ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WIPL 2023: ಮಹಿಳಾ ಐಪಿಎಲ್‌ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್

WIPL 2023: Mumbai Indians Announced Jhulan Goswami As Its Team Mentor And Bowling Coach For Womens IPL

2023ರ ಚೊಚ್ಚಲ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಮಹಿಳಾ ಐಪಿಎಲ್) ಮಾರ್ಚ್ ಮೊದಲ ವಾರದಲ್ಲಿ ಚಾಲನೆ ಸಿಗಲಿದೆ. ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿದ್ದು, ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಂದು ವಾರದೊಳಗೆ ಹರಾಜು ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ.

ಮುಂಬರುವ ಮಹಿಳಾ ಐಪಿಎಲ್ ಲೀಗ್‌ನಲ್ಲಿ ಆಡಲಿರುವ ತನ್ನ ಹೊಸ ಫ್ರಾಂಚೈಸಿಯ ಮಹಿಳಾ ಕೋಚಿಂಗ್ ಬಳಗವನ್ನು ಮುಂಬೈ ಇಂಡಿಯನ್ಸ್ ತಂಡ ಪ್ರಕಟಿಸಿದೆ.

ಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇನ್ನು ಪದ್ಮಶ್ರೀ-ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಭಾರತ ತಂಡದ ಮಾಜಿ ವೇಗಿ ಜೂಲನ್ ಗೋಸ್ವಾಮಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಎರಡು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಭಾರತದ ಮಾಜಿ ಆಲ್‌ರೌಂಡರ್ ದೇವಿಕಾ ಪಾಲ್ಶಿಕಾರ್ ಬ್ಯಾಟಿಂಗ್ ಕೋಚ್ ಹಾಗೂ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ತಂಡದ ಮ್ಯಾನೇಜರ್ ಆಗಿ ಮುಂಬೈ ಇಂಡಿಯನ್ಸ್ ನೇಮಕ ಮಾಡಿದೆ.

ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ

ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ

"ಚಾರ್ಲೋಟ್ ಎಡ್ವರ್ಡ್ಸ್, ಜೂಲನ್ ಗೋಸ್ವಾಮಿ ಮತ್ತು ದೇವಿಕಾ ಪಾಲ್ಶಿಕಾರ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ. ಹೆಚ್ಚು ಹೆಚ್ಚು ಮಹಿಳೆಯರು ಕ್ರೀಡೆಯಲ್ಲಿ ಕೇವಲ ಆಟಗಾರ್ತಿಯರಾಗಿ ಮಾತ್ರವಲ್ಲದೆ, ಕೋಚ್‌ಗಳು, ಆಡಳಿತಾಧಿಕಾರಿಗಳು ಮತ್ತು ತರಬೇತಿ ಸಿಬ್ಬಂದಿಯಾಗಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆ ಎನಿಸುತ್ತಿದೆ," ಎಂದು ಮುಂಬೈ ಇಂಡಿಯನ್ಸ್ ಒಡತಿ ನೀತಾ ಅಂಬಾನಿ ಹೇಳಿದ್ದಾರೆ.

"ಭಾರತದಲ್ಲಿ ಮಹಿಳಾ ಕ್ರೀಡೆಗೆ ಇದೊಂದು ಅತ್ಯುತ್ತಮ ಸಮಯವಾಗಿದೆ. ನಮ್ಮ ಮಹಿಳಾ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ದೇಶಕ್ಕೆ ಗೌರವ ತಂದುಕೊಡುತ್ತಿದ್ದಾರೆ. ಕ್ರೀಡಾ ಶಕ್ತಿಯ ಮೂಲಕ ಹೆಚ್ಚಿನ ಯಶಸ್ಸನ್ನು ತಂದುಕೊಡಲು ಮಹಿಳೆಯರಿಗೆ ಇನ್ನಷ್ಟು ಶಕ್ತಿ ಲಭಿಸಲಿ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಸ್ಫೂರ್ತಿ ಸಿಗುವಂತಾಗಲಿ. ಕ್ರೀಡೆಯಲ್ಲಿ ಉನ್ನತ ಮಟ್ಟವನ್ನು ತಲುಪಲು ಅವರಿಗೆ ಸಾಧ್ಯವಿರುವ ಎಲ್ಲ ಬೆಂಬವನ್ನು ಒದಗಿಸಲು ನಾವು ಯಾವಾಗಲೂ ಬದ್ಧರಾಗಿರುತ್ತೇವೆ," ಎಂದು ನೀತಾ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಒಡೆತನದ 4ನೇ ಫ್ರಾಂಚೈಸಿ

ಮುಂಬೈ ಇಂಡಿಯನ್ಸ್ ಒಡೆತನದ 4ನೇ ಫ್ರಾಂಚೈಸಿ

ಮುಂಬೈ ಇಂಡಿಯನ್ಸ್ ಇತ್ತೀಚೆಗೆ ಮಹಿಳಾ ಐಪಿಎಲ್‌ಗಾಗಿ ಮುಂಬೈ ನಗರದ ತಂಡವನ್ನು ದೊಡ್ಡ ಮೊತ್ತದ ಬಿಡ್ ಸಲ್ಲಿಸಿ ಖರೀದಿಸಿದೆ. ಇದು ಮುಂಬೈ ಇಂಡಿಯನ್ಸ್ ಒಡೆತನದ 4ನೇ ಫ್ರಾಂಚೈಸಿ ಎನಿಸಿದೆ. ಈ ಫ್ರಾಂಚೈಸಿಯ ಮೂಲಕ ಮುಂಬೈ ಇಂಡಿಯನ್ಸ್, ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ನೆರವಾಗುವ ಪ್ರಯತ್ನವನ್ನು ಮುಂದುವರಿಸಲು ಬಯಸಿದೆ.

ಪುರುಷರ ಐಪಿಎಲ್‌ಲ್ಲಿ ಆಡುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾದ SA20 ಟೂರ್ನಿಯಲ್ಲಿ ಆಡುವ MI ಕೇಪ್‌ ಟೌನ್ ಮತ್ತು ಯುಎಇಯ ILT20 ಟೂರ್ನಿಯಲ್ಲಿ ಆಡುವ MI ಎಮಿರೇಟ್ಸ್ ತಂಡಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇತರ 3 ಫ್ರಾಂಚೈಸಿಗಳಾಗಿವೆ.

ಚಾರ್ಲೋಟ್ ಎಡ್ವರ್ಡ್ಸ್

ಚಾರ್ಲೋಟ್ ಎಡ್ವರ್ಡ್ಸ್

20 ವರ್ಷಗಳ ವೃತ್ತಿಜೀವನದ ಮೂಲಕ ಮಹಿಳಾ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆನಿಸಿದ ಚಾರ್ಲೋಟ್ ಎಡ್ವರ್ಡ್ಸ್, ಇಂಗ್ಲೆಂಡ್ ತಂಡದ ನಾಯಕಿಯಾಗಿ ಏಕದಿನ ಮತ್ತು ಟಿ20 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಚಾರ್ಲೋಟ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿವಿಧ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಬ್ರಿಟಿಷ್ ಎಂಪೈರ್‌ನಿಂದ ಅವರು 2009ರಲ್ಲಿ ಎಂಬಿಇ ಮತ್ತು 2014ರಲ್ಲಿ ಸಿಬಿಇ ಗೌರವವನ್ನೂ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯು ಚಾರ್ಲೋಟ್ ಎಡ್ವರ್ಡ್ಸ್ ಕಪ್ ಎಂಬ ಹೆಸರು ಹೊಂದಿದೆ. 2022ರಲ್ಲಿ ಚಾರ್ಲೋಟ್ ಐಸಿಸಿ ಹಾಲ್ ಆಫ್ ಫೇಮ್‌ಗೂ ಸೇರ್ಪಡೆಯಾಗಿದ್ದರು.

ಜೂಲನ್ ಗೋಸ್ವಾಮಿ

ಜೂಲನ್ ಗೋಸ್ವಾಮಿ

ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಜೂಲನ್ ಗೋಸ್ವಾಮಿ ತಮ್ಮ ವೇಗದ ಬೌಲಿಂಗ್‌ನಿಂದ ಹೆಸರುವಾಸಿಯಾಗಿದ್ದರು. ತಮ್ಮ ಬೌಲಿಂಗ್ ಮೂಲಕ ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ ಮತ್ತು ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದಾರೆ.

20 ವರ್ಷಗಳ ವೃತ್ತಿಜೀವನದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಮತ್ತು ಮಹಿಳೆಯರ ವಿಶ್ವಕಪ್‌ನಲ್ಲಿ ಸರ್ವಾಧಿಕ ವಿಕೆಟ್ ಕಬಳಿಸಿದ ದಾಖಲೆಯನ್ನೂ ಹೊಂದಿದ್ದಾರೆ.

2016ರ ಜನವರಿಯಲ್ಲಿ ಐಸಿಸಿ ಮಹಿಳಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅವರು ನಂ.1 ಪಟ್ಟವನ್ನು ಅಲಂಕರಿಸಿದ್ದರು. ನಿವೃತ್ತಿಯ ನಂತರ ಬಂಗಾಳ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಹೊಸ ತಲೆಮಾರಿನ ಆಟಗಾರ್ತಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ದೇವಿಕಾ ಪಾಲ್ಶಿಕಾರ್

ದೇವಿಕಾ ಪಾಲ್ಶಿಕಾರ್

ಬಲಗೈ ಬ್ಯಾಟರ್ ಮತ್ತು ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ ದೇವಿಕಾ ಪಾಲ್ಶಿಕಾರ್ ಭಾರತ ತಂಡದಲ್ಲಿ ಆಲ್‌ರೌಂಡರ್ ಪಾತ್ರ ನಿಭಾಯಿಸಿದ್ದಾರೆ. 2009ರಿಂದ 2012ರವರೆಗೆ ಅವರು ಅಸ್ಸಾಂ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಕೋಚ್ ಸಹ ಆಗಿದ್ದರು. ನಿವೃತ್ತಿಯ ನಂತರ 2014 ಮತ್ತು 2016ರ ನಡುವೆ ಭಾರತ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

2018ರ ಏಷ್ಯನ್ ಕಪ್ ಜಯಿಸಿದ ಬಾಂಗ್ಲಾದೇಶ ತಂಡಕ್ಕೆ ಸಹಾಯಕ ಕೋಚ್ ಆಗಿ ನೆರವಾಗಿದ್ದರು. ಭಾರತದಲ್ಲಿ ವಿವಿಧ ದೇಶೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ. 2022ರ ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ವೆಲಾಸಿಟಿ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು ಎಂಬುದು ವಿಶೇಷ

ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಹಾಗೂ ಮ್ಯಾನೇಜರ್ ಆಗಿರುವ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ, ಎಂಸಿಎಯಲ್ಲಿ ಆಯ್ಕೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Story first published: Monday, February 6, 2023, 7:50 [IST]
Other articles published on Feb 6, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X