ಟಿ20 ದಂತಕಥೆ ಕೀರನ್ ಪೊಲಾರ್ಡ್‌ಗೆ ಐಪಿಎಲ್ ಅಂತ್ಯವಾಗುತ್ತದೆಯೇ?

ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಕೀರನ್ ಪೊಲಾರ್ಡ್ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಈ ಬ್ಯಾಟ್ಸ್‌ಮನ್ ತಮ್ಮ ಸಿಕ್ಸರ್, ಬೌಂಡರಿಗಳ ಮೂಲಕವೇ ರನ್ ಗಳಿಸುತ್ತಾರೆ. ಅಲ್ಲದೆ ಬೌಲಿಂಗ್ ಮತ್ತು ಪೀಲ್ಡಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಲ್ಲ ದೈತ್ಯ ಪ್ರತಿಭೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ 189 ಪಂದ್ಯಗಳನ್ನು ಆಡಿದ್ದಾರೆ. ಕೀರನ್ ಪೊಲಾರ್ಡ್ ಅವರ ಈ ಐಪಿಎಲ್ ಓಟದ ನಂತರ ನಿಲ್ಲುವಂತೆ ಕಾಣುತ್ತಿದೆ.

ನಿನ್ನೆ (ಗುರುವಾರ) ಟ್ರಿನಿಡಾಡಿಯನ್ ಕೀರನ್ ಪೊಲಾರ್ಡ್ ಅವರು 21 ವರ್ಷದ ದಕ್ಷಿಣ ಆಫ್ರಿಕಾದ ಆಟಗಾಋ ಟ್ರಿಸ್ಟಾನ್ ಸ್ಟಬ್ಸ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಆಟಕ್ಕೆ ಅವಕಾಶ ಬಿಟ್ಟಕೊಟ್ಟರು. ಕೀರನ್ ಪೊಲಾರ್ಡ್ ಇಂದು 35ನೇ ವರ್ಷಕ್ಕೆ ಕಾಲಿಟ್ಟರು ಎಂದು ನಾಯಕ ರೋಹಿತ್ ಶರ್ಮಾ ಟಾಸ್‌ನಲ್ಲಿ ಕೀರನ್ ಪೊಲಾರ್ಡ್ ಭವಿಷ್ಯದ ಬಗ್ಗೆ ಮಾತನಾಡಿದರು.

ಪೊಲಾರ್ಡ್‌ಗೆ ತಿಳಿಸುವುದು ಕಷ್ಟವಾಗಿತ್ತು

ಪೊಲಾರ್ಡ್‌ಗೆ ತಿಳಿಸುವುದು ಕಷ್ಟವಾಗಿತ್ತು

ಟಾಸ್ ಪ್ರೆಸೆಂಟರ್ ಸೈಮನ್ ಡೌಲ್ ಅವರು ರೋಹಿತ್ ಶರ್ಮಗೆ, ತಂಡದ ಈ ಬದಲಾವಣೆ ಸಂದೇಶವನ್ನು ಪೊಲಾರ್ಡ್‌ಗೆ ತಿಳಿಸುವುದು ಕಷ್ಟವಾಯಿತೇ ಎಂದು ಕೇಳಿದರು. ಆಗ ರೋಹಿತ್ ಶರ್ಮ "ಇದು ಕಠಿಣವಾಗಿತ್ತು, ಆದರೆ ಅವರು (ಪೊಲಾರ್ಡ್) ಅದನ್ನು ಒಪ್ಪಿಕೊಂಡರು. ನಾವು ಒಂದೆರಡು ಬದಲಾವಣೆಗಳನ್ನು ಮಾಡಿದ್ದೇವೆ. ಮುರುಗನ್ ಅಶ್ವಿನ್‌ಗಾಗಿ ಹೃತಿಕ್ ಶೋಕೀನ್ ಬದಲಾವಣೆ ಮಾಡಬೇಕಾಯಿತು. ಮತ್ತು ಒಂದು ಭವಿಷ್ಯದ ದೃಷ್ಟಿಯಿಂದ ಗಮನಹರಿಸಲಾಗಿದೆ," ಎಂಐ ನಾಯಕ ರೋಹಿತ್ ಶರ್ಮ ಹೇಳಿದರು.

ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇಆಫ್‌ಗಳ ರೇಸ್‌ನಿಂದ ಹೊರಗುಳಿದಿದೆ, ಇದರ ನಂತರ ಇನ್ನೂ ಎರಡು ಗುಂಪು ಲೀಗ್ ಪಂದ್ಯಗಳು ಉಳಿದಿವೆ ಮತ್ತು ಕೀರನ್ ಪೊಲಾರ್ಡ್ ಅವರನ್ನು ಇನ್ನೂ ಕ್ರಿಸ್‌ಗಿಳಿಸಬಹುದು, ಆದರೆ ಅವರ ಪ್ರದರ್ಶನ ಗೋಡೆ ಮೇಲಿನ ಅಕ್ಷರದ ಹಾಗೆ ಕಾಣುತ್ತದೆ.

ಮುಂಬೈ ಫ್ರ್ಯಾಂಚೈಸ್‌ಗೆ ಅಪಾರ ಕೊಡುಗೆ

ಮುಂಬೈ ಫ್ರ್ಯಾಂಚೈಸ್‌ಗೆ ಅಪಾರ ಕೊಡುಗೆ

ಹಲವು ವರ್ಷಗಳಲ್ಲಿ ಕೀರನ್ ಪೊಲಾರ್ಡ್ ಮುಂಬೈ ಫ್ರ್ಯಾಂಚೈಸ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಪ್ರಾಮಾಣಿಕ ಮುಂಬೈ ಇಂಡಿಯನ್ಸ್ ದಂತಕಥೆಗಳಲ್ಲಿ ಒಬ್ಬರಾಗಿದ್ದಾರೆ. 2010ರಲ್ಲಿ ಐಪಿಎಲ್ ಪಾದಾರ್ಪಣೆ ಮಾಡಿದ ನಂತರ, ಅವರು 189 ಪಂದ್ಯಗಳನ್ನು ಆಡಿದ್ದಾರೆ.

147.32 ಸ್ಟ್ರೈಕ್ ರೇಟ್‌ನಲ್ಲಿ 3,412 ರನ್ ಗಳಿಸಿದ್ದಾರೆ ಮತ್ತು ಅವರ ಸೌಮ್ಯ ಮಧ್ಯಮ ವೇಗದಿಂದ 69 ವಿಕೆಟ್‌ಗಳನ್ನು ಪಡೆದರು. ಕಳೆದ ವರ್ಷವೂ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಇಂಡಿಯನ್ಸ್ ಪ್ಲೇಆಫ್‌ಗಳನ್ನು ತಲುಪಲು ವಿಫಲರಾಗಿದ್ದರು ಮತ್ತು ಪೊಲಾರ್ಡ್ ಸರಾಸರಿ ಔಟಿಂಗ್ ಹೊಂದಿದ್ದರು. 14 ಪಂದ್ಯಗಳಿಂದ 245 ರನ್ ಬಾರಿಸಿದ್ದರು.

11 ಪಂದ್ಯಗಳಿಂದ 144 ರನ್‌ ಮಾತ್ರ

11 ಪಂದ್ಯಗಳಿಂದ 144 ರನ್‌ ಮಾತ್ರ

ಹಾಗಾಗಿ, ಈ ವರ್ಷದ ಮೆಗಾ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಅವರನ್ನು 6 ಕೋಟಿ ರೂ.ಗೆ ಉಳಿಸಿಕೊಂಡಾಗ, ಅನೇಕರು ಆಶ್ಚರ್ಯದಿದ ನೋಡಿದರು. ಮುಂಬೈ ಇಂಡಿಯನ್ಸ್ ಆದಾಗ್ಯೂ ಈ ನಿಷ್ಠೆ ಮತ್ತು ಆಟದ ದಾಖಲೆಯನ್ನು ಪುರಸ್ಕರಿಸಿತ್ತು. ಆದರೆ ಸದ್ಯ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ದೈತ್ಯ ಮನುಷ್ಯನಿಗೆ ಕೆಟ್ಟ ವರ್ಷವಾಗಿದೆ. ಕಳೆದ 11 ಪಂದ್ಯಗಳಿಂದ 144 ರನ್‌ ಗಳಿಸಿದ್ದರಿಂದ ಮುಂಬೈ ಪ್ಲೇಆಫ್ ತಲುಪು ಆಸೆ ಕಳೆದುಕೊಂಡಿದೆ.

ಸಿಎಸ್‌ಕೆ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ತಂಡದ ಆಡುವ ಹನ್ನೊಂದರಲ್ಲಿ ದಕ್ಷಿಣ ಆಫ್ರಿಕಾದ ಸ್ಟಬ್ಸ್‌ಗೆ ಮುಂಬೈ ಇಂಡಿಯನ್ಸ್ ಕ್ಯಾಪ್ ಅನ್ನು ನೀಡಿದಾಗ, ಕೀರನ್ ಪೊಲಾರ್ಡ್ ಹರಟೆ ಹೊಡೆಯುತ್ತಿದ್ದರು ಮತ್ತು ನಗುತ್ತಿದ್ದರು. ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಈ ಸೀಸನ್‌ನ ನಂತರವೂ ಅವರಿಗೆ ಐಪಿಎಲ್ ಭವಿಷ್ಯವಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ಹಾಗಾದರೆ ಮತ್ತೊಬ್ಬ ದೈತ್ಯ ಪ್ರತಿಭೆ ಸೇವೆಯನ್ನು ವಿಶ್ವ ಕ್ರಿಕೆಟ್ ಕಳೆದುಕೊಳ್ಳಲಿದೆ.

ಜಡೇಜಾರನ್ನು ಬದಲಿಸುವುದು ಕಷ್ಟವೆಂದ ಧೋನಿ

ಜಡೇಜಾರನ್ನು ಬದಲಿಸುವುದು ಕಷ್ಟವೆಂದ ಧೋನಿ

ಇದೇ ವೇಳೆ ಗುರುವಾರ ರಾತ್ರಿಯ ಪಂದ್ಯದ ಟಾಸ್‌ನಲ್ಲಿ ರವೀಂದ್ರ ಜಡೇಜಾ ಅನುಪಸ್ಥಿತಿಯ ಬಗ್ಗೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಕೇಳಲಾಯಿತು. ಇದಕ್ಕೆ ಧೋನಿ ಪ್ರತಿಕ್ರಿಯಿಸಿ, ಜಡೇಜಾ ಅವರ ಆಲ್‌ರೌಂಡ್ ಸಾಮರ್ಥ್ಯವು ತಂಡದ ನಿರ್ವಹಣೆಗೆ ವಿಭಿನ್ನ ಸಂಯೋಜನೆಗಳೊಂದಿಗೆ ಹೋಗಲು ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂಬುದರ ಕುರಿತು ಅವರು ಮಾತನಾಡಿದರು. ಹಾಗೆಯೇ, ಅವರ ಫೀಲ್ಡಿಂಗ್ ಕೂಡ, ಜಡೇಜಾ ಅವರನ್ನು ಬದಲಿಸುವುದು ಕಷ್ಟ ಎಂದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೇಳಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 13, 2022, 17:43 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X