ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಯೂರೋ ಟಿ20 ಸ್ಲ್ಯಾಮ್‌ನಲ್ಲಿ ಭಾರತೀಯರನ್ನ ಮಿಸ್ ಮಾಡ್ಕೊಳ್ತಿದ್ದೇನೆ'

Will miss Indian players in Euro T20 Slam, says Rashid Khan

ಕಾಬುಲ್, ಜುಲೈ 20: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನೂತನ ನಾಯಕ, ಸ್ಟಾರ್ ಲೆಗ್‌ ಸ್ಪಿನ್ನರ್ ರಶೀದ್ ಖಾನ್, ತಾನು ಯೂರೋ ಟಿ20 ಸ್ಲ್ಯಾಮ್‌ ಉದ್ಘಾಟನಾ ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆಗಸ್ಟ್ 30ರಿಂದ ಈ ಟೂರ್ನಿ ಆರಂಭಗೊಳ್ಳಲಿದೆ.

ಅಕ್ಸರ್ ಪಟೇಲ್ ಹೋರಾಟ ವ್ಯರ್ಥ, ರೋಚಕ ಪಂದ್ಯ ಗೆದ್ದ ವಿಂಡೀಸ್ 'ಎ'ಅಕ್ಸರ್ ಪಟೇಲ್ ಹೋರಾಟ ವ್ಯರ್ಥ, ರೋಚಕ ಪಂದ್ಯ ಗೆದ್ದ ವಿಂಡೀಸ್ 'ಎ'

2019ರ ಯೂರೋ ಟಿ20 ಸ್ಲ್ಯಾಮ್‌ನಲ್ಲಿ ಆ್ಯಮ್ಸ್‌ಸ್ಟರ್‌ಡ್ಯಾಮ್ ನೈಟ್ಸ್, ರೋಟರ್‌ಡ್ಯಾಮ್ ರೈನೋಸ್, ಎಡಿನ್‌ಬರ್ಗ್ ರಾಕ್ಸ್, ಗ್ಲ್ಯಾಸ್ಗೋ ಜೈಂಟ್ಸ್, ಡಬ್ಲಿನ್ ಚೀಫ್ಸ್ ಮತ್ತು ಬೆಲ್‌ಫಾಸ್ಟ್ ಟೈಟಾನ್ಸ್ ಹೀಗೆ ಒಟ್ಟು ಆರು ಫ್ರಾಂಚೈಸಿಗಳು ಕಾದಾಡಲಿವೆ. ಆರಂಭಿಕ ಪಂದ್ಯದಲ್ಲಿ ರಶೀದ್ ಅವರಿರುವ ರೋಟರ್‌ಡ್ಯಾಮ್ ರೈನೋಸ್ ಮತ್ತು ಆ್ಯಮ್ಸ್‌ಸ್ಟರ್‌ಡ್ಯಾಮ್ ನೈಟ್ಸ್ ನಡುವೆ ಸ್ಪರ್ಧೆ ನಡೆಯಲಿದೆ.

ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಧೋನಿ ಅಲಭ್ಯ, ಪಂತ್‌ಗೆ ಸ್ಥಾನ!?ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಧೋನಿ ಅಲಭ್ಯ, ಪಂತ್‌ಗೆ ಸ್ಥಾನ!?

ಯೂರೋ ಟಿ20 ಸ್ಲ್ಯಾಮ್‌ನಲ್ಲಿ ಈಗ ಟೀಮ್ ಇಂಡಿಯಾದಲ್ಲಿರುವ ಭಾರತೀಯ ಕ್ರಿಕೆಟರ್ಸ್ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಬ್ರಿಯಾನ್ ಲಾರಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಆಡುವಾಗ ಶ್ರೇಷ್ಠ ಭಾವನೆ

ಆಡುವಾಗ ಶ್ರೇಷ್ಠ ಭಾವನೆ

'ಖಂಡಿತವಾಗಿಯೂ. ಭಾರತೀಯ ಆಟಗಾರರ ಜೊತೆ ಆಡೋದು, ಅವರ ಜೊತೆ ಇರೋದು ಶ್ರೇಷ್ಠ ಭಾವನೆ ಮೂಡಿಸುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿರುವ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್‌ ಮಂಡಳಿ ಅನುಮತಿ ನೀಡುವುದರಿಂದ ಪಂದ್ಯಾಟದಲ್ಲಿ ಕೆಲವಾದರೂ ಆಟಗಾರರು ಪಾಲ್ಗೊಳ್ಳುತ್ತಾರೆ ಎಂದು ಭಾವಿಸಿದ್ದೇನೆ,' ಎಂದು ರಶೀದ್ ಹೇಳಿದ್ದಾರೆ.

ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಮಿಸ್ ಮಾಡಿಕೊಳ್ಳುತ್ತಿದ್ದೇನೆ

'ಐಪಿಎಲ್‌ನಲ್ಲಿ ಭಾರತೀಯ ಕ್ರಿಕೆಟರ್‌ಗಳ ಜೊತೆಗೆ, ಅವರದೇ ತಂಡದಲ್ಲಿದ್ದು ಆಡಿದ್ದು ಖುಷಿ ನೀಡಿದೆ. ಇಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತ ಖಾನ್ ಹೇಳಿದರು. ಐಪಿಎಲ್‌ನಲ್ಲಿ ರಶೀದ್ ಖಾನ್ ಅವರು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದರು.

ಬಿಸಿಸಿಐನಿಂದ ಅನುಮತಿಯಿಲ್ಲ

ಬಿಸಿಸಿಐನಿಂದ ಅನುಮತಿಯಿಲ್ಲ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಭಾರತೀಯ ಕ್ರಿಕೆಟಿಗರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊರತಾಗಿ ಇನ್ಯಾವುದೇ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ನೀಡಿಲ್ಲ. ಹೀಗಾಗಿ ಗ್ಲೋಬಲ್ ಟಿ20 (ಜಿ20) ಬ್ರ್ಯಾಂಡ್‌ಅಂಬಾಸಿಡರ್, ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಯಾನ್ ಲಾರಾ ಬೇಸರ

ಬ್ರಿಯಾನ್ ಲಾರಾ ಬೇಸರ

'ನಾನು ಬಿಸಿಸಿಐಯನ್ನು ಅಥವಾ ಇನ್ಯಾರೇ ಆಟಗಾರರನ್ನು ಟೀಕಿಸಲು ಹೋಗುತ್ತಿಲ್ಲ. ಆದರೆ ಇಂಥ ಟೂರ್ನಿಗಳಲ್ಲಿ ಭಾರತದ ಶ್ರೇಷ್ಠ ಆಟಗಾರರನ್ನು ಕಾಣಲು ವಿಶ್ವ ಬಯಸುತ್ತದೆ. ಕ್ರಿಕೆಟ್‌ ಟೂರ್ನಿಗಳ ವೇಳೆ ಆಕರ್ಷಣೆ ಮೂಡಿಸುವ ಭಾರತೀಯ ಆಟಗಾರರನ್ನು ಬಿಸಿಸಿಐ ಯಾಕೆ ಅಡಗಿಸಿಡಲು ಯತ್ನಿಸುತ್ತಿದೆಯೋ ನನಗೆ ಗೊತ್ತಾಗುತ್ತಿಲ್ಲ,' ಎಂದು ಲಾರಾ ಹೇಳಿಕೊಂಡಿದ್ದಾರೆ.

Story first published: Saturday, July 20, 2019, 18:16 [IST]
Other articles published on Jul 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X