ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನ ಬಳಿಕ ವಿಂಡೀಸ್ ತಂಡಕ್ಕೆ ಮತ್ತೊಂದು ಆಘಾತ: ಏಕದಿನ ಸರಣಿಗೆ ಪ್ರಮುಖ ಆಟಗಾರ ಅಲಭ್ಯ ಸಾಧ್ಯತೆ!

WI vs IND: West Indies all-rounder Jason Holder tested covid positive likely to miss the entire ODI series

ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದ ವೆಸ್ಟ್ ಇಂಡೀಸ್ ತಂಡ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆಯಲ್ಲಿದೆ. ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಹೊರಬರಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಕೂಡ ಗೆಲ್ಲುವ ಒತ್ತಡದಲ್ಲಿದೆ ಪೂರನ್ ಪಡೆ. ಈ ಸಂದರ್ಭದಲ್ಲಿ ತಂಡದ ಪ್ರಮುಖ ಆಟಗಾರ ಸಂಪೂರ್ಣ ಏಜದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ವೆಸ್ಟ್ ಇಂಡೀಸ್ ತಂಡದ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್‌ಗೆ ಕೊರೊನಾವೈರಸ್ ದೃಡಪಟ್ಟಿದೆ. ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿಯೂ ಹೋಲ್ಡರ್ ಕಣಕ್ಕಿಳಿದಿರಲಿಲ್ಲ. ಇದೀಗ ಸಂಪೂರ್ಣ ಏಕದಿನ ಸರಣಿಯಿಂದ ಅನುಭವಿ ಆಟಗಾರ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

Ind vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆInd vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆ

ವೆಸ್ಟ್ ಇಂಡೀಸ್ ತಂಡಕ್ಕೆ ಹಿನ್ನಡೆ

ವೆಸ್ಟ್ ಇಂಡೀಸ್ ತಂಡಕ್ಕೆ ಹಿನ್ನಡೆ

30ರ ಹರೆಯದ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳ ಪೈಕಿ ಒಬ್ಬರು ಎನಿಸಿಕೊಂಡಿದ್ದಾರೆ. ಸೀಮೊತ ಓವರ್‌ಗಳ ಕ್ರಿಕೆಟ್‌ನಲ್ಲಿ ರನ್‌ ನಿಯಂತ್ರಣದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿರುವ ಹೋಲ್ಡರ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಬಲ್ಲ ಆಟಗಾರ. ತನ್ನ ಅನುಭವದ ಮೂಲಕ ತಂಡಕ್ಕೆ ಉತ್ತಮವಾಗಿ ನೆರವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಸುರಕ್ಷಿತ ಫೀಲ್ಡರ್ ಎಂದು ಕೂಡ ಹೆಸರಾಗಿದ್ದಾರೆ ಹೋಲ್ಡರ್. ಹೀಗಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಹೋಲ್ಡರ್ ಅಲಭ್ಯತೆ ಖಂಡಿತಾ ಹಿನ್ನಡೆಯಾಗಲಿದೆ.

ಟಾಸ್ ಸಂದರ್ಭದಲ್ಲಿ ಮಾಹಿತಿ ನೀಡಿದ್ದ ಪೂರನ್

ಟಾಸ್ ಸಂದರ್ಭದಲ್ಲಿ ಮಾಹಿತಿ ನೀಡಿದ್ದ ಪೂರನ್

ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಅನುಭವಿ ಜೇಸನ್ ಹೋಲ್ಡರ್‌ ಕೊರೊನಾವೈರಸ್ ಸಂಪರ್ಕಕ್ಕೆ ಒಳಗಾಗಿರುವುದನ್ನು ಬಹಿರಂಗಪಡಿಸಿದ್ದರು. "ದುರದೃಷ್ಟವಶಾತ್ ಜೇಸನ್ ಹೋಲ್ಡರ್ ಕೊರೊನಾವೈರಸ್‌ನ ಕಾರಣದಿಂದಾಗಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಹಾಗಾಗಿ ಬಾಂಗ್ಲಾದೇಶದ ವಿರುದ್ಧ ಆಡಿದ ತಂಡದೊಂದಿಗೆ ನಾವು ಆಡುತ್ತಿದ್ದೇವೆ" ಎಂದು ಪೂರನ್ ಹೇಳಿದ್ದರು.

ರೋಚಕವಾಗಿ ಅಂತ್ಯವಾದ ಎರಡನೇ ಪಂದ್ಯ

ರೋಚಕವಾಗಿ ಅಂತ್ಯವಾದ ಎರಡನೇ ಪಂದ್ಯ

ಏಕದಿನ ಸರಣಿಯ ಮೊದಲ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಮೊದಲಿಗೆ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ಶಿಖರ್ ಧವನ್ ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಭರ್ಜರಿ ಬ್ಯಾಟಿಂಗ್‌ನ ಕಾರಣದಿಂದಾಗಿ 308ರನ್‌ಗಳಿಸಿ ಬೃಹತ್ ಮೊತ್ತದ ಗುರಿ ನಿಗದಿ ಪಡಿಸಿತು. ಅಂತಿಮ ಹಂತದಲ್ಲಿ ವೆಸ್ಟ್ ಇಂಡೀಸ್ ತಂಡದ ಬೌಲಿಂಗ್ ವಿಭಾಗ ಕೂಡ ಯಶಸ್ಸು ಗಳಿಸಲು ಸಾಧ್ಯವಾಗಿದ್ದು ಭಾರತದ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್‌ನಲ್ಲಿ ಮಿಂಚಿದ ವಿಂಡೀಸ್ ಬಹುತೇಕ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಎಡವುವ ಮೂಲಕ ಕೇವಲ ಮೂರು ರನ್‌ಗಳ ಅಂತರದಿಂದ ಸೋಲು ಕಂಡಿದೆ.

Shubman Gill ಆಟ ನೋಡಿ ಟೀಮ್ ಇಂಡಿಯಾ ಅಭಿಮಾನಿಗಳು ಏನ್ ಹೇಳ್ತಾರೆ | *Cricket | OneIndia Kannada
ಆಡುವ ಬಳಗ

ಆಡುವ ಬಳಗ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬೆಂಚ್: ಕೀಸಿ ಕಾರ್ಟಿ, ಕೀಮೋ ಪಾಲ್

ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ,
ಬೆಂಚ್: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್

Story first published: Saturday, July 23, 2022, 11:45 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X