ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರ

Team india

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಭಾರತದೆದುರು ಹಿಂದೆಂದೂ ಕಾಣದ ಹೀನಾಯ ಪ್ರದರ್ಶನ ತೋರಿದೆ.

ಭಾರತದ ಮೊದಲ ಇನ್ನಿಂಗ್ಸ್‌ 325 ರನ್‌ಗಳಿಗೆ ಉತ್ತರವಾಗಿ ಬೌಲಿಂಗ್ ಮಾಡಿದ ಕಿವೀಸ್ ಪಡೆ ಸಿರಾಜ್ ಮತ್ತು ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿ 62 ರನ್‌ಗಳಿಗೆ ಆಲೌಟ್‌ ಆಗಿ ಹೀನಾಯವಾಗಿ ಹಿನ್ನಡೆ ಕಂಡಿದೆ. ಟೆಸ್ಟ್ ಇತಿಹಾಸಿದಲ್ಲಿ ಭಾರತದೆದುರು ಕಿವೀಸ್ ಅತಿಕಡಿಮೆ ಟೋಟಲ್ ಇದಾಗಿದ್ದು, ವಿದೇಶಿ ತಂಡವನ್ನು ಭಾರತದ ನೆಲದಲ್ಲಿ ಕಲೆಹಾಕಿದ ಅತಿ ಕನಿಷ್ಠ ಮೊತ್ತವೂ ಇದಾಗಿದೆ.

ಭಾರತದ ವಿರುದ್ಧ 62ಕ್ಕೆ ಆಲ್ಔಟ್ ಆಗುವ ಮೂಲಕ ನ್ಯೂಜಿಲೆಂಡ್‌ ಬರೆದ ಕೆಟ್ಟ ದಾಖಲೆ ಒಂದೆರಡಲ್ಲ!ಭಾರತದ ವಿರುದ್ಧ 62ಕ್ಕೆ ಆಲ್ಔಟ್ ಆಗುವ ಮೂಲಕ ನ್ಯೂಜಿಲೆಂಡ್‌ ಬರೆದ ಕೆಟ್ಟ ದಾಖಲೆ ಒಂದೆರಡಲ್ಲ!

ಟೀಂ ಇಂಡಿಯಾ ಪರ ನಾಲ್ಕು ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಮೊದಲ ಎಸೆತದಲ್ಲೇ ವಿಕೆಟ್ ಬೇಟೆ ಆರಂಭಿಸಿದ್ರೆ, ವೇಗಿ ಮೊಹಮ್ಮದ್ ಸಿರಾಜ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಈಗಾಗಲೇ 2ನೇ ದಿನದಾಟದಂತ್ಯಕ್ಕೆ 332ರನ್ ಲೀಡ್ ಪಡೆದುಕೊಂಡಿದೆ.

ನ್ಯೂಜಿಲೆಂಡ್ ತಂಡವನ್ನ 62ರನ್‌ಗೆ ಆಲೌಟ್ ಆದ್ರೂ, ಕಿವೀಸ್ ಪಡೆ ಫಾಲೋ ಆನ್‌ಗೆ ಸಿಲುಕಿದ್ದರೂ, ಕೊಹ್ಲಿ ನೇತೃತ್ವದ ಟೀಂ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಒಂದೂ ವಿಕೆಟ್ ನಷ್ಟವಿಲ್ಲದೆ 69 ರನ್ ಕಲೆಹಾಕಿತು. ಆದ್ರೆ ಭಾರತಕ್ಕೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ಏಕೆ ಹೇರಲಿಲ್ಲ? ಎಂದು ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಭಾರತದ ನಿರ್ಧಾರವನ್ನ ವಿವರಿಸಿದ್ದಾರೆ.

"ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ನೀವು ಕೇವಲ ಈ ಟೆಸ್ಟ್ ಪಂದ್ಯವನ್ನು ಮಾತ್ರ ಗಮನಿಸದೆ ಮುಂದಿನ ಸರಣಿ ಕೂಡ ತಿಳಿದಿರಬೇಕು. ನೀವು ಮೂರು ಅಥವಾ ನಾಲ್ಕು ದಿನಗಳಲ್ಲಿ ಗೆದ್ದರೆ ಭಾರತ ಹೆಚ್ಚುವರಿ ಅಂಕಗಳನ್ನು ಪಡೆಯುವುದಿಲ್ಲ. ಭಾರತ ಹೆಚ್ಚು ಬ್ಯಾಟಿಂಗ್ ಮಾಡಿದ್ದಷ್ಟು ಇನ್ನಷ್ಟು ಕೆಟ್ಟ ವಿಕೆಟ್(ಪಿಚ್) ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತಷ್ಟು ಪ್ರಬಲ ಬೌಲಿಂಗ್ ದಾಳಿ ನಡೆಸಲು ಸುಲಭವಾಗುತ್ತದೆ'' ಎಂದು ದಿನೇಶ್ ಕಾರ್ತಿಕ್ ಕ್ರಿಕ್ ಬಝ್‌ಗೆ ತಿಳಿಸಿದ್ದಾರೆ.

ತಮ್ಮ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ ಹೇಳಿದ್ದಿಷ್ಟುತಮ್ಮ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ ಹೇಳಿದ್ದಿಷ್ಟು

"ಈಗ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶವಿದೆ, ಅವರು ಆಟದಲ್ಲಿ ಮುಂದಿದ್ದಾರೆ ಮತ್ತು ಸಾಕಷ್ಟು ರನ್‌ಗಳನ್ನು ಹೊಂದಿದ್ದಾರೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಚೇತೇಶ್ವರ ಪೂಜಾರ ಕೆಲವು ರನ್ ಗಳಿಸಲು ಇದು ಉತ್ತಮ ಸಮಯ'' ಎಂದು ಕಾರ್ತಿಕ್ ಮಾತು ಮುಂದುವರಿಸುತ್ತಾ ತಿಳಿಸಿದ್ದಾರೆ.

ಮೂರು ದಿನಗಳ ಪಂದ್ಯ ಬಾಕಿ ಇರುವಾಗ ಭಾರತವು ಇದೀಗ ಸಂಪೂರ್ಣ ಪಂದ್ಯದ ಹಿಡಿತ ಸಾಧಿಸಿದೆ. ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಉತ್ತಮ ಆರಂಭ ಒದಗಿಸಿದ್ದಾರೆ. ಹೀಗಾಗಿ ಮಳೆಯ ಕಾಟ ಇಲ್ಲದಿದ್ದರೆ, ಭಾರತವು ಈ ಪಂದ್ಯವನ್ನ ಬಹುಬೇಗ ಗೆಲ್ಲುವುದರಲ್ಲಿ ಎರಡು ಮಾತಿಲ್ಲ.

10 ವಿಕೆಟ್ ಪಡೆದ ಅಜಾಜ್ ಪಟೇಲ್:

ಮುಂಬೈ ಟೆಸ್ಟ್‌ನಲ್ಲಿ ಅತಿದೊಡ್ಡ ಹೈಲೈಟ್ ಅಂದ್ರೆ ಅದು, ಕಿವೀಸ್ ಸ್ಪಿನ್ನರ್ ಅಜಾಜ್ ಪಟೇಲ್ 10 ಟೆಸ್ಟ್ ವಿಕೆಟ್ ಗೊಂಚಲು. ಈ ಸಾಧನೆ ಮಾಡಿದ ಜಗತ್ತಿನ ಮೂರನೇ ಆಟಗಾರ ಎಂಬ ದಾಖಲೆಯನ್ನು ಬರೆದರು. ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು ಮೊದಲಿಗೆ ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲಾಕೆರ್ 1956ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮಾಡಿದ್ರು. ಇದಾದ ಬಳಿಕ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗೊಂಚಲನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಈ ದಾಖಲೆ ಬರೆದಿದ್ದರು.

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

ಇದಾಗಿ 22 ವರ್ಷಗಳ ಬಳಿಕ ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ ಭಾರತದ ವಿರುದ್ಧ ಇದೇ ಸಾಧನೆಯನ್ನು ಮಾಡುವುದರ ಮೂಲಕ 22 ವರ್ಷಗಳ ಬಳಿಕ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.

Story first published: Sunday, December 5, 2021, 9:22 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X