ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

Why Should I Not Praise Virat Kohli? Shoaib Akhtar Responds To Criticism

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ನಿವೃತ್ತಿಯ ನಂತರ ಮುಕ್ತ ಮನೋಭಾವದಿಂದ ಹಲವಾರು ಭಾರಿ ಭಾರತೀಯ ಕ್ರಿಕೆಟಿಗರನ್ನು ಹೊಗಳಿ ಮಾತುಗಳನ್ನಾಡಿದ್ದಾರೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಶೋಯೆಬ್ ಅಖ್ತರ್ ಸಾಕಷ್ಟು ಸಂದರ್ಭದಲ್ಲಿ ಸಕಾರಾತ್ಮಕವಾಗಿ ಪ್ರಸ್ತಾಪಿಸಿದ್ದಾರೆ. ಆದರೆ ಈ ಕಾರಣಕ್ಕಾಗಿ ಶೋಯೆಬ್ ಅಖ್ತರ್ ಪಾಕಿಸ್ತಾನೀಯರಿಂದ ಟೀಕೆಗೂ ಗುರಿಯಾಗಿದ್ದಾರೆ. ಈ ಟೀಕಾಕಾರರಿಗೆ ಶೋಯೆಬ್ ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ತನ್ನ ವಿರುದ್ಧ ಬಂದ ಟೀಕೆಗಳಿಗೆ ಶೋಯೆಬ್ ಅಖ್ತರ್ ಮರು ಪ್ರಶ್ನೆಯನ್ನು ಹಾಕಿದ್ದಾರೆ. ನಾನು ಯಾವ ಕಾರಣಕ್ಕಾಗಿ ಭಾರತೀಯ ಕ್ರಿಕೆಟಿಗರನ್ನು ಟೀಕಿಸಲಿ. ಪ್ರಸಕ್ತ ಕಾಲದಲ್ಲಿ ಅವರು ವಿಶ್ವ ಕ್ರಿಕೆಟ್‌ಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿರುವಾಗ ಟೀಕಿಸಲು ಕಾರಣವೇನಿದೆ ಎಂದು ಟೀಕಾಕಾರರಿಗೇ ಪ್ರಶ್ನಿಸಿದ್ದಾರೆ ಅಖ್ತರ್

ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿ: ಮಾಹಿತಿ ನೀಡಿದ ಗಂಗೂಲಿಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿ: ಮಾಹಿತಿ ನೀಡಿದ ಗಂಗೂಲಿ

ಕೊಹ್ಲಿ, ಶರ್ಮಾ ಬಗ್ಗೆ ನಿರಂತರ ಪ್ರಶಂಸೆ

ಕೊಹ್ಲಿ, ಶರ್ಮಾ ಬಗ್ಗೆ ನಿರಂತರ ಪ್ರಶಂಸೆ

ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಬಗ್ಗೆ ನಿರಂತರವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪಾಕಿಸ್ತಾನದ ಆಟಗಾರರನ್ನು ಭಾರತಿಯ ಕ್ರಿಕೆಟಿಗರಿಗೆ ಹೋಲಿಕೆಯನ್ನು ಮಾಡಿತ್ತಾ ಪಾಕ್ ಆಟಗಾರರನ್ನು ನಿರಂತರ ಟೀಕೆ ಮಾಡುತ್ತಾ ಬಂದಿದ್ದಾರೆ. ಅಖ್ತರ್ ಅವರ ಈ ರೀತಿಯ ಮಾತುಗಳಿಗೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಟೀಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೊಹ್ಲಿಯ ಸಮೀಪಕ್ಕೆ ಬರುವ ಕ್ರಿಕೆಟಿಗ ಯಾರಾದರೂ ಇದ್ದಾರಾ?

ಕೊಹ್ಲಿಯ ಸಮೀಪಕ್ಕೆ ಬರುವ ಕ್ರಿಕೆಟಿಗ ಯಾರಾದರೂ ಇದ್ದಾರಾ?

ನಾನು ಹೇಗೆ ವಿರಾಟ್ ಕೊಹ್ಲಿಯನ್ನು ಪ್ರಶಂಸೆ ಮಾಡದೆ ಇರಲಿ? ವಿರಾಟ್ ಕೊಹ್ಲಿಯ ಆಟದ ಸಮೀಪಕ್ಕೆ ಬರುವ ಯಾರಾದರೂ ಆಟಗಾರ ಪಾಕಿಸ್ತಾನದಲ್ಲಿ ಯಾರಾದರೂ ಇದ್ದಾರಾ? ವಿಶ್ವ ಕ್ರಿಕೆಟ್‌ನಲ್ಲೇ ಯಾರಾದರೂ ಇದ್ದಾರಾ? ಜನರು ಯಾಕೆ ನನ್ನ ಮೇಲೆ ಆಕ್ರೋಶಗೊಳ್ಳುತ್ತಾರೆ ಎಂದು ನನಗೆ ಅರ್ಥವೇ ಆಗುತ್ತಿಲ್ಲ. ನನ್ನನ್ನು ಟೀಕಿಸುವ ಮುನ್ನ ಕೊಹ್ಲಿಯ ಅಂಕಿಅಂಶಗಳತ್ತ ಒಮ್ಮೆ ದೃಷ್ಠಿ ಹಾಯಿಸಲಿ" ಎಂಬ ಶೋಯೆಬ್ ಅಖ್ತರ್ ಹೇಳಿಕೆಯನ್ನು ಕ್ರಿಕೆಟ್ ಪಾಕಿಸ್ತಾನ ಪ್ರಕಟಿಸಿದೆ.

ಹಿಂದೆ ಸ್ಥಿತಿ ಭಿನ್ನವಾಗಿತ್ತು

ಹಿಂದೆ ಸ್ಥಿತಿ ಭಿನ್ನವಾಗಿತ್ತು

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಹಿಂದಿನ ವೈಭವದ ದಿನಗಳ ಬಗ್ಗೆಯೂ ಅಖ್ತರ್ ಮಾತನಾಡಿದ್ದಾರೆ. "ಒಂದು ಕಾಲವಿತ್ತು, ಆಗ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ನೋಡಿ ಪಾಕ್ ಕ್ರಿಕೆಟಿಗರಂತೆ ಆಗಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬಿನ್ನವಾಗಿದೆ ಎಂದಿದ್ದಾರೆ.

ಕೊಹ್ಲಿ ಸಾಮರ್ಥ್ಯದ ಬಗ್ಗೆ ಸಂಶಯವಿದೆಯಾ?

ಕೊಹ್ಲಿ ಸಾಮರ್ಥ್ಯದ ಬಗ್ಗೆ ಸಂಶಯವಿದೆಯಾ?

ಕೊಹ್ಲಿಯ ಸಾಮರ್ಥ್ಯದ ಬಗ್ಗೆ ಸಂಶಯವಿದ್ದರೆ ಆತನ ಅಂಕಿಅಂಶದತ್ತ ಗಮನಹರಿಸಲಿ ಎಂದಿದ್ದಾರೆ ಅಖ್ತರ್. ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 27 ಶತಕಗಳೊಂದಿಗೆ 7240 ರನ್ ಗಳಿಸಿದ್ದಾರೆ. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ 248 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 43 ಶತಕಗಳೊಂದಿಗೆ 11867 ಎನ್‌ಗಳನ್ನು ಬಾರಿಸಿದ್ದಾರೆ.

ಟೀಕಾಕಾರರಿಗೆ ಮತ್ತಷ್ಟು ಪ್ರಶ್ನೆ

ಟೀಕಾಕಾರರಿಗೆ ಮತ್ತಷ್ಟು ಪ್ರಶ್ನೆ

ವಿರಾಟ್ ಕೊಹ್ಲಿ 70 ಶತಕಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಬೇರೆ ಯಾವ ಆಟಗಾರ ಸದ್ಯಕ್ಕೆ ಈ ಸಾಧನೆಯನ್ನು ಮಾಡಿದ್ದಾರೆ? ಭಾರತಕ್ಕಾಗಿ ಎಷ್ಟು ಸರಣಿಗಳನ್ನು ವಿರಾಟ್ ಕೊಹ್ಲಿ ಗೆದ್ದು ಕೊಟ್ಟಿದ್ದಾರೆ? ಆತನನ್ನು ನಾನು ಪ್ರಶಂಸಿಸಬಾರದಾ ಎಂದು ಶೋಯೆಬ್ ಅಖ್ತರ್ ಟೀಕಾಕಾರಿಗೆ ಮರು ಪ್ರಶ್ನೆಗಳನ್ನು ಹಾಕಿದ್ದಾರೆ.

ಇದೊಂದು ದೊಡ್ಡ ವಿಪರ್ಯಾಸ

ಇದೊಂದು ದೊಡ್ಡ ವಿಪರ್ಯಾಸ

ವಿರಾಟ್ ಕೊಹ್ಲಿ ವಿಶ್ವದ ಬೃಹತ್ ಬ್ಯಾಟ್ಸ್‌ಮನ್‌ ಎಂದು ನಾವೆಲ್ಲಾ ಸ್ಪಷ್ಟವಾಗಿ ಹೇಳಬಹುದು. ಆತ ಮತ್ತು ರೋಹಿತ್ ಶರ್ಮಾ ಪ್ರತೀ ಬಾರಿಯೂ ಅದ್ಭುತ ಆಟಗಳನ್ನು ಆಡುತ್ತಾರೆ. ಹಾಗಿದ್ದರೂ ಮತ್ಯಾಕೆ ಅವರ ಆಟವನ್ನು ಪ್ರಶಂಸಿಸಬಾರದು. ಇದು ತುಂಬಾ ದೊಡ್ಡ ವಿಪರ್ಯಾಸದ ಸಂಗತಿ ಎಂದು ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ.

Story first published: Thursday, September 3, 2020, 19:16 [IST]
Other articles published on Sep 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X