ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್‌ ಓವರ್‌ನಲ್ಲಿ ABD ಜೊತೆಗೆ ಕೊಹ್ಲಿ ಬ್ಯಾಟಿಂಗ್‌ಗೆ ಬಂದಿದ್ದೇಕೆ?

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಿನ್ನೆ (ಸೆಪ್ಟೆಂಬರ್ 29) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ಬಡಿಸಿದ್ದಂತು ಸುಳ್ಳಲ್ಲ. ಟೀಮ್ ಇಂಡಿಯಾ ಕ್ಯಾಪ್ಟನ್‌ ಹಾಗೂ ಇಂಡಿಯನ್ಸ್‌ ಕ್ಯಾಪ್ಟನ್ ನಡುವಿನ ಹಣಾಹಣಿಯಲ್ಲಿ ಕೊನೆಯ ಕ್ಷಣದವರೆಗೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು.

ಆರ್‌ಸಿಬಿ ನೀಡಿದ 202 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಅಷ್ಟೇ ರನ್‌ ಗಳಿಸಿದ ಪರಿಣಾಮ ಪಂದ್ಯ ಟೈ ಆಗಿತು. ಪರಿಣಾಮ ಸೂಪರ್‌ ಓವರ್‌ ಮೇಲೆ ಫಲಿತಾಂಶ ನಿರ್ಧಾರಗೊಂಡಾಗ ಆರ್‌ಸಿಬಿರ ಹೀರೋ ಆಗಿ ಮಿಂಚಿದ್ದು, ನವದೀಪ್ ಸೈನಿ. ಅತ್ತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕಿರಾನ್ ಪೊಲಾರ್ಡ್‌, ಹಾರ್ದಿಕ್ ಪಾಂಡ್ಯರಂತಹ ಸ್ಟ್ರೈಕರ್‌ಗಳಿದ್ರೂ ಕೇವಲ ಏಳು ರನ್‌ ನೀಡಿ ಎಲ್ಲರ ಹುಬ್ಬೇರಿಸಿದ್ರು.

ಐಪಿಎಲ್ 2020: ಆತನೋರ್ವ ಸಕಲಕಲಾವಲ್ಲಭ ಎಂದ ವಾಶಿಂಗ್ಟನ್ ಸುಂದರ್ಐಪಿಎಲ್ 2020: ಆತನೋರ್ವ ಸಕಲಕಲಾವಲ್ಲಭ ಎಂದ ವಾಶಿಂಗ್ಟನ್ ಸುಂದರ್

ಮುಂಬೈ ಇಂಡಿಯನ್ಸ್‌ ನೀಡಿದ 8ರನ್‌ಗಳ ಗುರಿಯನ್ನ ಬೆನ್ನಟ್ಟುವಾಗ ಅಭಿಮಾನಿಗಳ ಮನದಲ್ಲಿ ಅದಾಗಲೇ ಖಾತರಿಯಾಗಿತ್ತು ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಬಂದೇ ಬರ್ತಾರೆ ಎಂದು. ಆದರೆ ಎಬಿಡಿ ಜೊತೆಗೆ ಯಾರು ಬರ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿತ್ತು.

ಎಬಿಡಿ ಜೊತೆಗೆ ಕಣಕ್ಕಿಳಿದ ಕೊಹ್ಲಿ

ಎಬಿಡಿ ಜೊತೆಗೆ ಕಣಕ್ಕಿಳಿದ ಕೊಹ್ಲಿ

ಹೌದು ಎಬಿಡಿ ಜೊತೆಗೆ ಯಾರು ಓಪನಿಂಗ್ ಬರ್ತಾರೆ ಅನ್ನೋ ಕುತೂಹಲಕ್ಕೆ ಕ್ಯಾಪ್ಟನ್ ಕಿಂಗ್‌ ಕೊಹ್ಲಿ ಎಂಟ್ರಿ ಆಗಿ ಆಶ್ಚರ್ಯ ಮೂಡಿಸಿದ್ರು. ಎಂಟು ರನ್‌ಗಳ ಗುರಿ ಬೆನ್ನತ್ತಲೂ ನಾಯಕನೇ ಕಣಕ್ಕಿಳಿಯುತ್ತಾನೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಎಬಿಡಿ ಅಂಗಳಕ್ಕೆ ಕಾಲಿಟ್ಟ ಕೆಲ ಸೆಕೆಂಡ್‌ಗಳಲ್ಲೇ ವಿರಾಟ್ ಆಗಮನ ಅಚ್ಚರಿಗೆ ಕಾರಣವಾಗಿತ್ತು.

ಫಾರ್ಮ್ ಇರದ ವಿರಾಟ್ ಬರೋದು ಅನುಮಾನ ಮೂಡಿಸಿತ್ತು!

ಫಾರ್ಮ್ ಇರದ ವಿರಾಟ್ ಬರೋದು ಅನುಮಾನ ಮೂಡಿಸಿತ್ತು!

ಮುಂಬೈ ಇಂಡಿಯನ್ಸ್‌ ಪರ ಸೂಪರ್ ಓವರ್‌ನಲ್ಲಿ ಏಳು ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಕಣಕ್ಕಿಳಿದ ಬೌಲರ್ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ. ಹೀಗಿರುವಾಗ ಆತನ ವಿರುದ್ಧ ಆಡಲು ಕಣಕ್ಕಿಳಿಯೋಕೆ ಮುಂಚೆ ಯೋಚನೆ ಮಾಡ್ಬೇಕು. ಅದಾಗಲೇ ಈ ಬಾರಿ ಐಪಿಎಲ್‌ನಲ್ಲಿ ರನ್‌ಗಳಿಸಲು ಪರದಾಡ್ತಿರುವ ಕೊಹ್ಲಿ ಎಬಿಡಿ ಜೊತೆಗೆ ಬರ್ತಾರೆ ಎಂದು ಯಾರು ಅಂದುಕೊಂಡಿರ್ಲಿಲ್ಲ. ಆದರೆ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿದ ವಿರಾಟ್ ಸೂಪರ್ ಓವರ್‌ನಲ್ಲಿ ತನ್ನ ಸೂಪರ್‌ಸ್ಟಾರ್‌ಗಿರಿ ಪ್ರದರ್ಶಿಸಿದ್ರು.

ಬೌಂಡರಿ ಹೊಡೆಯುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನ ದಡ ತಲುಪಿಸಿದ ಕಿಂಗ್ ಕೊಹ್ಲಿ, ತಾವೇ ಸ್ವತಃ ಓಪನಿಂಗ್ ಏಕೆ ಬಂದ್ರೂ ಅನ್ನೋದನ್ನ ಹೇಳಿದ್ರು.

ಸೂಪರ್ ಓವರ್‌ನಲ್ಲೂ ಟೈ ಆದರೆ ಮುಂದೇನು? ವಿಶ್ವಕಪ್ ಫೈನಲ್ ವಿವಾದದ ಬಳಿಕ ಹೊಸ ನಿಯಮ

ಬೌಂಡರಿ, ಸಿಕ್ಸರ್ ಬರದಿದ್ರೂ ವೇಗವಾಗಿ ರನ್‌ ಕದಿಯುವ ತಾಕತ್ತಿದೆ

ಬೌಂಡರಿ, ಸಿಕ್ಸರ್ ಬರದಿದ್ರೂ ವೇಗವಾಗಿ ರನ್‌ ಕದಿಯುವ ತಾಕತ್ತಿದೆ

ಹೌದು, ವಿರಾಟ್‌ ಓಪನಿಂಗ್‌ ಬಂದಾಗ ಫಾರ್ಮ್‌ನಲ್ಲಿರದಿದ್ರೂ ಸ್ಪೆಷಲಿಸ್ಟ್‌ ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಹೊಡೆಯಲು ಪರದಾಡುತ್ತಾರೆ ಎಂದು ಅನೇಕರು ಅಂದು ಕೊಂಡಿದ್ರ. ಕೊಹ್ಲಿ ಅಷ್ಟೇ ಏಕೆ ಯಾರೇ ಬಂದಿದ್ರೂ ಸೂಪರ್‌ ಓವರ್‌ನಲ್ಲಿ ಬುಮ್ರಾಗೆ ರನ್‌ ಹೊಡೆಯುವುದು ಅಷ್ಟು ಸುಲಭವಾಗಿರ್ಲಿಲ್ಲ. ಹೀಗಾಗಿ ದೃಢ ನಿರ್ಧಾರ ತೆಗೆದುಕೊಂಡ ಕೊಹ್ಲಿ ಎಬಿಡಿ ಜೊತೆಗೆ ಕಣಕ್ಕಿಳಿಯುವ ತೀರ್ಮಾನ ಮಾಡಿದ್ರು.

'' ವಿಕೆಟ್‌ಗಳ ನಡುವೆ ವೇಗವಾಗಿ ಓಡಿ ರನ್‌ ಗಳಿಸುವುದನ್ನು ಪರಿಗಣಿಸಿ ಈ ನಿರ್ಧಾರವನ್ನು ನಾನು ತೆಗೆದುಕೊಂಡೆ. ಯಾರು ಜೋಡಿಯಾಗಿ ಹೋಗಿ ಪಂದ್ಯವನ್ನು ಗೆಲ್ಲಿಸಲು ಉತ್ತಮ ಎಂದು ಯೋಚಿಸಿದಾಗ ನಾನು ಮತ್ತು ಎಬಿಡಿ ಉತ್ತಮ ಎಂದು ಅನಿಸಿತು ಹಾಗಾಗಿ ಇಬ್ಬರು ಬಂದೆವು ಅದರಂತೆ ಜವಾಬ್ದಾರಿ ನಿಭಾಯಿಸಿದೆವು'' ಎಂದು ಹೇಳಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್‌ ಆಟಗಾರರು ಚೆನ್ನಾಗಿ ಆಡಿದ್ದಾರೆ. ಅವರು ತಾಳ್ಮೆಯಿಂದ ಆಡಿದ್ದಾರೆ, ನಾವು ಕೆಲವು ವಿಷಯಗಳನ್ನು ಕಾರ್ಯಗತಗೊಳಿಸಲು ಬಯಸಿದ್ದೆವು, ಅದರಂತೆ ನಾವು ಗೆಲುವನ್ನು ಸಾಧಿಸಿದ್ದೇವೆ ಎಂದು ವಿರಾಟ್‌ ಹೇಳಿದ್ದಾರೆ.

ವಿರಾಟ್ ಮೆಚ್ಚಿದ ಆರ್‌ಸಿಬಿ ಆಟಗಾರರು ಇವರು

ವಿರಾಟ್ ಮೆಚ್ಚಿದ ಆರ್‌ಸಿಬಿ ಆಟಗಾರರು ಇವರು

ಇನ್ನು ಆರ್‌ಸಿಬಿ ನಿನ್ನೆ ಗೆಲ್ಲಲು ಎಬಿಡಿ ಎಷ್ಟು ಕಾರಣವೋ ಅಷ್ಟೇ ಮಟ್ಟಿಗೆ ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಆಟವೂ ಪ್ರಮುಖ ಪಾತ್ರವಹಿಸಿತು.

ವಾಷಿಂಗ್‌ಟನ್‌ ಸುಂದರ್‌ ಮತ್ತು ನವದೀಪ್‌ ಸೈನಿಯ ಪ್ರದರ್ಶನ ಮೆಚ್ಚಿಕೊಂಡ ವಿರಾಟ್‌, ಗೆಲುವಿನಲ್ಲಿ ತಂಡದ ಎಲ್ಲಾ ಆಟಗಾರರ ಪಾತ್ರ ಮುಖ್ಯವಾಗಿತ್ತು ಎಂದು ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

Story first published: Tuesday, September 29, 2020, 16:18 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X