ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!

Will BCCI apply Tambe rule in Yuvraj Singh case too?

ಬೆಂಗಳೂರು: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ನಿವೃತ್ತಿ ವಾಪಸ್ ಪಡೆದು ಮತ್ತೆ ಭಾರತೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಯೋಚಿಸಿದ್ದಾರೆ. ಈಗಾಗಲೇ ಯುವಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ ಈ ಬಗ್ಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. 2019ರ ಜೂನ್‌ನಲ್ಲಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಯುವರಾಜ್, ತಾನಿನ್ನು ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದರು. ಆದರೀಗ ಯುವಿಗೆ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡುವ ಮನಸ್ಸಾಗಿದೆ.

ಹರ್ಭಜನ್ ಸಿಂಗ್‌ಗೆ ಚೆನ್ನೈ ಉದ್ಯಮಿಯಿಂದ 4 ಕೋ.ರೂ. ಮೋಸ!ಹರ್ಭಜನ್ ಸಿಂಗ್‌ಗೆ ಚೆನ್ನೈ ಉದ್ಯಮಿಯಿಂದ 4 ಕೋ.ರೂ. ಮೋಸ!

ಕ್ರಿಕೆಟ್ ನಿವೃತ್ತಿ ವಾಪಸ್ ಪಡೆದು ಪಂಜಾಬ್‌ ಪರ ಆಡುವಂತೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ (ಪಿಸಿಎ), ಯುವರಾಜ್ ಅವರಲ್ಲಿ ವಿನಂತಿಸಿಕೊಂಡಿತ್ತು. ಪಿಸಿಎ ವಿನಂತಿಯನ್ನು ಯುವಿ ಪರಿಗಣಿಸಿದ್ದೂ ನಿಜ. ಆದರೆ ಯುವಿ ಮತ್ತೆ ದೇಸೀ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯಾನಾ?

ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!

ಯುವರಾಜ್ ಸಿಂಗ್ ವಿಚಾರದಲ್ಲೂ ಬಿಸಿಸಿಐ ಪ್ರವೀಣ್ ತಾಂಬೆಯ ನಿಯಮವನ್ನೇ ಅನುಸರಿಸಿದರೆ ಏನಾಗಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ವಿವರಣೆ ಕೊಡುವ ಪ್ರಯತ್ನ ಮಾಡಿದ್ದೇವೆ.

ವಿದೇಶಿ ಲೀಗ್‌ನಲ್ಲಿ ಭಾಗಿ

ವಿದೇಶಿ ಲೀಗ್‌ನಲ್ಲಿ ಭಾಗಿ

ಯುವಿಗೀಗ 38ರ ಹರೆಯ. 2019ರ ಜೂನ್‌ನಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಯುವಿ ಕಳೆದ ಆಗಸ್ಟ್‌ನಲ್ಲಿ ಗ್ಲೋಬಲ್ ಟಿ20 ಲೀಗ್‌ನಲ್ಲಿ ಟೊರೆಂಟೋ ನ್ಯಾಷನಲ್ಸ್ ಪರ ಆಡಿದ್ದರು. ಅದಾಗಿ ಅಬುಧಾಬಿಯ ಟಿ10 ಲೀಗ್‌ನಲ್ಲಿ ಮರಾಠಾ ಅರೆಬಿಯನ್ಸ್ ಪ್ರತಿನಿಧಿಸಿದ್ದರು. ಇದೇಕೆಂದರೆ, ಯುವಿ ನಿವೃತ್ತಿ ನೀಡುವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಲ್ಲದೆ ದೇಸಿ ಕ್ರಿಕೆಟ್ ಮತ್ತು ಐಪಿಎಲ್ ಕೂಡ ಸೇರಿಸಿ ನಿವೃತ್ತಿ ಘೋಷಿಸಿದ್ದರು. ಇಲ್ಲದಿದ್ದರೆ ಯುವಿ ಈ ಬಾರಿಯ ಐಪಿಎಲ್‌ನಲ್ಲೂ ಕಾಣಿಸಿಕೊಳ್ಳಲು ಅವಕಾಶವಿತ್ತು.

ಪ್ರವೀಣ್ ತಾಂಬೆಯ ಕತೆ

ಪ್ರವೀಣ್ ತಾಂಬೆಯ ಕತೆ

ಮುಂಬೈ ಲೆಗ್‌ ಸ್ಪಿನ್ನರ್ ಪ್ರವೀಣ್ ತಾಂಬೆ ಕೂಡ ಇಂಥದ್ದೇ ಸಂಗತಿಗಾಗಿ ಕಾಣಿಸಿಕೊಂಡಿದ್ದರು. 2018ರಲ್ಲಿ ನಿವೃತ್ತಿ ಘೋಷಿಸಿದ್ದ ಪ್ರವೀಣ್ ತಾಂಬೆ ಆ ಬಳಿಕ ಯುಎಇಯಲ್ಲಿ ನಡೆದಿದ್ದ ಟಿ10 ಲೀಗ್‌ನಲ್ಲಿ ಸಿಂಧಿಸ್ ಪರ ಆಡಿದ್ದರು. ಮತ್ತೆ ಟಿ20 ಮುಂಬೈ ಲೀಗ್‌ನಲ್ಲೂ ಆಡಿದ್ದರು.

ಅಹರ್ಗೊಂಡ ತಾಂಬೆ

ಅಹರ್ಗೊಂಡ ತಾಂಬೆ

2019ರಲ್ಲಿ ನಿವೃತ್ತಿ ವಾಪಸ್ ಪಡೆದ ತಾಂಬೆ ಐಪಿಎಲ್‌ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಆಟಗಾರರ ಹರಾಜಿನ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತಾಂಬೆಯನ್ನು 20 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಅಷ್ಟರಲ್ಲಾಗಲೇ ಬಿಸಿಸಿಐ ತಾಂಬೆಯನ್ನು ಐಪಿಎಲ್‌ನಿಂದ ಅನರ್ಹಗೊಳಿಸಿತು. ತಾಂಬೆ ಈಗಾಗಲೇ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಿದ್ದರಿಂದ ಮತ್ತೆ ಐಪಿಎಲ್‌ನಲ್ಲಿ ಆಡುವಂತಿಲ್ಲ ಎಂದು ಹೇಳಿತ್ತು. ಹೀಗಾಗಿ ಮತ್ತೆ ನಿವೃತ್ತಿ ಘೋಷಿಸಿದ ತಾಂಬೆ ಗುರುವಾರವಷ್ಟೇ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡಿದ್ದರು.

ಯುವಿ ಆಡ್ತಾರಾ, ಇಲ್ವಾ?

ಯುವಿ ಆಡ್ತಾರಾ, ಇಲ್ವಾ?

2012ರಲ್ಲಿ ಕ್ಯಾನ್ಸರ್‌ನಿಂದ ಗೆದ್ದು ಬಂದ ಬಳಿಕ ಯುವಿಗೆ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ಯುವಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಕೇವಲ 21 ಪಂದ್ಯಗಳಲ್ಲಷ್ಟೇ ಆಡಿದ್ದರು. ಸಿಂಗ್ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡಿದರೆ ಎಲ್ಲರಿಗೂ ಖುಷಿಯೇ. ಆದರೆ ಬಿಸಿಸಿಐ ನಿಯಮ ದುರ್ಬಲವಾದಂತಾಗುತ್ತದೆ. ಉಳಿದ ಆಟಗಾರರೂ ಹೀಗೇ ವಿದೇಶಿ ಲೀಗ್‌ಗಳಲ್ಲಿ ಆಡಿ ಮತ್ತೆ ನಿವೃತ್ತಿ ವಾಪಸ್ ಪಡೆಯುತ್ತೇನೆ ಎನ್ನಲೂಬಹುದು. ಅಂತೂ ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

Story first published: Friday, September 11, 2020, 14:43 [IST]
Other articles published on Sep 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X