ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ಅಶ್ವಿನ್ ಗೆ ಶಾಕ್ ನೀಡಿದ ಕಿಂಗ್ಸ್: ಅತಂತ್ರ ಸ್ಥಿತಿಯಲ್ಲಿ ಸ್ಪಿನ್ ಮಾಂತ್ರಿಕ

By ಚಕ್ರವರ್ತಿ
IPL 2020 : ಅತಂತ್ರ ಸ್ಥಿತಿಯಲ್ಲಿ ಸ್ಪಿನ್ ಮಾಂತ್ರಿಕ | R Ashwin
Will R Ashwin Loses Captaincy From Kings Xi Punjab?

ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಾಲಿಗೆ ಎಲ್ಲವೂ ಕೈ ಕೊಡುತ್ತಿದೆ. ಆ ಕಡೆ ಭಾರತ ಏಕದಿನ ಮತ್ತು ಟಿ-20 ತಂಡದಿಂದ ಹೊರಗುಳಿದಿದ್ದಾರೆ. ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ವೆಸ್ಟ್ ಇಂಡೀಸ್ ಸರಣಿ ಅಶ್ವಿನ್ ಪಾಲಿಗೆ ನಿರ್ಣಾಯಕ.

ಅಂತಾರಾಷ್ಟ್ರೀಯ ತಂಡಕ್ಕೆ ಮರಳಲು ಹರಸಾಹಸ ಪಡುತ್ತಿರುವ ಅಶ್ವಿನ್ ಗೆ ಈಗ ಐಪಿಎಲ್ ನಲ್ಲೂ ಹಿನ್ನಡೆಯಾಗಿದೆ. ಕಳೆದ ಎರಡು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಮುನ್ನಡೆಸಿರುವ ಅಶ್ವಿನ್ ಗೆ ಈಗ ಕಿಂಗ್ಸ್ ಬಾಗಿಲು ಮುಚ್ಚಿದೆ ಎಂಬ ಸುದ್ದಿ ಬಹಿರಂಗವಾಗಿದೆ.

'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?

ಒಂದು ವೇಳೆ ಇದೇ ನಿಜವಾದರೇ ಮುಂದಿನ ಆವೃತ್ತಿಯಲ್ಲಿ ಆರ್.ಅಶ್ವಿನ್ ಯಾವ ತಂಡದ ಪರ ಆಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಕುತೂಹಲದ ಮಧ್ಯೆಯೇ ಅಶ್ವಿನ್ ಗಾಗಿ ಎರಡು ತಂಡಗಳು ಆಸಕ್ತಿ ತೋರಿದೆ. ಯಾವುದು ಆ ತಂಡಗಳು? ಅಶ್ವಿನ್ ಬದಲಿಗೆ ಪಂಜಾಬ್ ತಂಡವನ್ನು ಯಾರು ಸಮರ್ಥವಾಗಿ ಮುನ್ನಡೆಸಬಲ್ಲರು? ಮುಂದೆ ಓದಿ...

ನಾಯಕತ್ವದಿಂದ ಅಶ್ವಿನ್ ಔಟ್

ನಾಯಕತ್ವದಿಂದ ಅಶ್ವಿನ್ ಔಟ್

2017ರಲ್ಲಿ 7.8 ಕೋಟಿ ರೂಪಾಯಿ ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್ ಅಶ್ವಿನ್ ಅವರನ್ನು ಖರೀದಿಸಿತ್ತು. ಜೊತೆಗೆ ನಾಯಕತ್ವದ ಜವಾಬ್ದಾರಿಯನ್ನ ಕೂಡ ವಹಿಸಿತ್ತು. ಎರಡೂ ಆವೃತ್ತಿಯಲ್ಲೂ ಕಿಂಗ್ಸ್ ಇಲೆವೆನ್ ತಂಡ ಪ್ಲೇ-ಆಫ್ ಪ್ರವೇಶ ಪಡೆಯಲಿಲ್ಲ. ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬೌಲಿಂಗ್ ನಲ್ಲಿ ಮೋಡಿ ಮಾಡದ ಅಶ್ವಿನ್ 28 ಪಂದ್ಯಗಳಿಂದ 25 ವಿಕೆಟ್ ಕಬಳಿಸಿದ್ದರಷ್ಟೇ. ಇದರ ಪರಿಣಾಮ ನಾಯಕತ್ವದಿಂದ ಅಶ್ವಿನ್ ಅವರನ್ನ ಕೆಳಗಿಳಿಸಲು ಕಿಂಗ್ಸ್ ತಂಡ ಮುಂದಾಗಿದೆ.

ಬದಲಿ ಆಟಗಾರ ಸಾಧ್ಯತೆ

ಬದಲಿ ಆಟಗಾರ ಸಾಧ್ಯತೆ

ನಾಯಕತ್ವ ಸ್ಥಾನದಿಂದ ಕೆಳಗೆ ಇಳಿದರೂ ಕಿಂಗ್ಸ್ ತಂಡದಲ್ಲಿ ಅಶ್ವಿನ್ ಆಡ್ತಾರೆ ಎಂಬುದು ಪಕ್ಕಾ ಇಲ್ಲ. ಯಾಕಂದ್ರೆ, ಅಶ್ವಿನ್ ಬದಲು ಬದಲಿ ಆಟಗಾರನನ್ನು ಪಡೆಯಲು ತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಈ ಮೂಲಕ ಅಶ್ವಿನ್ ಅವರನ್ನ ತಂಡದಿಂದ ಕೈಬಿಡಲು ಮ್ಯಾನೇಜ್ ಮೆಂಟ್ ಮುಂದಾಗಿದೆ. ಅಶ್ವಿನ್ ಗೆ ತಂಡದಿಂದ ಕೋಕ್ ಕೊಟ್ಟು, ಕೆ.ಎಲ್ ರಾಹುಲ್ ಗೆ ನಾಯಕತ್ವ ಪಟ್ಟ ಕಟ್ಟಲು ಸಜ್ಜಾಗಿದೆ ಎಂಬ ಮಾಹಿತಿ ಇದೆ.

ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್

ಅಶ್ವಿನ್ ಗಾಗಿ ಎರಡು ಫ್ರಾಂಚೈಸಿ ಆಸಕ್ತಿ

ಅಶ್ವಿನ್ ಗಾಗಿ ಎರಡು ಫ್ರಾಂಚೈಸಿ ಆಸಕ್ತಿ

ಒಂದು ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಶ್ವಿನ್ ಅವರನ್ನ ತಂಡದಿಂದ ಹೊರ ಕಳುಹಿಸಿದರೆ, ಅವರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಎರಡು ಪ್ರಾಂಚೈಸಿ ಆಸಕ್ತಿ ತೋರಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅಶ್ವಿನ್ ಪಾಲಿಗೆ ರೆಡ್ ಕಾರ್ಪೆಟ್ ಹಾಕಿದೆಯಂತೆ. ಆದ್ರೆ, ಎರಡು ತಂಡದಲ್ಲಿ ಅಶ್ವಿನ್ ಗೆ ನಾಯಕತ್ವ ಸ್ಥಾನ ಸಿಗುವ ಸಾಧ್ಯತೆ ಇಲ್ಲ. ಯಾಕಂದ್ರೆ, ಕಳೆದ ಬಾರಿ ಡೆಲ್ಲಿ ತಂಡ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಫ್ಲೇ-ಆಪ್ ತಲುಪಿತ್ತು. ರಾಜಸ್ಥಾನ ತಂಡ ಸ್ವೀವನ್ ಸ್ಮಿತ್ ಮತ್ತು ಅಜಿಂಕ್ಯ ರಹಾನೆಯನ್ನ ನೆಚ್ಚಿಕೊಂಡಿದೆ.

ಅಶ್ವಿನ್ ಮುಂದಿನ ಆಯ್ಕೆ ಏನು?

ಅಶ್ವಿನ್ ಮುಂದಿನ ಆಯ್ಕೆ ಏನು?

ಸದ್ಯದ ಪರಿಸ್ಥಿತಿ ನೋಡಿದ್ರೆ ಅಶ್ವಿನ್ ಗೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಅದೃಷ್ಟ ಕೈಕೊಟ್ಟಿದೆ. ಒಂದು ವೇಳೆ ಕಿಂಗ್ಸ್ ತಂಡದಿಂದ ಅಶ್ವಿನ್ ಹೊರಬಿದ್ದರೆ, ಬೇರೆ ತಂಡದಲ್ಲಿ ಆಟಗಾರನಾಗಿ ಮಾತ್ರ ಆಡಬೇಕಿದೆ. ಆಡುವ ಹನ್ನೊಂದರ ಬಳಗದಲ್ಲಿ ಖಾಯಂ ಸ್ಥಾನ ಸಿಗದೇ ಹೋದರೆ, ಬಹುಶಃ ಮುಂದಿನ ಆವೃತ್ತಿಯೇ ಅಶ್ವಿನ್ ಪಾಲಿಗೆ ಕೊನೆಯ ಆವೃತ್ತಿ ಆದರೂ ಅಚ್ಚರಿ ಇಲ್ಲ.

Story first published: Monday, August 26, 2019, 13:43 [IST]
Other articles published on Aug 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X