ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅನುಸರಿಸುತ್ತೇನೆ: ಬಾಬರ್ ಅಝಮ್

Will try to emulate Kohli, Williamson as Pakistan T20I captain: Babar Azam

ಇಸ್ಲಮಾಬಾದ್, ಅಕ್ಟೋಬರ್ 26: ಪಾಕಿಸ್ತಾನ ಟಿ20ಐ ತಂಡಕ್ಕೆ ನೂತನ ನಾಯಕರಾಗಿ ಆಯ್ಕೆಯಾಗಿರುವ ಬಾಬರ್ ಅಝಮ್, ತನಗೆ ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸ ಸರಣಿಯ ಬಗ್ಗೆ ಯಾವುದೇ ಒತ್ತಡವಿಲ್ಲ ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್ ವೈಟ್‌ವಾಷ್ ಮುಖಭಂಗ ಅನುಭವಿಸಿದ ಬಳಿಕ, ಸರ್ಫರಾಜ್ ಅಹ್ಮದ್ ಬದಲಿಗೆ ಬಾಬರ್ ನಾಯಕರಾಗಿ ಆಯ್ಕೆಯಾಗಿದ್ದರು.

ವಿಜಯ್ ಹಜಾರೆ ಟ್ರೋಫಿ 2019-20: ಸ್ಪಿನ್ನರ್ ಅರ್‌ ಅಶ್ವಿನ್‌ಗೆ ದಂಡವಿಜಯ್ ಹಜಾರೆ ಟ್ರೋಫಿ 2019-20: ಸ್ಪಿನ್ನರ್ ಅರ್‌ ಅಶ್ವಿನ್‌ಗೆ ದಂಡ

ಪಾಕಿಸ್ತಾನಕ್ಕೆ ಶ್ರೀಲಂಕಾ ತಂಡ ಪ್ರವಾಸ ಕೈಗೊಂಡಿದ್ದಾಗ ಟಿ20 ಸರಣಿಯಲ್ಲಿ ಉಪನಾಯಕರಾಗಿದ್ದ ಬಾಬರ್, ಉತ್ತಮ ಬ್ಯಾಟಿಂಗ್ ತೋರಿರಲಿಲ್ಲ. ಮೂರು ಪಂದ್ಯಗಳಲ್ಲಿ ಬಾಬರ್ 13, 3 ಮತ್ತು 27 ರನ್ ಗಳಿಸಿದ್ದರು. ಆದರೆ ಮುಂಬರಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟಿ20 ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸುವುದಾಗಿ ಬಾಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!

ನಾಯಕತ್ವದ ವಿಚಾರದಲ್ಲಿ ಅದ್ಭುತ ನಾಯಕರೆನಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಅನುಸರಿಸಲು ಯತ್ನಿಸುವುದಾಗಿ ಬಾಬರ್ ಅಝಮ್ ಹೇಳಿದ್ದಾರೆ. ಆಸ್ಟ್ರೇಲಿಯಾಕ್ಕೆ ಪಾಕಿಸ್ತಾನ ಪ್ರವಾಸ ಟಿ20 ಸರಣಿ ನವೆಂಬರ್ 3ರಿಂದ ಆರಂಭಗೊಳ್ಳಲಿದೆ.

ಪಂದ್ಯದ ವೇಳೆ ವಾಟರ್‌ ಬಾಯ್‌ ಆಗಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಪ್ರಧಾನಿ!ಪಂದ್ಯದ ವೇಳೆ ವಾಟರ್‌ ಬಾಯ್‌ ಆಗಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಪ್ರಧಾನಿ!

'ಶ್ರೀಲಂಕಾ ವಿರುದ್ಧದ 3 ಪಂದ್ಯಗಳಲ್ಲಿ ಜನ ನನ್ನನ್ನು ನಿರ್ಣಯಿಸಿದರು. ಅಲ್ಲಿ ಉಪನಾಯಕತ್ವ ವಹಿಸಿಕೊಂಡಿದ್ದರಿಂದ ನಾನು ಹಿನ್ನಡೆ ಅನುಭವಿಸಿದೆ. ಈಗಿನ ನಾಯಕರಾದ ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ ಹೇಗೆ ತನ್ನದೇ ಫಾರ್ಮ್ ನಿಭಾಯಿಸುತ್ತಿದ್ದಾರೆ, ತಂಡಕ್ಕೆ ಉತ್ತಮ ಫಲಿತಾಂಶ ತರುತ್ತಿದ್ದಾರೆ ಎಂದು ನೋಡುತ್ತಿದ್ದೇನೆ. ಅವರನ್ನೇ ಅನುಸರಿಸಲು ಪ್ರಯತ್ನಿಸುತ್ತೇನೆ,' ಎಂದು ಬಾಬರ್ ಹೇಳಿದ್ದಾರೆ.

'ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ''ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ'

ಪಾಕಿಸ್ತಾನ ತಂಡ: ಬಾಬರ್ ಅಝಮ್ (ನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹ್ಯಾರಿಸ್ ಸೊಹೈಲ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಇಮಾಮ್-ಉಲ್-ಹಕ್, ಖುಸ್ಡಿಲ್ ಷಾ, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೂಸಾ ಖಾನ್, ವಹಾಬ್ ರಿಯಾಜ್, ಶಾದಾಬ್ ಖಾನ್, ಉಸ್ಮಾನ್ ಖಾದಿರ್.

Story first published: Saturday, October 26, 2019, 16:12 [IST]
Other articles published on Oct 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X