ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'2007ರ ಟಿ20 ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರು ಪಾಲ್ಗೊಳ್ಳದಿರಲು ದ್ರಾವಿಡ್ ಕಾರಣ'

Why Rahul Dravid, Sachin Tendulkar And Sourav Ganguly Skipped 2007 T20 World Cup

ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಅಚ್ಚಳಿಯದ ಘಟನೆಗಳಲ್ಲಿ 2007ರ ಟಿ20 ವಿಶ್ವಕಪ್ ಗೆಲುವು ಕೂಡ ಒಂದು. ಯುವ ಆಟಗಾರರನ್ನೇ ಹೊಂದಿದ್ದ ಟೀಮ್ ಇಂಡಿಯಾವನ್ನು ಧೋನಿ ಮೊಟ್ಟಮೊದಲ ಬಾರಿಗೆ ಮುನ್ನಡೆಸಿ ವಿಶ್ವ ಕಪ್ ಕಿರೀಟವನ್ನು ತೊಡಿಸಿದ್ದರು. ಆ ಮೂಲಕ ಟೀಮ್ ಇಂಡಿಯಾ ಮೊದಲ ವಿಶ್ವಕಪ್ ಕ್ರಿಕೆಟ್‌ನ ವಿಜೇತ ತಂಡವಾಗಿ ಹೊರಹೊಮ್ಮಿತ್ತು.

ಆದರೆ ಆ ಐತಿಹಾಸಿಕ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಿರಿಯ ಆಟಗಾರರನ್ನು ಮಾತ್ರವೇ ಹೊಂದಿತ್ತು. ಅನುಭವಿ ಆಟಗಾರರಾದ ಸಚಿನ್ ತೆಂಡೂಲ್ಕರ್ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಈ ಸರಣಯಿಂದ ಹೊರಗುಳಿದಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಕಿರಿಯ ಕ್ರಿಕೆಟಿಗರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಈ ದಿಗ್ಗಜ ಕ್ರಿಕೆಟಿಗರು ಅವಕಾಶ ಮಾಡಿಕೊಟ್ಟರು ಎಂಬುದು ಹೊಸದಾಗಿ ಹೇಳಬೇಕಿಲ್ಲ. ಆದರೆ ಈ ನಿರ್ಧಾರವನ್ನು ತೆಗೆದುಕೊಂಡು ಉಳಿದ ಆಟಗಾರರನ್ನು ಒಪ್ಪಿಸಿದ್ದು ಯಾರು ಎಂಬುದು ಈಗ ಬಹಿರಂಗವಾಗಿದೆ.

ಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿ

ದಿಗ್ಗಜರಿಲ್ಲದೆ ದೊಡ್ಡ ನಿರೀಕ್ಷೆಯೇ ಇರಲಿಲ್ಲ

ದಿಗ್ಗಜರಿಲ್ಲದೆ ದೊಡ್ಡ ನಿರೀಕ್ಷೆಯೇ ಇರಲಿಲ್ಲ

ಧೋನಿ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ವಿಶ್ವಕಪ್‌ನಂತಾ ಮಹತ್ವದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದರು. ಆದರೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ತಂಡದಲ್ಲಿ ಇಲ್ಲದೆ ಯುವ ಆಟಗಾರರನ್ನೇ ಹೊಂದಿತ್ತು ಟೀಮ್ ಇಂಡಿಯಾ. ಹೀಗಾಗಿ ಭಾರತ ಈ ವಿಶ್ವಕಪ್‌ನಲ್ಲಿ ಮಹತ್ತರ ಸಾಧನೆ ಮಾಡಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿನವರು ಮಾಡಿರಲಿಲ್ಲ.

ದ್ರಾವಿಡ್ ತೆಗೆದುಕೊಂಡಿದ್ದರು ನಿರ್ಧಾರ

ದ್ರಾವಿಡ್ ತೆಗೆದುಕೊಂಡಿದ್ದರು ನಿರ್ಧಾರ

ಯುವ ತಂಡವನ್ನೇ ದಕ್ಷಿಣ ಆಪ್ರಿಕಾದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡಿಸಬೇಕೆಂಬುದು ಬಯಸಿದ್ದು ಬೇರೆ ಯಾರೂ ಅಲ್ಲ, ಆಗ ಸೀಮಿತ ಓವರ್‌ಗಳ ನಾಯಕನಾಗಿದ್ದ ರಾಹುಲ್ ದ್ರಾವಿಡ್ . ಈ ವಿಚಾರವನ್ನು ಮಾಜಿ ಕೋಚ್ ಲಾಲ್‌ಚಂದ್ ರಜಪೂತ್ ಬಹಿರಂಗಪಡಿಸಿದ್ದಾರೆ. ಯುವಕರೇ ಈ ಚುಟುಕು ವಿಶ್ವಕಪ್‌ನಲ್ಲಿ ಆಡಲಿ ಎಂದು ರಾಹುಲ್ ಬಯಸಿದ್ದರು ಎಂದಿದ್ದಾರೆ. ರಜಪೂತ್ 2007ರ ವಿಶ್ವಕಪ್‌ನಲ್ಲಿ ಭಾರತ ತಂಡದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸಚಿನ್ ಗಂಗೂಲಿ ಬಳಿಯೂ ದ್ರಾವಿಡ್ ಮನವಿ

ಸಚಿನ್ ಗಂಗೂಲಿ ಬಳಿಯೂ ದ್ರಾವಿಡ್ ಮನವಿ

ರಾಹುಲ್ ಈ ನಿರ್ಧಾರವನ್ನು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದರು. ಚುಟುಕು ವಿಶ್ವಕಪ್ ಕ್ರಿಕೆಟ್‌ನಲ್ಲಿ ಯುವಕರಿಗೆ ಅವಕಾಶವನ್ನು ನೀಡಲು ಆಟದಿಂದ ಹಿಂದೆ ಸರಿಯುವ ಮನವಿಗೆ ಸಚಿನ್ ಮತ್ತು ಗಂಗೂಲಿ ಕೂಡ ಒಪ್ಪಿಕೊಂಡಿದ್ದರು ಎಂದು ರಜಪೂತ್ ವಿವರಿಸಿದರು. ಸ್ಪೋರ್ಟ್ಸ್ ಕೀಡಾಗೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಗೆದ್ದ ಬಳಿಕ ಪಶ್ಚಾತ್ತಾಪ ಪಟ್ಟಿರಬಹುದು

ಗೆದ್ದ ಬಳಿಕ ಪಶ್ಚಾತ್ತಾಪ ಪಟ್ಟಿರಬಹುದು

ಟಿ20 ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ತೆರಳಿತ್ತು. ಅಲ್ಲಿ ದ್ರಾವಿಡ್ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದರು. ಕೆಲವರಂತು ಇಂಗ್ಲೆಂಡ್ ಸರಣಿಯನ್ನು ಮುಗಿಸಿ ನೇರವಾಗಿ ದಕ್ಷಿಣ ಆಫ್ರಿಕಾಕ್ಕೇ ತೆರಳಿದ್ದರು. ಆದರೆ ವಿಶ್ವಕಪ್ ಮುಗಿಯುವ ವೇಳೆಗೆ ಭಾರತ ಚಾಂಪಿಯನ್ ಎನಿಸಿಕೊಂಡಿತ್ತು. ಕಪ್ ಗೆದ್ದ ಬಳಿಕ ತಮ್ಮ ನಿರ್ಧಾರದ ಬಗ್ಗೆ ಅವರು ಪಶ್ಚಾತ್ತಾಪ ಪಟ್ಟಿರಬಹುದು ಎಂದು ಲಾಲ್ ಚಂದ್ ರಜಪೂತ್ ಹೇಳಿದ್ದಾರೆ.

Story first published: Tuesday, June 30, 2020, 10:17 [IST]
Other articles published on Jun 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X