ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಇದ್ದುಕೊಂಡೇ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತೇನೆ ಎಂದ ಭುವನೇಶ್ವರ್ ಕುಮಾರ್

Will train during IPL with England Test tour in mind, says Bhuvneshwar Kumar

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಅಂತ್ಯವಾಗುವ ಮೂಲಕ ಇಂಗ್ಲೆಂಡ್ ತಂಡದ ಭಾರತ ಪ್ರವಾಸ ಅಂತ್ಯವಾಗಿದೆ. ಈಗ ಎಲ್ಲಾ ಆಟಗಾರರು ಕೂಡ ಮುಂಬರುವ ಐಪಿಎಲ್ ಟೂರ್ನಿಯತ್ತ ಚಿತ್ತ ನೆಟ್ಟಿದ್ದಾರೆ. ಚುಟುಕು ಕ್ರಿಕೆಟ್ ಹಬ್ಬದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಎಲ್ಲಾ ಆಟಗಾರರು ಇದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿದ್ದುಕೊಂಡೇ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾತ್ತೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅದ್ಭುತವಾಗಿ ಪ್ರದರ್ಶನ ನೀಡಿದರು. ಏಕದಿನ ಸರಣಿಯಲ್ಲಿ ಭುವಿ ಮೂರು ಪಂದ್ಯಗಳಲ್ಲಿ ಆಡಿ ಆರು ವಿಕೆಟ್ ಕಿತ್ತಿದ್ದು ಸರಣಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಹೀಗಾಗಿ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ವಿಚಾರವಾಗಿ ಪ್ರಶ್ನೆಯನ್ನು ಭುವನೇಶ್ವರ್ ಕುಮಾರ್ ಬಳಿ ಕೇಳಲಾಯಿತು.

ಭಾರತ vs ಇಂಗ್ಲೆಂಡ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಸರಿಗಟ್ಟಿದ ಸ್ಯಾಮ್ ಕರ್ರನ್ಭಾರತ vs ಇಂಗ್ಲೆಂಡ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಸರಿಗಟ್ಟಿದ ಸ್ಯಾಮ್ ಕರ್ರನ್

ಇದಕ್ಕೆ ಆತ್ಮವಿಶ್ವಾಸದಿಂದಲೇ ಭುವನೇಶ್ವರ್ ಕುಮಾರ್ ಉತ್ತರಿಸಿದ್ದಾರೆ. "ಖಂಡಿತವಾಗಿಯೂ ರೆಡ್‌ಬಾಲ್‌ ನನ್ನ ರಾಡರ್‌ನಲ್ಲಿಯೇ ಇದೆ. ಮಾನಸಿಕವಾಗಿ ನಾನು ರೆಡ್ ಬಾಲ್‌ನಲ್ಲಿ ಆಡಲು ಸಿದ್ಧತೆ ಮಾಡಿಕೊಳ್ಳಲಿದ್ದೇನೆ. ಆದರೆ ಟೆಸ್ಟ್ ಪಂದ್ಯಗಳಿಗೆ ಯಾವ ರೀತಿಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ವಿಭಿನ್ನವಾಗಿದೆ" ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

"ಐಪಿಎಲ್ ಸಂದರ್ಭದಲ್ಲಿ ಕೆಲಸದ ನಿರ್ವಹಣೆ ಮತ್ತು ಅಭ್ಯಾಸ ರೆಡ್‌ಬಾಲ್‌ಅನ್ನು ಮನಸಿನಲ್ಲಿಟ್ಟುಕೊಂಡೇ ಮಾಡಿಕೊಳ್ಳಲಿದ್ದೇನೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ಟೆಸ್ಟ್ ಪಂದ್ಯಗಳು ನಡೆಯಲಿದೆ ಹಾಗೂ ನನ್ನ ಪ್ರಮುಖ ಆದ್ಯತೆ ಟೆಸ್ಟ್ ಕ್ರಿಕೆಟ್ ಆಗಿದೆ" ಎಂದು ಭುವನೇಶ್ವರ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಭಾರತ ತಂಡದ ನಾಯಕನಾಗಿ ವಿಶೇಷ ಪಟ್ಟಿಗೆ ಸೇರಿಕೊಂಡ ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಭಾರತ ತಂಡದ ನಾಯಕನಾಗಿ ವಿಶೇಷ ಪಟ್ಟಿಗೆ ಸೇರಿಕೊಂಡ ವಿರಾಟ್ ಕೊಹ್ಲಿ

ಮುಂಬರುವ ಐಪಿಎಲ್ ಟೂರ್ನಿ ಅಂತ್ಯವಾಗುತ್ತಿದ್ದಂತೆಯೇ ಭಾರತ ಇಂಗ್ಲೆಂಡ್‌ಗೆ ತೆರಳಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾಗಿಯಾಗಲಿದೆ. ಅದಾದ ಬಳಿಕ ಇಂದ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್‌ನಲ್ಲಿಯೇ ನಡೆಯಲಿದೆ.

Story first published: Monday, March 29, 2021, 13:35 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X