ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಜಾಗಕ್ಕೆ ಡೇಲ್‌ ಸ್ಟೇನ್‌ ಕೊಟ್ಟ ಪೆಟ್ಟನ್ನು ನೆನೆದ ಕೇನ್‌ ವಿಲಿಯಮ್ಸನ್‌!

Kane Williamson message for Steyn 2019

ಹೊಸದಿಲ್ಲಿ, ಆಗಸ್ಟ್‌ 07: ಸತತ ನಾಲ್ಕು ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ನ ನಂ.1 ಬೌಲರ್‌ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇನ್‌, ಸೋಮವಾರ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಐದು ದಿನಗಳ ಕ್ರಿಕೆಟ್‌ಗೆ ಸ್ಟೇನ್‌ ನಿವೃತ್ತಿ ಘೋಷಿಸಿದ ಬಳಿಕ ಸೋಷಿಯಲ್‌ ಮೀಡಿಯಾಗಳಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು ಸಾಲು ಸಾಲು ಸಂದೇಶ ರವಾನಿಸಿ ಅವರ ಮುಂದಿನ ಅಭಿಯಾನಕ್ಕೆ ಶುಭಕೋರಿದ್ದಾರೆ.

ಅಂತೆಯೇ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಸ್ಟೇನ್‌ಗೆ ಸಂದೇಶ ರವಾನಿಸಿದ್ದು, 2013ರಲ್ಲಿ ನಡೆದ ಸಂಗತಿಯೊಂದನ್ನು ನೆನೆದು ತಮಾಶೆ ಮಾಡಿದ್ದಾರೆ.

ಇಂಡಿಯಾ vs ವೆಸ್ಟ್‌ ಇಂಡೀಸ್‌: 1ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ XIಇಂಡಿಯಾ vs ವೆಸ್ಟ್‌ ಇಂಡೀಸ್‌: 1ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ XI

ವಿಲಿಯಮ್ಸನ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಫೋಟೊ ಒಂದನ್ನು ಪ್ರಕಟಿಸಿದ್ದು, ಅದರ ಹಿಂದೆ ಸ್ಟೇನ್‌ ನೀಡಿರುವ ಪೆಟ್ಟೊಂದನ್ನು ನೆನೆದಿದ್ದಾರೆ. ಕ್ರಿಕೆಟ್‌ ಕ್ರೀಡೆಯಲ್ಲಿ ಬ್ಯಾಟ್ಸ್‌ಮನ್‌ಗಳ ಗುಪ್ತಾಂಗಗಳಿಗೆ ಚೆಂಡು ತಾಗಬಾರದೆಂದು ರಕ್ಷಣಗೆ ಬಳಸಲಾಗುವ 'ಅಬ್ಡಾಮಿನಲ್‌ ಗಾರ್ಡ್‌' ಚಿತ್ರ ಪ್ರಕಟಿಸಿರುವ ವಿಲಿಯಮ್ಸನ್‌ ಅದು ಮುರಿದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

"ಔಚ್.... 2013ರಲ್ಲಿ ಡೇಲ್‌ ಸ್ಟೇನ್‌ ಇದನ್ನು ಮುರಿದಿದ್ದಾರೆ. ಅವರು ಎಷ್ಟು ಒಳ್ಳೆಯವರು ಎಂದರೆ ಪಂದ್ಯದ ಬಳಿಕ ಅದರ ಮೇಲೆ ಅವರ ಹಸ್ತಾಕ್ಷರ ಬರೆದುಕೊಟ್ಟಿದ್ದಾರೆ. ಅದ್ಭುತ ಟೆಸ್ಟ್‌ ವೃತ್ತಿಬದುಕಿಗೆ ಶುಭಾಶಯಗಳು ಗೆಳೆಯ. ಸದಾ ರಕ್ಷಣೆ ಬಳಸಿ," ಎಂದು ವಿಲಿಯಮ್ಸನ್‌ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ವೇಳೆ ಡೇಲ್‌ ಸ್ಟೇನ್‌ ಆ ಜಾಗಕ್ಕೆ ನೀಡಿದ್ದ ಪೆಟ್ಟನ್ನು ನೆನೆದು ತಮಾಶೆ ಮಾಡುವುದರೊಂದಿಗೆ ಸ್ಟೇನ್‌ಗೆ ಶುಭಾಶಯ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಟೇನ್‌ "ಅದ್ಭುತ" ಎಂದು ಹೇಳಿದ್ದಾರೆ.

ಗ್ಲೋಬಲ್‌ ಟಿ20ಯಲ್ಲಿ ಪಾಕ್‌ ಕ್ರಿಕೆಟಿಗನಿಂದ ಮ್ಯಾಚ್‌ ಫಿಕ್ಸಿಂಗ್‌ ಯತ್ನ!ಗ್ಲೋಬಲ್‌ ಟಿ20ಯಲ್ಲಿ ಪಾಕ್‌ ಕ್ರಿಕೆಟಿಗನಿಂದ ಮ್ಯಾಚ್‌ ಫಿಕ್ಸಿಂಗ್‌ ಯತ್ನ!

ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ವೃತ್ತಿಬದುಕು ಮುಂದುವರಿಸುವ ಉದ್ದೇಶದಿಂದ ಸ್ಟೇನ್‌ ತಮಗೆ ಅಚ್ಚುಮೆಚ್ಚಿನ ಮಾದರಿಯಾದ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

"ಇಂದು ನನ್ನ ಅತ್ಯಂತ ಪ್ರೀತಿಯ ಕ್ರಿಕೆಟ್‌ ಮಾದರಿಯಿಂದ ದೂರ ಸರಿಯುತ್ತಿದ್ದೇನೆ. ನನ್ನ ಪ್ರಕಾರ ಕ್ರಿಕೆಟ್‌ನ ಅತ್ಯತ್ತಮ ಮಾದರಿ ಟೆಸ್ಟ್‌ ಕ್ರಿಕೆಟ್‌. ನಿಮ್ಮ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸಾಮರ್ಥ್ಯವೆಲ್ಲವನ್ನೂ ಟೆಸ್ಟ್‌ ಕ್ರಿಕೆಟ್‌ ಪರೀಕ್ಷಿಸುತ್ತದೆ," ಎಂದು ಸ್ಟೇನ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌

"ಮುಂದೆಂದೂ ಟೆಸ್ಟ್‌ ಆಡುವುದಿಲ್ಲ ಎಂದು ನಿರ್ಧರಿಸುವುದು ನಿಜಕ್ಕೂ ಕಷ್ಟದ ನಿರ್ಧಾರ. ಮುಂದೆಂದು ಆಡಲು ಸಾಧ್ಯವಾಗುವುದಿಲ್ಲ ಎಂಬುದು ಮತ್ತಷ್ಟು ಬೇಸರ ತರುತ್ತದೆ. ನನ್ನ ವೃತ್ತಿ ಬದುಕಿನ ಮುಂದಿನ ದಿನಗಳಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ ಕಡೆಗೆ ಹೆಚ್ಚು ಗಮನ ನೀಡಲಿದ್ದೇನೆ," ಎಂದಿದ್ದರು.

36 ವರ್ಷದ ಅನುಭವಿ ವೇಗದ ಬೌಲರ್‌ ಡೇಲ್‌ ಸ್ಟೇನ್‌ 2004ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಡಿದ 93 ಪಂದ್ಯಗಳಿಂದ 439 ವಿಕೆಟ್‌ಗಳನ್ನು ಪಡೆದಿರುವ ಸ್ಟೇನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಕಳೆದ ಫಬ್ರವರಿಯಲ್ಲಿ ಅವರು ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಪರ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ್ದರು.

Story first published: Wednesday, August 7, 2019, 22:56 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X