ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಟಿ20 ವಿಶ್ವಕಪ್ 2020' ನನ್ನ ಕಡೇಯ ಅಂತಾರಾಷ್ಟ್ರೀಯ ಟೂರ್ನಿ: ಹಫೀಝ್

Will retire from international cricket after T20 World Cup 2020: Hafeez

ಕರಾಚಿ, ಮಾರ್ಚ್ 31: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ಟೂರ್ನಿ ತನ್ನ ಕಡೇಯ ಅಂತಾರಾಷ್ಟ್ರೀಯ ಟೂರ್ನಿಯಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಮೊಹಮ್ಮದ್ ಹಫೀಝ್ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಹಫೀಝ್ ತನ್ನ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ್ದಾರೆ.

'ಐಪಿಎಲ್ 2020' ನಡೆಯಬೇಕಾದರೆ ಉಳಿದಿರೋ ದಾರಿ ಇದೊಂದೇ!'ಐಪಿಎಲ್ 2020' ನಡೆಯಬೇಕಾದರೆ ಉಳಿದಿರೋ ದಾರಿ ಇದೊಂದೇ!

ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸುವ ಮುನ್ನ ಪಾಕಿಸ್ತಾನವನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪ್ರತಿನಿಧಿಸುವ ಆಸೆ ಇರುವುದಾಗಿ ಹಫೀಝ್ ಸಂದರ್ಶನದಲ್ಲಿ ನುಡಿದಿದ್ದಾರೆ. ಕೊರೊನಾವೈರಸ್‌ ಭೀತಿಯಿಂದ ಟಿ20 ಟೂರ್ನಿಗೂ ಕಂಟಕ ಎದುರಾಗಿದೆ. ಹಾಗೊಂದುವೇಳೆ ಟೂರ್ನಿ ನಡೆದರೆ ಅದೇ ಹಫೀಝ್ ಕಡೇಯ ಪಂದ್ಯಾಟವಾಗಲಿದೆ.

 ಹೇರ್‌ಸ್ಟೈಲ್‌ ಬಗ್ಗೆ ಚಿಂತೆ ಮಾಡ್ತೀರಾದ್ರೆ ಫಿಲ್ಮ್‌ ಮಾಡಿ: ಪಾಕ್ ಕ್ರಿಕೆಟಿಗರಿಗೆ ಮಿಯಾಂದಾದ್ ತರಾಟೆ ಹೇರ್‌ಸ್ಟೈಲ್‌ ಬಗ್ಗೆ ಚಿಂತೆ ಮಾಡ್ತೀರಾದ್ರೆ ಫಿಲ್ಮ್‌ ಮಾಡಿ: ಪಾಕ್ ಕ್ರಿಕೆಟಿಗರಿಗೆ ಮಿಯಾಂದಾದ್ ತರಾಟೆ

'ಟಿ20 ವಿಶ್ವಕಪ್ ಬಳಿಕ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸಿದ್ದೇನೆ. ಹಾಗಾಗಿ ಟಿ20 ಲೀಗ್‌ಗಳತ್ತ ನಾನು ಗಮನ ಹರಿಸುತ್ತಿದ್ದೇನೆ,' ಎಂದು ಮೊಹಮ್ಮದ್ ಹಫೀಝ್ ಹೇಳಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹಫೀಝ್ ವೈಟ್‌ಬಾಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!

39ರ ಹರೆಯದ ಹಫೀಜ್‌, ಅಂತಾರಾಷ್ಟ್ರೀಯ ನಿವೃತ್ತಿ ಬಳಿಕ ತಾನು ಏನು ಮಾಡಬಯಸಿದ್ದಾರೆ ಎಂದು ಹೇಳಿಲ್ಲ. 'ನಿವೃತ್ತಿ ಬಳಿಕ ನಾನು ಒಂದು ವೇಳೆ ಕೋಚಿಂಗ್ ಮಾಡಬಹುದು. ನಾಳೆ ಏನಾಗಲಿದೆಯೋ ನನಗೆ ಗೊತ್ತಿಲ್ಲ. ಕಾಲ ಬಂದಾಗ ಅದಕ್ಕೆ ತಕ್ಕಾಗೆ ಮನಸ್ಸು ತಯಾರುಗೊಳಿಸಿಕೊಳ್ಳಬೇಕು,' ಎಂದು ಹಫೀಝ್ ವಿವರಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟ: ತಲೆ ಬೋಳಿಸಿ ಡೇವಿಡ್ ವಾರ್ನರ್ ಬೆಂಬಲ, ಕೊಹ್ಲಿಗೆ ಸವಾಲುಕೊರೊನಾ ವಿರುದ್ಧ ಹೋರಾಟ: ತಲೆ ಬೋಳಿಸಿ ಡೇವಿಡ್ ವಾರ್ನರ್ ಬೆಂಬಲ, ಕೊಹ್ಲಿಗೆ ಸವಾಲು

55 ಟೆಸ್ಟ್ ಪಂದ್ಯ, 218 ಏಕದಿನ ಪಂದ್ಯಗಳು ಮತ್ತು 91 ಟಿ20 ಪಂದ್ಯಗಳನ್ನಾಡಿರುವ ಹಫೀಝ್, ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ವೇಳೆ ಪಾಕ್ ತಂಡದಿಂದ ಕಡೆಗಣಿಸಲ್ಪಟ್ಟಿದ್ದರು. ಅದಾಗಿ ಕಳೆದ ಫೆಬ್ರವರಿಯಲ್ಲಿ ತವರಿನಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಟಿ20ಐ ಸರಣಿಗೆ ಹಫೀಝ್ ಕಮ್‌ಬ್ಯಾಕ್ ಮಾಡಿದ್ದರು.

Story first published: Tuesday, March 31, 2020, 20:28 [IST]
Other articles published on Mar 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X