ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾಕ್‌ಡೌನ್‌ ಮುಗಿದ ತಕ್ಷಣವೇ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿದ ರೋಹಿತ್ ಶರ್ಮಾ

Will Go To Bengaluru For Training After Lockdown: Rohit Sharma

ಕೊರೊನಾ ವೈರಸ್ ಕಾರಣದಿಂದಾಗಿ ಸದ್ಯ ಎಲ್ಲವೂ ಸ್ಥಬ್ದವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಕ್ರಿಕೆಟಿಗರೂ ಕೂಡ ತಮ್ಮ ತಮ್ಮ ಮನೆಗಳಲ್ಲೇ ಕುಟುಂಬದ ಜೊತೆಗೆ ಕಾಲಕಳೆಯುತ್ತಿದ್ದಾರೆ. ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಲಾಕ್‌ಡೌನ್ ಮುಗಿದ ತಕ್ಷಣವೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ ತೆರಳುವುದಾಗಿ ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಸಹ ಆಟಗಾರ ಮೊಹಮ್ಮದ್ ಶಮಿ ಜೊತೆಗೆ ಶರ್ಮಾ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಶರ್ಮಾ ಮತ್ತು ಶಮಿ ಕೊರೊನಾವೈರಸ್ ಅಂತ್ಯದ ಬಳಿಕ ಕ್ರಿಕೆಟ್‌ಗೆ ಮರಳುವ ವಿಚಾರ, ಸದ್ಯದ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ತರಬೇತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಕಲ ಚೇತನ ಕ್ರಿಕೆಟಿಗರ ಬಾಕಿ ನಗದು ಪುರಸ್ಕಾರ ನೀಡಿದ ಬಿಸಿಸಿಐವಿಕಲ ಚೇತನ ಕ್ರಿಕೆಟಿಗರ ಬಾಕಿ ನಗದು ಪುರಸ್ಕಾರ ನೀಡಿದ ಬಿಸಿಸಿಐ

ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಲಾಕ್‌ಡೌನ್ ಮುಗಿದ ಬಳಿಕ ತಾನು ಬೆಂಗಳೂರಿಗೆ ತೆರಳುತ್ತೇನೆ ಎಂದು ತಿಳಿಸಿದರು. ಮುಂಬೈನಲ್ಲಿ ಏನಾದರು ಸಾಧ್ಯವಾಗತ್ತೆ ಎಂದು ನನಗೆ ಅನಿಸುತ್ತಿಲ್ಲ. ಆದಕ್ಕಾಗಿ ಲಾಕ್‌ಡೌನ್ ಅಂತ್ಯದ ತಕ್ಷಣವೇ ನಾನು ಬೆಂಗಳೂರಿಗೆ ತೆರಳಿ ಅಲ್ಲಿನ ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಮೊಹಮದ್ ಶಮಿ ಮಾತನಾಡುತ್ತಾ "ಲಾಕ್‌ಡೌನ್ ಓಪನ್ ಆದ ತಕ್ಷಣವೇ ಟ್ರೈನಿಂಗ್‌ ಕ್ಯಾಂಪ್ ಸಿದ್ಧಪಡಿಸಲಾಗುತ್ತದೆ ಎಂದು ಫಿಟ್‌ನೆಸ್ ತರಬೇತಿಗೂ ವ್ಯವಸ್ಥೆ ಮಾಡಲಾಗುತ್ತದ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೋಹಿತ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಬಗ್ಗೆ ಹೇಳಿದ್ದಾರೆ.

2032ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆತಿಥ್ಯದ ಯೋಜನೆಯಲ್ಲಿ ಭಾರತ2032ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆತಿಥ್ಯದ ಯೋಜನೆಯಲ್ಲಿ ಭಾರತ

"ನಾವು ಬ್ಯಾಟಿಂಗ್ ಮಾಡಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬೇಕಿದೆ. ನಾನು ಮೊದಲೇ ಗಾಯಗೊಂಡು ಮುಂಬೈಗೆ ವಾಪಾಸಾಗಿದ್ದೆ. ಫೆಬ್ರವರಿಯಲ್ಲಿ ಗಾಯಗೊಂಡ ಬಳಿಕ ಬ್ಯಾಟಿಂಗ್ ನಡೆಸಿಲ್ಲ ಹೀಗಾಗಿ ಎರಡ್ಮೂರು ತಿಂಗಳು ತಯಾರಿ ನಡೆಸಬೇಕಿದೆ, ಬ್ಯಾಟಿಂಗ್ ಕೌಶಲ್ಯದ ಕಡೆಗೆ ಗಮನಹರಿಬೇಕಿದ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Sunday, May 3, 2020, 10:17 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X