ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೀವಿಸ್ vs ವಿಂಡೀಸ್ ಟೆಸ್ಟ್: ದ್ವಿಶತಕ ಸಿಡಿಸಿ ನ್ಯೂಜಿಲೆಂಡ್‌ಗೆ ಮೇಲುಗೈ ಒದಗಿಸಿದ ವಿಲಿಯಮ್ಸನ್

Williamson’s 251 puts new zealand on top in 1st test vs West Indies

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ಭರ್ಜರಿ ಮೇಲುಗೈ ಸಾಧಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಸ್ವಿಶತಕವನ್ನು ಸಿಡಿಸಿದ್ದು ನ್ಯೂಜಿಲೆಂಡ್ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತವನ್ನು ದಾಖಲಿಸಿದೆ.

ಮೊದಲಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಎರಡನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಿತ್ತು. ಮೊದಲ ದಿನದಾಟದಲ್ಲಿ ಶತಕವನ್ನು ಪೂರೈಸಿದ್ದ ಕೇನ್ ವಿಲಿಯಮ್ಸನ್ ಎರಡನೇ ದಿನದಾಟದಲ್ಲಿ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸುವಲ್ಲಿ ಕೇನ್ ವಿಲಿಯಮ್ಸನ್ ಯಶಸ್ವಿಯಾಗಿದ್ದಾರೆ. 412 ಎಸೆತ ಎದುರಿಸಿದ ವಿಲಿಯಮ್ಸನ್ 251 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಚೆನ್ನಾಗಿ ಆಡ್ತಾರೆ: ಕರ್ಸನ್ ಘವ್ರಿಕೊಹ್ಲಿ ನಾಯಕತ್ವದಲ್ಲಿ ನಟರಾಜನ್ ಚೆನ್ನಾಗಿ ಆಡ್ತಾರೆ: ಕರ್ಸನ್ ಘವ್ರಿ

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 519ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಲಾಗಿದೆ. ಕಿವೀಸ್ ಪರವಾಗಿ ಆರಂಭಿಕ ಆಟಗಾರ ಟಾಮ್ ಲಾಥಮ್ 86 ರನ್ ಗಳಿಸಿದರೆ ಕೈಲ್ ಜಾಮಿಸನ್ 51 ರನ್ ಗಳ ಕಾಣಿಕೆ ನೀಡಿದರು.

ಇನ್ನು ನ್ಯೂಜಿಲೆಂಡ್ ತಂಡ ನೀಡಿದ ಬೃಹತ್ ಮೊತ್ತವನ್ನು ವೆಸ್ಟ್ ಇಂಡೀಸ್ ತಂಡ ಬೆನ್ನಟ್ಟಿದೆ. 26 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿದ ವಿಂಡೀಸ್ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ. ಈ ಮೂಲಕ ಮೂರನೇ ದಿನದಾಟವನ್ನು ಕಾಯ್ದಿರಿಸಿದೆ. ಬ್ರಾಥ್‌ವೇಟ್ 20 ಹಾಗೂ ಕ್ಯಾಂಪ್‌ಬೆಲ್ 22 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ವೆಸ್ಟ್ ಇಮಡೀಸ್ ತಮಡದ ಪರವಾಗಿ ಬೌಲಿಂಗ್‌ನಲ್ಲಿ ಕ್ಯಾಮರೂನ್ ರೋಚ್ ಹಾಗೂ ಗೇಬ್ರಿಯೆಲ್ ಮಿಂಚಿದ್ದು ತಲಾ 3 ವಿಕೆಟ್ ಪಡೆದಿದ್ದಾರೆ. 1 ವಿಕೆಟ್ ಅಲ್ಜಾರಿ ಜೋಸೆಫ್ ಪಾಲಾಗಿದೆ.

Story first published: Friday, December 4, 2020, 14:04 [IST]
Other articles published on Dec 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X