ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೌಲರ್‌ಗಳು ಚೆಂಡಿಗೆ ಎಂಜಲೇಕೆ ಸವರುತ್ತಾರೆ?: ಕ್ರಿಕೆಟಿಗರ ವಿವರಣೆ ಇಲ್ಲಿದೆ

Why saliva is better than sweat to shine the ball: Shami, Pathan explain

ಬೆಂಗಳೂರು: ಕೊರೊನಾವೈರಸ್ ಪಿಡುಗಿನ ಬಳಿಕ ಪುನರಾರಂಭಗೊಳ್ಳುವ ಕ್ರಿಕೆಟ್ ಮೊದಲಿನಂತೆ ಇರೋಲ್ಲ. ಕ್ರಿಕೆಟ್‌ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತವೆ. ಪಂದ್ಯಾಟಗಳು ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯುವುದಷ್ಟೇ ಅಲ್ಲ, ಜುಲೈ 8ರಿಂದ ಆರಂಭಗೊಳ್ಳುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ನಾವು ಕಾಣಲಿದ್ದೇವೆ. ಕೊರೊನಾವೈರಸ್ ಸೋಂಕು ಒಬ್ಬರಿಂದೊಬ್ಬರಿಗೆ ಹಬ್ಬುವುದನ್ನು ತಪ್ಪಿಸಲು ಐಸಿಸಿ ಒಂದಿಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಪಂದ್ಯಾಟಗಳ ವೇಳೆ ಆಟಗಾರರು ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

ಐಸಿಸಿ ಕ್ರಿಕೆಟ್‌ ನಿಯಮಾವಳಿಯಲ್ಲಿ ತಂದಿರುವ ಬದಲಾವಣೆಗಳಲ್ಲಿ ಚೆಂಡಿಗೆ ಎಂಜಲು ಸವರುವುದರ ನಿಷೇಧವೂ ಸೇರಿದೆ. ಕೊರನಾ ಆರಂಭವಾದಾಗಿನಿಂದ ಕ್ರಿಕೆಟ್‌ ಚೆಂಡಿಗೆ ಎಂಜಲು ಲೇಪಿಸುವುದರ ವಿಚಾರವಾಗಿ ಚರ್ಚೆಗಳಾಗುತ್ತಿರುವುದನ್ನು ನೀವು ಗಮನಿಸಿರುತ್ತೀರಿ.

ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!

ಐಸಿಸಿ ಹೊಸ ನಿಯಮದ ಪ್ರಕಾರ ಇನ್ಮುಂದೆ ಕ್ರಿಕೆಟ್ ಚೆಂಡಿಗೆ ಬೆವರು ತಾಗಿಸಬಹುದು, ಆದರೆ ಎಂಜಲು ತಾಗಿಸುವಂತಿಲ್ಲ. ಐಸಿಸಿಯ ಈ ಹೊಸ ನಿಯಮ ಚರ್ಚೆಗೀಡು ಮಾಡಿದೆ.

ಬೆವರು 'ಓಕೆ'ಗೆ ಬೌಲರ್‌ಗಳು ಬೇಸರ

ಬೆವರು 'ಓಕೆ'ಗೆ ಬೌಲರ್‌ಗಳು ಬೇಸರ

ಚೆಂಡಿನ ಹೊಳಪು ಹೆಚ್ಚಿಸಲು ಆಟಗಾರರು ಬೆವರು ತಾಗಿಸಬಹುದು, ಆದರೆ ಎಂಜಲು ತಾಗಿಸಕೂಡದು ಎಂದು ಐಸಿಸಿ ಎಚ್ಚರಿಸಿರುವುದು ಬಹಳಷ್ಟು ಆಟಗಾರರಿಗೆ ಬೇಸರ ತಂದಿದೆ. ಇದೇ ಕಾರಣಕ್ಕೆ ಚರ್ಚೆಗಳಾಗುತ್ತಿರುವುದು. ಹಾಗಾದರೆ ಬೌಲರ್‌ಗಳು ಚೆಂಡಿಗೆ ಎಂಜಲು ಸವರುವುದೇಕೆ? ಅದರ ಮಹತ್ವವೇನು? ಭಾರತದ ಕ್ರಿಕೆಟಿಗರು ವಿವರಿಸಿದ್ದಾರೆ.

ಮೊಹಮ್ಮದ್ ಶಮಿ ವಿವರಣೆ

ಮೊಹಮ್ಮದ್ ಶಮಿ ವಿವರಣೆ

ಇಂಡಿಯಾ ಟುಡೇಯ 'ಸಲಾಮ್ ಕ್ರಿಕೆಟ್‌' ಶೋನಲ್ಲಿ ಮಾತನಾಡಿದ ಭಾರತದ ವೇಗಿ ಮೊಹಮ್ಮದ್ ಶಮಿ, ಇರ್ಫಾನ್ ಪಠಾಣ್ ಕ್ರಿಕೆಟ್‌ನಲ್ಲಿ ಎಂಜಲಿನ ಬಳಕೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ. 'ಚೆಂಡನ್ನು ಭಾರವಾಗಿ ಮತ್ತು ಮೃದುವಾಗಿಸಲು ನಾವು ಬೆವರು ಬಳಸುತ್ತೇವೆ ಆದರೆ ರಿವರ್ಸ್ ಸ್ವಿಂಗ್‌ಗೆ ಲಾಲಾರಸ ಬೇಕು,' ಎಂದು ಶಮಿ ಹೇಳಿದ್ದಾರೆ.

ನಿಷೇಧ ನಮಗೆ ಸವಾಲಾಗಿದೆ.

ನಿಷೇಧ ನಮಗೆ ಸವಾಲಾಗಿದೆ.

ಮಾತು ಮುಂದುವರೆಸಿದ ಶಮಿ, 'ಲಾಲಾರಸ ಚೆಂಡನ್ನು ಕಠಿಣಗೊಳಿಸುತ್ತದೆ, ಹೊಳೆಯುವಂತೆ ಮಾಡುತ್ತದೆ. ಚೆಂಡಿನ ರಿವರ್ಸ್‌ಗೂ ನೆರವಾಗುತ್ತದೆ. ಈಗ ಎಂಜಲಿನ ಬಳಕೆ ನಿಷೇಧಿಸಿರುವುದು ನಮಗೆ ಬಹುದೊಡ್ಡ ಸವಾಲಾಗಿದೆ,' ಎಂದರು. ಎಂಜಲು ನಿಷೇಧ ತಾತ್ಕಾಲಿಕವಾಗಿರಬಹುದೇನೋ. ಆದರೆ ಕೊರೊನಾ ಕಾರಣ ಸದ್ಯಕ್ಕಂತೂ ಬೌಲರ್‌ಗಳು ಈ ನಿಯಮ ಪಾಲಿಸಲೇಬೇಕಾಗಿದೆ.

ಬೌಲರ್‌ ಫ್ರೆಂಡ್ಲಿ ಪಿಚ್‌ ಬೇಕು

ಬೌಲರ್‌ ಫ್ರೆಂಡ್ಲಿ ಪಿಚ್‌ ಬೇಕು

'ಈ ಹೊಸ ಬದಲಾವಣೆ ಆಟದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಂಜಲು ಬಳಸಿದಂತೆ ಬೆವರಿನಲ್ಲಿ ಚೆಂಡು ಗಾಳಿಯನ್ನು ಸೀಳಿ ಸಾಗುವುದಿಲ್ಲ. ಮುಖ್ಯವಾಗಿ ಬೆವರಿನ ಬಳಕೆ ರಿವರ್ಸ್ ಸ್ವಿಂಗ್ ವಿಚಾರದಲ್ಲಿ ಎಂಜಲಿನಷ್ಟು ಪರಿಣಾಮಕಾರಿಯಲ್ಲ. ಹೀಗಾಗಿ ನಿಯಮ ಬದಲಾವಣೆ ಟೆಸ್ಟ್‌ನಲ್ಲಿ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಪಿಚ್‌ಗಳನ್ನು ಆರಿಸುವಾಗ ಬೌಲರ್‌ಗಳ ಫ್ರೆಂಡ್ಲಿ ಪಿಚ್‌ಗಳನ್ನು ಆರಿಸುವುದು ಐಸಿಸಿ ಜವಾಬ್ದಾರಿಯಾಗಿದೆ,' ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

Story first published: Monday, June 15, 2020, 22:21 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X