ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನೋವು ಮರೆಯೋಕೆ ನಾಯೀನ ವಾಕ್ ಕರ್ಕೊಂಡ್ಹೋಗ್ತೀನಿ: ಬೌಲ್ಟ್

ವಿಶ್ವಕಪ್ ನೋವನ್ನು ಮರೆಯೋಕೆ ಬೋಲ್ಟ್ ಮಾಡಿದ್ದೇನು ಗೊತ್ತಾ..? | Trent Boult | Oneindia Kannada
‘Will take my dog for a walk,’ Trent Boult on coping with World Cup heartbreak

ವೆಲ್ಲಿಂಗ್ಟನ್, ಜುಲೈ 18: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲದಿದ್ದರೂ ಪ್ರಶಸ್ತಿಯಾಸೆ ಕೈಗೂಡದ ಆಘಾತ ನ್ಯೂಜಿಲೆಂಡ್ ಆಟಗಾರರನ್ನಾವರಿಸಿದೆ. ಈ ನೋವು ಮರೆಯೋಕೆ ತಾನು ತನ್ನ ಸಾಕುನಾಯಿ ಜೊತೆ ಸಮುದ್ರ ತೀರಕ್ಕೆ ವಾಕ್ ಹೋಗುತ್ತೇನೆ ಎಂದು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.

ವಿಶ್ವಕಪ್‌ ಫೈ.: ಸೂಪರ್‌ ಓವರ್‌ ವೇಳೆ ಕೊನೆಯುಸಿರೆಳೆದ ನೀಶಮ್ ಕೋಚ್!ವಿಶ್ವಕಪ್‌ ಫೈ.: ಸೂಪರ್‌ ಓವರ್‌ ವೇಳೆ ಕೊನೆಯುಸಿರೆಳೆದ ನೀಶಮ್ ಕೋಚ್!

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ಐಸಿಸಿ ಕ್ರಿಕೆಟ್ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಅಂತಿಮವಾಗಿ ಬೌಂಡರಿ ಸಂಖ್ಯೆಗಳನ್ನು ಆಧರಿಸಿ ಇಂಗ್ಲೆಂಡ್‌ಗೆ ಚಾಂಪಿಯನ್ ಪಟ್ಟ ನೀಡಲಾಗಿತ್ತು.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆ

ವಿಶ್ವದ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಫೈನಲ್ ಪಂದ್ಯದಲ್ಲಿ ಬೌಲ್ಟ್ ಕೈಯಿಂದ ಒಂದು ತಪ್ಪಾಗಿಹೋಗಿತ್ತು. ಹೀಗಾಗಿ ಪಂದ್ಯ ಸಮಬಲಗೊಂಡಿತಾದರೂ ಅಂತಿಮವಾಗಿ ಆಂಗ್ಲರಿಗೆ ಚೊಚ್ಚಲ ವಿಶ್ವಕಪ್ ಟ್ರೋಫಿಯ ಸಂಭ್ರಮ ತಂದಿತ್ತು.

ಅರಗಿಸಿಕೊಳ್ಳೋದೇ ಕಷ್ಟ

ಅರಗಿಸಿಕೊಳ್ಳೋದೇ ಕಷ್ಟ

ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ವಿಶ್ವಕಪ್ ಟ್ರೋಫಿ ಸೋಲುವಂತಾಗಿದ್ದನ್ನು ಕೆಲ ವರ್ಷಗಳವರೆಗಾದರೂ ಅರಗಿಸಿಕೊಳ್ಳಲು ಕಷ್ಟವಾಗಲಿದೆ ಎಂದು ಬೌಲ್ಟ್ ಬೇಸರ ತೋರಿಕೊಂಡಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಬೌಲ್ಟ್ ಒಟ್ಟು 10 ಪಂದ್ಯಗಳಲ್ಲಿ 17 ವಿಕೆಟ್ ಸಾಧನೆ ತೋರಿದ್ದರು. ಲಾರ್ಡ್ಸ್‌ನಲ್ಲಿನ ಫೈನಲ್ ಪಂದ್ಯದಲ್ಲಿ ಕಿವೀಸ್‌ ಗೆದ್ದಿದ್ದರೆ ಚೊಚ್ಚಲ ವಿಶ್ವಕಪ್ ಜಯಿಸಿದ ಹೊಸ ತಂಡವಾಗಿ ಕೇನ್ ವಿಲಿಯಮ್ಸ್ ಪಡೆ ಇತಿಹಾಸ ನಿರ್ಮಿಸುತ್ತಿತ್ತು.

ನಾಯಿ ಜೊತೆ ವಾಕ್ ಹೋಗ್ತೇನೆ

ನಾಯಿ ಜೊತೆ ವಾಕ್ ಹೋಗ್ತೇನೆ

ಕಪ್ ಕಳೆದುಕೊಂಡ ಬೇಸರದಲ್ಲಿದ್ದ ಬೌಲ್ಟ್ ಸುದ್ದಿಗಾರರಲ್ಲಿ ಮಾತನಾಡುತ್ತ, 'ಒಳ್ಳೇದು, ಸುಮಾರು 4 ತಿಂಗಳ ಬಳಿಕ ಮೊದಲ ಬಾರಿಗೆ ನಾನು ನನ್ನ ಮನೆಗೆ ಹೋಗುತ್ತಿದ್ದೇನೆ. ಅನಂತರ ಬಹುಶಃ ನನ್ನ ನಾಯಿಯ ಜೊತೆ ಬೀಚ್ ಉದ್ದಕ್ಕೂ ವಾಕ್ ಹೋಗ್ತೇನೆ. ನಾಯಿಯ ಜೊತೆ ಅಲ್ಲೇ ಒಂದಿಷ್ಟು ಹೊತ್ತು ಕಳೆಯುತ್ತೇನೆ. ಆತ (ನಾಯಿ) ನನ್ನ ಮೇಲೆ ಕೋಪ ಮಾಡಲಾರ ಅನ್ನೋ ಭರವಸೆ ನನಗಿದೆ,' ಎಂದಿದ್ದಾರೆ.

ಬೌಂಡರಿ ಗೆರೆ ತುಳಿದ ಬೌಲ್ಟ್

ಬೌಲ್ಟ್ ಫೈನಲ್ ಪಂದ್ಯದ ಬಗ್ಗೆ ಹೆಚ್ಚು ಯಾತನೆ ಅನುಭವಿಸಲು ಇನ್ನೊಂದು ಕಾರಣವಿದೆ. ಅದೇನೆಂದರೆ ಇಂಗ್ಲೆಂಡ್‌ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ಜೇಮ್ಸ್ ನೀಶಮ್ ಎಸೆತದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕ್ಯಾಚ್, ಬೌಂಡರಿ ಗೆರೆಯ ಬಳಿಯಿದ್ದ ಬೌಲ್ಟ್‌ಗೆ ಲಭಿಸಿತ್ತು. ಆದರೆ ನಿರ್ಲಕ್ಷ್ಯ ತೋರಿದ ಬೌಲ್ಟ್ ಪಡೆದ ಕ್ಯಾಚ್‌ ಸಹಿತ, ಬೌಂಡರಿ ಗೆರೆ ತುಳಿದು ಎದುರಾಳಿಗೆ 6 ರನ್ ಕೊಡುಗೆಯಿತ್ತಿದ್ದರು. ಪಂದ್ಯ ಜಿದ್ದಾಜಿದ್ದಿ ಅನ್ನಿಸಲು ಇದೂ ಒಂದು ನೆಪವಾಯ್ತು. ಇಲ್ಲದಿದ್ದರೆ ಕಿವೀಸ್‌ಗೆ ಗೆಲ್ಲುವ ಅವಕಾಶ ಹೆಚ್ಚಿತ್ತು.

ಅತೀ ರೋಚಕ ವಿಶ್ವಕಪ್ ಫೈನಲ್

ಅತೀ ರೋಚಕ ವಿಶ್ವಕಪ್ ಫೈನಲ್

'ಇನ್ನೊಂದಿಷ್ಟು ದಿನಗಳಲ್ಲಿ ಈ ಬೇಸರ ದೂರವಾಗಲಾರದು. ಬಹುಶಃ ಈ ನೋವನ್ನು ಮುಂದಿನ ಕೆಲ ವರ್ಷಗಳ ಕಾಲ ಅರಗಿಸಿಕೊಳ್ಳಲು ಕಷ್ಟವಾಗಲಿದೆ,' ಎಂದು ಎಂದು ಬೌಲ್ಟ್ ಹೇಳಿದ್ದಾರೆ. ಕಳೆದ ಭಾನುವಾರ (ಜುಲೈ 14) ನಡೆದ ವಿಶ್ವಕಪ್ ಫೈನಲ್ ಪಂದ್ಯ ವಿಶ್ವಕಪ್ ಇತಿಹಾಸದಲ್ಲೇ ಅತೀ ರೋಚಕ ಫೈನಲ್ ಆಗಿ ಗುರುತಿಸಿಕೊಂಡಿತ್ತು. 50 ಓವರ್‌ಗಳ ಪಂದ್ಯ ಮತ್ತು ಸೂಪರ್ ಓವರ್‌ ಕೂಡ ಸಮಬಲಗೊಂಡಿತ್ತು.

Story first published: Thursday, July 18, 2019, 17:18 [IST]
Other articles published on Jul 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X