ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಬಲ್ಲೆ: ಕ್ರಿಸ್ ಗೇಲ್ ಆತ್ಮವಿಶ್ವಾಸದ ಮಾತು

Will be best in the world in any batting position: Chris Gayle

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಕ್ರಿಸ್ ಗೇಲ್ ಬರೊಬ್ಬರಿ ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ಕ್ರಿಸ್ ಗೇಲ್ ಆಯ್ಕೆಯಾಗಿದ್ದು 2019ರ ವಿಶ್ವಕಪ್ ಬಳಿಕ ಗೇಲ್ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡದ ಜರ್ಸಿಯನ್ನು ತೊಡಲಿದ್ದಾರೆ. ಈ ಬಗ್ಗೆ ಕ್ರಿಸ್ ಗೇಲ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಶ್ರೀಲಂಕಾಗೆ ಪ್ರಕಟಿಸಿರುವ ತಂಡದಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಸಹಿತ ನಾಲ್ವರು ಆರಂಭಿಕ ಆಟಗಾರರು ಇದ್ದಾರೆ. ಹೀಗಾಗಿ ತಾನು ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ನಡೆಸಲು ಸಿದ್ಧ. ಯಾವುದೇ ಕ್ರಮಾಂಕದಲ್ಲಾದರೂ ನಾನು ಶ್ರೇಷ್ಠನಾಗಿ ಆಡುತ್ತೇನೆ ಎಂದಿದ್ದಾರೆ ಕ್ರಿಸ್ ಗೇಲ್. ಮಾರ್ಚ್ ನಾಲ್ಕರಿಂದ ಈ ಸರಣಿ ಆರಂಭವಾಗಲಿದೆ.

ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

"ಈಗ ನಾನು 3ನೇ ಕ್ರಮಾಂಕದ ಸ್ಪೆಶಲಿಸ್ಟ್‌ನಂತೆ ಕಾಣಿಸುತ್ತೇನೆ. ಕಳೆದ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಕೋಚ್ ಅನಿಲ್ ಕುಂಬ್ಳೆ ಈ ಕ್ರಮಾಂಕದಲ್ಲಿ ಆಡುವಂತೆ ಕೇಳಿಕೊಂಡಿದ್ದರು. ಇದನ್ನು ಅವರು ಕಳೆದ ಐಪಿಎಲ್‌ನ ಆರಂಭಕ್ಕೂ ಮುನ್ನವೇ ಉಲ್ಲೇಖಿಸಿದ್ದರು. ಹಾಗಾಗಿ ನನಗೆ ಅದರ ಬಗ್ಗೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಮಯಾಂಕ್ ಮತ್ತು ರಾಹುಲ್ ಅದ್ಭುತವಾಗಿ ರನ್ ಗಳಿಸುತ್ತಿದ್ದ ಕಾರಣ ಅವರು ನನ್ನ ಅನುಭವವನ್ನು ಮೂರನೇ ಕ್ರಮಾಂಕದಲ್ಲಿ ಬಳಸಿಕೊಳ್ಳಲು ಬಯಸಿದ್ದರು" ಎಂದು ಹೇಳಿದ್ದಾರೆ. ಪಂಜಾಬ್ ತಂಡದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿಯೂ ಕ್ರಿಸ್ ಗೇಲ್ ಪಾಳ್ಗೊಳ್ಳಲಿದ್ದು ತಂಡದ ಹೆಸರನ್ನು 'ಪಂಜಾಬ್ ಕಿಂಗ್ಸ್' ಎಂದು ಬದಲಾಯಿಸಲಾಗಿದೆ

"ಅದು ನನಗೆ ಸಮಸ್ಯೆಯಾಗಲಾರದು, ನಾನು ಸ್ಪಿನ್‌ಗೆ ಚೆನ್ನಾಗಿ ಆಡಬಲ್ಲೆ. ಆರಂಭಿಕನಾಗಿ ವೇಗಿಗಳನ್ನು ಎಷ್ಟು ಚೆನ್ನಾಗಿ ಆಡಬಲ್ಲೆನೋ ಅಷ್ಟೇ ಉತ್ತಮವಾಗಿ ಸ್ಪಿನ್‌ಗೆ ಆಡಬಲ್ಲೆ. ಆದರೆ ವೆಸ್ಟ್ ಇಂಡೀಸ್ ತಂಡದ ಮ್ಯಾನೇಜ್‌ಮೆಂಟ್ ನನ್ನನ್ನು ಯಾವ ಕ್ರಮಾಂಕದಲ್ಲಿ ನೋಡಲು ಬಯಸುತ್ತದೋ ಅದೇ ಕ್ರಮಾಂಕದಲ್ಲಿ ನಾನು ಆಡುವುದನ್ನು ಎದುರುನೋಡುತ್ತೇನೆ" ಎಂದಿದ್ದಾರೆ ಕ್ರಿಸ್ ಗೇಲ್.

ಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

"ನಾನು ಆರಂಭಿಕನಾಗಿ ಆಡಬೇಕಾದರೆ ನಾನು ಅದಕ್ಕೆ ಸಿದ್ಧ. ನಂಬರ್-3, ನಂಬರ್-5 ನಾನು ಅದಕ್ಕೆ ತಯಾರಿದ್ದೇನೆ. ನಾನಿನ್ನು ಕೂಡ ವಿಶ್ವದ ನಂಬರ್ 5 ಅತ್ಯುತ್ತಮ ಆಟಗಾರನಾಗಬಲ್ಲೆ, ನಂಬರ್-3ರ ಬೆಸ್ಟ್ ಬ್ಯಾಟ್ಸ್‌ಮನ್ ಎನಿಸಬಲ್ಲೆ ಎಂದು ಕ್ರಿಸ್ ಗೇಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

Story first published: Tuesday, March 2, 2021, 14:20 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X