್ಧಾರ ಅಚ್ಚರಿ ಮೂಡಿಸುವಂತಿದ್ದುದು ನಿಜವೆ. ಸಚಿನ್ 200 ರನ್ ಗಳಿಸಲು ಕೇವಲ 6 ರನ್ ಬೇಕಿದ್ದಾಗ ಡಿಕ್ಲೇರ್ ಘೋಷಿಸಿದ್ದೇಕೆ ಅಂತ ದ್ರಾವಿಡ ಅವರಲ್ಲೂ ಅನೇಕ ಮಂದಿ ಪ್ರಶ್ನಿಸಿದ್ದರು.

ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 ‍XIನಲ್ಲಿ ಮೂವರು ಭಾರತೀಯರು!

ಆವತ್ತು ಸಚಿನ್ 200 ರನ್ ಸನಿಹದಲ್ಲಿದ್ದರೂ ದ್ರಾವಿಡ್ ಡಿಕ್ಲೇರ್ ಘೋಷಿಸಲು ಕಾರಣವಿತ್ತು. ಇದನ್ನು ಸ್ವತಃ ದ್ರಾವಿಡ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು (ಅಂದಿನ ಪಂದ್ಯದ ಫಲಿತಾಂಶ ಕೊನೇ ಸ್ಲೈಡ್‌ನಲ್ಲಿದೆ).

ನಾನು ಮಿಲಿಯನೇರ್ ಆಗ್ತಿದ್ದೆ

ನಾನು ಮಿಲಿಯನೇರ್ ಆಗ್ತಿದ್ದೆ

ರಾಹುಲ್ ದ್ರಾವಿಡ್ ಒಮ್ಮೆ ಸಂದರ್ಶನವೊಂದರಲ್ಲಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ಸಚಿನ್ ತೆಂಡೂಲ್ಕರ್ ಅವರು 194 ರನ್ ಗಳಿಸಿದ್ದಾಗ ನೀವೇಕೆ ಡಿಕ್ಲೇರ್ ಘೋಷಿಸಿದ್ದು ಅಂತ ಕೇಳುವವರಿಗೆಲ್ಲ ನಾನು 1 ಡಾಲರ್ ಚಾರ್ಚ್ ವಿಧಿಸುತ್ತಿದ್ದರೆ, ನಾನಿಷ್ಟೊತ್ತಿಗಾಗಲೇ ಮಿಲಿಯನೇರ್ ಆಗಿಬಿಡುತ್ತಿದ್ದೆ ಎಂದು ದ್ರಾವಿಡ್ ನಕ್ಕು ನುಡಿದಿದ್ದರು. ಆದರೆ ಆವತ್ತಿನ ತನ್ನ ಆ ನಿರ್ಧಾರಕ್ಕೆ ದ್ರಾವಿಡ್ ಕೊಟ್ಟಿರುವ ಕಾರಣ ನಿಜಕ್ಕೂ ನಮ್ಮನ್ನು ತೃಪ್ತಿಗೊಳಿಸುತ್ತದೆ.

ಡಿಕ್ಲೇರ್‌ಗೆ ಕಾರಣವೇನು?

ಡಿಕ್ಲೇರ್‌ಗೆ ಕಾರಣವೇನು?

ಆವತ್ತು ದ್ರಾವಿಡ್ ಡಿಕ್ಲೇರ್ ಘೋಷಿಸಿದ್ದಕ್ಕೆ ಕಾರಣವಿದೆ. ನಮಗೆಲ್ಲರಿಗೂ ಗೊತ್ತಿರುವಂತೆ ಸಚಿನ್ ಅವರು 90 ರನ್ ಬರುತ್ತಲೇ ಕೊಂಚ ನರ್ವಸ್ ಆಗುತ್ತಾರೆ. ಈ ನರ್ವಸ್‌ನೆಸ್‌ನ ಕಾರಣದಿಂದಲೇ ಎಷ್ಟೋ ಸಲ ಸಚಿನ್ 90 ಅಥವಾ 99 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದೂ ಇದೆ. ಆವತ್ತೂ ಕೂಡ ಸಚಿನ್ 200ರ ಸಮೀಪಕ್ಕೆ ಬರುತ್ತಿದ್ದಂತೆ ದುರ್ಬಲ ಎಸೆತಗಳಿಗಷ್ಟೇ ರನ್ ಗಳಿಸುತ್ತಿದ್ದರು. ಹೆಚ್ಚಿನ ಎಸೆತಗಳನ್ನು ಡಾಟ್ ಮಾಡುತ್ತಿದ್ದರು. ಸಚಿನ್ ಹೀಗೆ ಮಾಡುತ್ತಿದ್ದರಿಂದ ಒಂದೊಂದು ರನ್‌ಗೂ ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಡಿಕ್ಲೇರ್ ಘೋಷಿಸದಿದ್ದರೆ ಪಂದ್ಯ ಡ್ರಾ ಅನ್ನಿಸುವ ಸಾಧ್ಯತೆಯೂ ಇತ್ತು. ಹೀಗಾಗಿ ಸಚಿನ್ ಅವರ 200 ರನ್‌ಗಿಂತ ತಂಡದ ಗೆಲುವು ನಾಯಕ ದ್ರಾವಿಡ್‌ಗೆ ಮುಖ್ಯವಾಗಿತ್ತು. ಇದೇ ಕಾರಣಕ್ಕೆ ದ್ರಾವಿಡ್ ಆವತ್ತು ಡಿಕ್ಲೇರ್ ಘೋಷಿಸಿದ್ದರು.

ಭರ್ಜರಿ ರನ್ ಕಲೆ ಹಾಕಿದ್ದ ಭಾರತ

ಭರ್ಜರಿ ರನ್ ಕಲೆ ಹಾಕಿದ್ದ ಭಾರತ

ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ರನ್ ಕಲೆ ಹಾಕಿತ್ತು. ಯುವರಾಜ್ ಸಿಂಗ್ 59, ವಿವಿಎಸ್ ಲಕ್ಷ್ಮಣ್ 29, ಸಚಿನ್ ಅಜೇಯ 194, ರಾಹುಲ್ ದ್ರಾವಿಡ್ 6, ವೀರೇಂದ್ರ ಸೆಹ್ವಾಗ್ 309, ಆಕಾಶ್ ಚೋಪ್ರಾ 42 ರನ್‌ನೊಂದಿಗೆ ಭಾರತ 161.5 ಓವರ್‌ಗೆ 5 ವಿಕೆಟ್ 675 ರನ್ ಗಳಿಸಿತ್ತು. ಭಾರತದ ಖಾತೆಯಲ್ಲಿ ಉತ್ತಮ ರನ್ ಇದ್ದ ಕಾರಣದಿಂದಲೂ ದ್ರಾವಿಡ್, ಸಚಿನ್ ಅವರ ಇನ್ನುಳಿದ 6 ರನ್‌ಗೋಸ್ಕರ ಸಮಯ ವ್ಯರ್ಥ ಮಾಡದೆ ಡಿಕ್ಲೇರ್ ಘೋಷಿಸಿದ್ದರು.

ಪಂದ್ಯದ ಫಲಿತಾಂಶ

ಪಂದ್ಯದ ಫಲಿತಾಂಶ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ನೀಡಿದ್ದ 675 ರನ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 126.3 ಓವರ್‌ಗಳಲ್ಲಿ 407 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ಭಾರತದ ಖಾತೆಯಲ್ಲಿ ಸಾಕಷ್ಟು ರನ್ ಇದ್ದಿದ್ದರಿಂದ ಪಾಕಿಸ್ತಾನಕ್ಕೆ ಫಾಲೋಆನ್ ನೀಡಲಾಗಿತ್ತು. ಪಾಕ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ 77 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 216 ರನ್ ಪೇರಿಸಿ, ಇನ್ನಿಂಗ್ಸ್‌ ಸಹಿತ 52 ರನ್ ಸೋಲನುಭವಿಸಿತ್ತು. ಭಾರತದ ಪರ ಅನಿಲ್ ಕುಂಬ್ಳೆ 2+6, ಇರ್ಫಾನ್ ಪಠಾಣ್ 4+2 ವಿಕೆಟ್ ಮುರಿದು ಪಾರಮ್ಯ ಮೆರೆದಿದ್ದರು. ವೀರೇಂದ್ರ ಸೆಹ್ವಾಗ್ ಪಂದ್ಯಶ್ರೇಷ್ಠರೆನಿಸಿದ್ದರು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಜಯ ಸಾಧಿಸಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 9, 2020, 22:32 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X