ಪಾಕ್ ತಂಡ ವಾಪಸ್ ಕಳುಹಿಸುವುದಾಗಿ ನ್ಯೂಜಿಲೆಂಡ್ ಹೆದರಿಸುತ್ತಿರುವುದೇಕೆ?!

ವೆಲ್ಲಿಂಗ್ಟನ್: ನ್ಯೂಜಿಲೆಂಡ್ vs ಪಾಕಿಸ್ತಾನ ಸರಣಿಯಲ್ಲಿ ಒಂದು ಎಸೆತವೂ ನಡೆದಿಲ್ಲ. ಆದರೂ ಇತ್ತಂಡಗಳ ಸರಣಿ ಸುದ್ದಿಯಲ್ಲಿದೆ. ಅದೂ ಕೆಟ್ಟ ಕಾರಣಕ್ಕಾಗಿ. ನ್ಯೂಜಿಲೆಂಡ್‌ಗೆ ಪ್ರವಾಸ ಬಂದಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ 7 ಮಂದಿ ಆಟಗಾರರು ಕೊರೊನಾವೈರಸ್ ಸೋಂಕಿಗೆ ತುತ್ತಾಗಿರುವುದು ಭಾರೀ ಚರ್ಚೆಗೀಡಾಗಿದೆ. ಪಾಕಿಸ್ತಾನ-ನ್ಯೂಜಿಲೆಂಡ್ ಸರಣಿ ಮೂರು ಟಿ20ಐ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.

ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್

ಪ್ರವಾಸ ಸರಣಿಗಾಗಿ ನ್ಯೂಜಿಲೆಂಡ್‌ಗೆ ಹೊರಟಿದ್ದ ಪಾಕಿಸ್ತಾನ ತಂಡ ಪಾಕ್ ಬಿಡುವಾಗ ಕೊರೊನಾ ಪರೀಕ್ಷೆ ಮಾಡಿಕೊಂಡಿತ್ತು. ಆಗ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಎಡಗೈ ಬ್ಯಾಟ್ಸ್‌ಮನ್‌ ಫಖರ್ ಝಮಾನ್ ಅವರನ್ನು ಬಿಟ್ಟು ತಂಡ ನ್ಯೂಜಿಲೆಂಡ್‌ಗೆ ಹೊರಟಿತ್ತು.

ವಿರಾಟ್ ಕೊಹ್ಲಿ ಕಡೇಯ ಏಕದಿನ ಶತಕ ಬಾರಿಸಿದ್ದು ಯಾವಾಗ ಗೊತ್ತಾ?!

ಫಖರ್ ಝಮಾನ್‌ಗೆ ಫಲಿತಾಂಶ ನೆಗೆಟಿವ್ ಬಂದಿದ್ದರೂ ಅವರಿಗೆ ಸಣ್ಣಗೆ ಜ್ವರವಿದ್ದಿದ್ದರಿಂದ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.

ಮೊದಲು ನೆಗಟಿವ್, ಮತ್ತೆ ಪಾಸಿಟಿವ್

ಮೊದಲು ನೆಗಟಿವ್, ಮತ್ತೆ ಪಾಸಿಟಿವ್

ನ್ಯೂಜಿಲೆಂಡ್‌ಗೆ ಬಂದಿಳಿದ ಬಳಿಕ ಮತ್ತೆ ಪಾಕ್‌ ತಂಡ ಪರೀಕ್ಷೆಗೆ ಒಳಗಾಗಿತ್ತು. ಆಗ ನೆಗೆಟಿವ್ ಬಂದಿತ್ತಾದರೂ ಕೆಲ ದಿನಗಳ ಬಳಿಕ ನಡೆದ ಪರೀಕ್ಷೆಗಳಲ್ಲಿ ಒಟ್ಟು 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಕ್ಕೆ ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಪಾಕ್ ತಂಡವನ್ನು ದೂರಿದೆ. ಕ್ವಾರಂಟೈನ್ ನಿಯಮವನ್ನು ಆಟಗಾರರು ಸರಿಯಾಗಿ ಪಾಲಿಸಿಲ್ಲ. ಹೀಗಾಗಿ ಹೀಗೇ ಮುಂದುವರೆದರೆ ಪಾಕ್ ತಂಡವನ್ನು ವಾಪನ್ ಕಳುಹಿಸಬೇಕಾಗುತ್ತದೆ ಎಂದಿದೆ.

ತವರಿಗೆ ವಾಪಸ್ ಕಳುಹಿಸಬಹುದು

ತವರಿಗೆ ವಾಪಸ್ ಕಳುಹಿಸಬಹುದು

ನ್ಯೂಜಿಲೆಂಡ್ ಕೋವಿಡ್-19 ನಿಯಮದ ಪ್ರಕಾರ ಪ್ರವಾಸ ಬರುವ ತಂಡ, ಆಟಗಾರರು ಕ್ವಾರಂಟೈನ್ ನಿಯಮ ಮೀರಿದರೆ ಅವರನ್ನು ವಾಪಸ್ ತವರಿಗೆ ಕಳುಹಿಸಬಹುದು. ಪಾಕ್ ಆಟಗಾರರು ಒಬ್ಬರಿಗೊಬ್ಬರು ಹತ್ತಿರದಲ್ಲಿ ಸಂಪರ್ಕಿಸುತ್ತಿದ್ದರು, ಆಹಾರ ಶೇರ್ ಮಾಡಿಕೊಳ್ಳುತ್ತಿದ್ದರು. ಯಾವಾಗಲೂ ಮಾಸ್ಕ್ ಧರಿಸುತ್ತಿರಲಿಲ್ಲ ಎಂದು ನ್ಯೂಜಿಲೆಂಡ್ ಹೇಳಿದೆ. ಹೀಗಾಗಿ ಪಾಕ್‌ ತಂಡ ತವರಿಗೆ ವಾಪಸ್ ಬರಬೇಕಾದ ಭೀತಿ ಎದುರಿಸುತ್ತಿದೆ.

ಪಾಕ್ ಗೌರವದ ಪ್ರಶ್ನೆ

ಪಾಕ್ ಗೌರವದ ಪ್ರಶ್ನೆ

ಇಂಗ್ಲೆಂಡ್ ಪ್ರವಾಸದ ವೇಳೆ ಮತ್ತು ನ್ಯೂಜಿಲೆಂಡ್ ಪ್ರವಾಸದ ವೇಳೆಯೂ ತಂಡದ ಆಟಗಾರರ ಜೊತೆಗೆ ಬಯೋ ಬಬಲ್‌ನಲ್ಲಿ ಉಳಿದುಕೊಳ್ಳುವ ಪಾಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಮ್ ಖಾನ್ ಮಾತನಾಡಿ, 'ಇದು ಪಾಕಿಸ್ತಾನ ರಾಷ್ಟ್ರೀಯ ಗೌರವ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಯ ಸಂಗತಿಯಾಗಿದೆ,' ಎಂದಿದ್ದಾರೆ.

ಶೋಯೆಬ್ ಅಖ್ತರ್ ಗರಂ

ಶೋಯೆಬ್ ಅಖ್ತರ್ ಗರಂ

ಪಾಕ್ ತಂಡವನ್ನು ತವರಿಗೆ ಕಳುಹಿಸುವ ಬೆದರಿಕೆಗೆ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಇದು ಕ್ಲಬ್ ತಂಡವಲ್ಲ. ಪಾಕ್ ರಾಷ್ಟ್ರೀಯ ತಂಡ. ನೋಡಿಕೊಂಡು ವರ್ತಿಸಿ. ಇಂಥ ಹೇಳಿಕೆಗಳನ್ನು ನೀಡುವಾಗ ಎಚ್ಚರ ವಹಿಸಿ ಎಂದು ನ್ಯೂಜಿಲೆಂಡ್‌ಗೆ ಎಚ್ಚರಿಸಿದ್ದಾರಲ್ಲದೆ, ಪಾಕ್ ತಂಡ ವಾಪಸ್ ಬರಬೇಕು. ಕನಿಷ್ಠ 5 ವರ್ಷಗಳ ಕಾಲ ನ್ಯೂಜಿಲೆಂಡ್‌ನಲ್ಲಿ ಆಡಬಾರದು,' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, November 30, 2020, 19:16 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X