ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

40 ಪ್ಲಸ್ ರನ್ ಚೆಚ್ಚಿಸಿಕೊಳ್ಳೋ ಉಮೇಶ ತಂಡಕ್ಕೆ ಬೇಕೇನ್ರೋ!

Will RCB rest Umesh Yadav after a bad game. Who are his possible replacements?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ವೀಕ್ನೆಸ್ ಎಂದರೆ ಅದು ಬೌಲಿಂಗ್ ಎಂದು ಎಲ್ಲರೂ ಹೇಳುತ್ತಾರೆ. ಡೇಲ್ ಸ್ಟೈನ್, ಸೈನಿನಂಥ ಶರವೇಗಿಗಳಿದ್ದರೂ ಸತತ ಕಳಪೆ ಪ್ರದರ್ಶನದ ನಂತರವೂ ಸ್ಥಾನ ಪಡೆದುಕೊಳ್ಳುತ್ತಿರುವ ಭಾರತದ ವೇಗಿ ಉಮೇಶ್ ಯಾದವ್ ತಂಡಕ್ಕೆ ಬೇಕಾ? ಎದುರಾಳಿ, ತಂಡ,ಪಿಚ್ ಅಗತ್ಯಕ್ಕೆ ತಕ್ಕಂತೆ ಕೊಹ್ಲಿ ತಮ್ಮ ಆಡುವ ಹನ್ನೊಂದು ಆಟಗಾರರನ್ನು ಏಕೆ ಆಯ್ಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರಲ್ಲಿ ಇಂದು (ಸೆ. 24) ಕರ್ನಾಟಕದ ಪರ ಆಡುವ ಆಟಗಾರರೇ ತುಂಬಿರುವ ಕಿಂಗ್ಸ್ ಎಲೆವನ್ ಪಂಜಾಬ್ ತಂಡ ಹಾಗೂ ಬೆಂಗಳೂರನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಟ ನಡೆಯಲಿದೆ. ಎರಡು ತಂಡಗಳಲ್ಲೂ ಭರ್ಜರಿ ಬ್ಯಾಟಿಂಗ್ ಲೈನ್ ಅಪ್ ಇದೆ. ಆದರೆ, ಎರಡು ತಂಡಕ್ಕೂ ಬೌಲಿಂಗ್ ಪಡೆ ಆಯ್ಕೆ ಗೊಂದಲ ಇದ್ದೇ ಇದೆ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಸೋಮವಾರ (ಸೆಪ್ಟೆಂಬರ್ 21) ನಡೆದ ಐಪಿಎಲ್ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಜಯ ದಾಖಲಿಸಿದೆ. ಸನ್‌ ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯವನ್ನು 10 ರನ್‌ಗಳ ಅಂತರದಲ್ಲಿ ಜಯಿಸಿತ್ತು. ಇನ್ನು

ಅಭಿಮಾನಿಗಳಿಂದ ಬೇಡಿಕೆ

ಅಭಿಮಾನಿಗಳಿಂದ ಬೇಡಿಕೆ

ಈ ನಡುವೆ ದುಬಾರಿ ಬೌಲರ್ ಉಮೇಶ್ ಯಾದವ್ ಕೈಬಿಟ್ಟು ಬೇರೆ ಆಟಗಾರರನ್ನು ಕಣಕ್ಕಿಳಿಸುವಂತೆ ಫ್ಯಾನ್ಸ್ ಕೇಳಿಕೊಳ್ಳುತ್ತಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ 48ರನ್ ಚೆಚ್ಚಿಸಿಕೊಂಡಿದ್ದ ಉಮೇಶರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಇದಕ್ಕೆ ಮೊಹಮ್ಮದ್ ಶಮಿ ಕಾರಣ ಎನ್ನಬಹುದು.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿದೆ

ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿದೆ

ಐಪಿಎಲ್ ಇತಿಹಾಸದಲ್ಲೇ ದುಬಾರಿ ಎಕಾನಾಮಿ(8.95) ಬೌಲಿಂಗ್ ಸರಾಸರರಿ (38.70) ಹೊಂದಿರುವ ಮೊಹಮ್ಮದ್ ಶಮಿ ಮೊದಲ ಪಂದ್ಯದಲ್ಲಿ ಅಳುಕಿನಿಂದಲೇ ಕಣಕ್ಕಿಳಿದರೂ ಕೊನೆಯಲ್ಲಿ ಸಕತ್ ಆಗಿ ಮಿಂಚಿದ್ದರು. ಇದೇ ರೀತಿ ಉಮೇಶ್ ಕೂಡಾ ಮಿಂಚುತ್ತಾರೆ ಎಂದು ಅವರ ಅಭಿಮಾನಗಳ ನಂಬಿಕೆ.

40 ಪ್ಲಸ್ ರನ್ ಚೆಚ್ಚಿಸಿಕೊಳ್ಳುವ ಉಮೇಶ

40 ಪ್ಲಸ್ ರನ್ ಚೆಚ್ಚಿಸಿಕೊಳ್ಳುವ ಉಮೇಶ

ಆದರೆ, ಐಪಿಎಲ್ ಇತಿಹಾಸದಲ್ಲಿ 40 ಪ್ಲಸ್ ರನ್ ಚೆಚ್ಚಿಸಿಕೊಂಡಿರುವ ಬೌಲರ್ ಗಳ ಪೈಕಿ ಉಮೇಶ್ ಅಗ್ರಸ್ಥಾನದಲ್ಲಿದ್ದಾರೆ. 17 ಬಾರಿ 40 ಪ್ಲಸ್ ರನ್ ಚೆಚ್ಚಿಸಿಕೊಂಡಿದ್ದರೆ, ಬಾಲಾಜಿ 16 ಹಾಗೂ ಬ್ರಾವೋ 16 ಬಾರಿ ಹೆಚ್ಚು ರನ್ ಕೊಟ್ಟಿದ್ದಾರೆ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಆರ್ ಸಿಬಿಯಲ್ಲಿ ವೇಗಿಗಳಿಗೇನು ಕಡಿಮೆ ಇಲ್ಲ

ಆರ್ ಸಿಬಿಯಲ್ಲಿ ವೇಗಿಗಳಿಗೇನು ಕಡಿಮೆ ಇಲ್ಲ

ಆರ್ ಸಿಬಿಯಲ್ಲಿ ವೇಗಿಗಳಿಗೇನು ಕಡಿಮೆ ಇಲ್ಲ, ಸೈನಿ, ಸ್ಟೈನ್ ಅಲ್ಲದೆ ಶ್ರೀಲಂಕಾದ ಉದಾನಾ ತಂಡದಲ್ಲಿದ್ದಾರೆ, ಸ್ಲೋ ಬೌಲ್ ಮೂಲಕ ಬ್ಯಾಟ್ಸ್ ಮನ್ ಕಂಗೆಡಿಸುವ ಅಸ್ತ್ರ ಕೂಡಾ ಹೊಂದಿದ್ದಾರೆ, ಇಲ್ಲದಿದ್ದರೆ ಮೊಹಮ್ಮದ್ ಸಿರಾಜ್ ಗೂ ಅವಕಾಶ ನೀಡಿ ನೋಡಬಹುದು. ಇಲ್ಲದಿದ್ದರೆ ಉಮೇಶ್ ಕಳಪೆ ಬೌಲಿಂಗ್ ಮಾಡಿದರೆ ಟ್ರಾಲ್ ಪೇಜ್ ಗಳಿಗೂ ಒಳ್ಳೆ ಆಹಾರವಾಗಲಿದ್ದಾರೆ.

Story first published: Thursday, September 24, 2020, 16:07 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X