ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳದಿರಲು ಮೋದಿ ಕಾರಣ ಎಂದ ಸಾಕ್ಷಿ!

ms dhoni, sakshi, team india, ಟೀಮ್ ಇಂಡಿಯಾ, ಎಂಎಸ್ ಧೋನಿ, ಸಾಕ್ಷಿ

ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಕ್ರಿಕೆಟಿಗರು ಸಾಮಾಜಿಕ ಜಾಲತಾಂದಲ್ಲಿ ಆಕ್ಟಿವ್ ಆಗಿದ್ದಾರೆ. ಹಲವಾರು ಲೈವ್‌ಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಟೀಮ್ ಇಂಡಿಯಾದ ಓರ್ವ ಆಟಗಾರ ಮಾತ್ರ ನಾನಾ ಕಾರಣಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದರೂ ಒಮ್ಮೆಯೂ ಅತ್ತ ಸುಳಿದಿಲ್ಲ.

ಹೀಗೆ ಸಾಮಾಜಿಕ ಜಾಲತಾಣದತ್ತ ಸುಳಿಯದಿರುವ ಕ್ರಿಕೆಟಿಗ ಬೇರೆ ಯಾರೂ ಅಲ್ಲ. ಅದು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿ ಸೋಶಿಯಮ್ ಮೀಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೂ ಅದರಲ್ಲಿ ಸಕ್ರಿಯವಾಗಿಲ್ಲ. ಆದರೆ ಅದಕ್ಕೆ ಕಾರಣವನ್ನು ನೀಡಿದ್ದಾರೆ ಮಾಹಿ ಪತ್ನಿ ಸಾಕ್ಷಿ.

ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !

ಇನ್ಸ್ಟಾಗ್ರಾಮ್ ಲೈವ್ ಮಾತುಕತೆಯ ಸಂದರ್ಭದಲ್ಲಿ ಧೋನಿ ಯಾಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ ಎಂದು ವಿವರಿಸಿದ್ದಾರೆ. 'ಮಾಹಿ ಹೇಗಿರುತ್ತಾರೆ ಎಂದು ನಿಮಗೆ ಗೊತ್ತೇ ಇದೆ. ಅವರು ಲೈವ್‌ಗೆ ಬಂದು ಮಾತನಾಡುವುದೇ ಇಲ್ಲ ಎಂದು ಸಾಕ್ಷಿ ಧೋನಿಯ ಬಗ್ಗೆ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರು ಏನಾದರೂ ಹೇಳಿದರೆ ಅದಕ್ಕೆ ಜನರು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಈಗ ಪ್ರಧಾನಿಗಿಂತ ದೇಶದಲ್ಲಿ ದೊಡ್ಡವರು ಯಾರೂ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಿಗೆ ಬಂದು ಪೋಸ್ಟ್ ಮಾಡುವ ಅಗತ್ಯವಿಲ್ಲವೆಂದು ಅವರು ನಂಬಿದ್ದಾರೆ" ಎಂದು ಧೋನಿ ಸಾಮಾಜಿಕ ಜಾಲತಾಣದಿಂದ ದೂರವಿರುವ ಕಾರಣವನ್ನು ಹೇಳಿದ್ದಾರೆ.

ಕೂತಲ್ಲೇ ಕೋಹ್ಲಿ ಖಾತೆಗೆ ಕೋಟಿ ಕೋಟಿ: ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಆದಾಯಕೂತಲ್ಲೇ ಕೋಹ್ಲಿ ಖಾತೆಗೆ ಕೋಟಿ ಕೋಟಿ: ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಆದಾಯ

ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೊಮ್ಮೆ ಎಂಬಂತೆ ಧೋನಿ ಪೋಸ್ಟ್‌ಗಳನ್ನು ಹಾಕುತ್ತಾರೆ. ಆದರೆ ಧೋನಿ ಪತ್ನಿ ಸಾಕ್ಷಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಧೋನಿ ಬಗೆಗಿನ ಅಪ್‌ಡೇಟ್‌ಗಳನ್ನು ಸಾಕ್ಷಿ ಅಭಿಮಾನಿಗಳಿಗೆ ಒದಗಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕೃತ ಖಾತೆಯ ಸಂವಾದದಲ್ಲಿ ಸಾಕ್ಷಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Story first published: Saturday, June 6, 2020, 15:38 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X