ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್‌ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?

WIPL 2023: Virat Kohli Reacts To Royal Challengers Bangalore Winning Womens IPL Franchise Bid

2023ರ ಮಹಿಳಾ ಪ್ರೀಮಿಯರ್ ಲೀಗ್‌ (WIPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಮಹಿಳಾ ತಂಡವನ್ನು ಹೊಂದುವ ಬಿಡ್ ಗೆದ್ದಿದ್ದು, ಇದಕ್ಕೆ ಆರ್‌ಸಿಬಿ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬುಧವಾರ ಸಂತೋಷ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಯಶಸ್ವಿ ಬಿಡ್‌ಗಳನ್ನು ಘೋಷಿಸಿತು. ಐದು ಕಂಪನಿಗಳು ಸೇರಿ ಸುಮಾರು 4669.99 ಕೋಟಿ ರೂ.ಗಳ ಸಂಯೋಜಿತ ಬಿಡ್ ಹಕ್ಕುಗಳನ್ನು ಹೊಂದಿವೆ.

ಕೆಎಲ್ ರಾಹುಲ್‌ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!ಕೆಎಲ್ ರಾಹುಲ್‌ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!

ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಫ್ರಾಂಚೈಸಿಯು ಬೆಂಗಳೂರು ಮೂಲದ ಮಹಿಳಾ ತಂಡವನ್ನು ಹೊಂದಲು ಸುಮಾರು 901 ಕೋಟಿ ರೂ.ಗಳ ಬಿಡ್ ಅನ್ನು ಖರೀದಿಸಿತು.

ಉಳಿದಂತೆ ಅದಾನಿ ಸ್ಪೋರ್ಟ್ಸ್‌ಲೈನ್ ಪ್ರೈ. ಲಿಮಿಟೆಡ್, ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್, JSW GMR ಕ್ರಿಕೆಟ್ ಪ್ರೈ. ಲಿಮಿಟೆಡ್ ಮತ್ತು ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈ. ಲಿಮಿಟೆಡ್ ಬಿಡ್ ಗೆದ್ದ ಫ್ರಾಂಚೈಸಿಗಳಾಗಿವೆ.

ಬಿಡ್ ಗೆದ್ದಿರುವುದಕ್ಕೆ ತುಂಬಾ ರೋಮಾಂಚನವಾಗಿದೆ

ಆರ್‌ಸಿಬಿಯು ಮಹಿಳಾ ಐಪಿಎಲ್ ತಂಡವನ್ನು ಹೊಂದಿದ್ದಕ್ಕಾಗಿ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು, "ಆರ್‌ಸಿಬಿ ಚೆನ್ನಾಗಿ ಆಡಿದೆ! ನನ್ನ ತಂಡವು ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ ತಂಡಕ್ಕಾಗಿ ಬಿಡ್ ಗೆದ್ದಿರುವುದಕ್ಕೆ ತುಂಬಾ ರೋಮಾಂಚನವಾಗಿದೆ. ನಮ್ಮ ಮಹಿಳಾ ತಂಡವನ್ನು ಕೆಂಪು ಮತ್ತು ಚಿನ್ನ ಜೆರ್ಸಿಯಲ್ಲಿ ನೋಡಲು ಮತ್ತು ಹುರಿದುಂಬಿಸಲು ಕಾಯಲು ಸಾಧ್ಯವಿಲ್ಲ," ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್

ಐದು ಫ್ರಾಂಚೈಸಿಗಳ ಪೈಕಿ ಮೂರು ತಂಡಗಳು ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ತಂಡಗಳನ್ನು ಹೊಂದಿವೆ. JSW GMR ಕ್ರಿಕೆಟ್ ಪ್ರೈವೇಟ್ ಅವರ ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಫ್ರಾಂಚೈಸಿಯ ಆರ್‌ಸಿಬಿ ಮತ್ತು ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ (ರಿಲಯನ್ಸ್‌ನ ಒಂದು ಭಾಗ) ಮುಂಬೈ ಇಂಡಿಯನ್ಸ್ ತಂಡವನ್ನು ಹೊಂದಿದೆ.

"ಸವಾಲುಗಳನ್ನು ಎದುರಿಸುವುದು, ಇತಿಹಾಸ ನಿರ್ಮಿಸುವುದು ಮತ್ತು ದಿಟ್ಟವಾಗಿ ಆಟವಾಡುವುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ ತಂಡದ ಹೆಮ್ಮೆಯ ಮಾಲೀಕರು," ಎಂದು ಆರ್‌ಸಿಬಿ ತಂಡ ಅಧಿಕೃತವಾಗಿ ಟ್ವೀಟ್ ಮಾಡಿದೆ.

ಇಂದು ಕ್ರಿಕೆಟ್‌ನಲ್ಲಿ ಐತಿಹಾಸಿಕ ದಿನವಾಗಿದೆ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ, "ಇಂದು ಕ್ರಿಕೆಟ್‌ನಲ್ಲಿ ಐತಿಹಾಸಿಕ ದಿನವಾಗಿದೆ, ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯಾವಳಿಯ ತಂಡಗಳಿಗಾಗಿ ನಡೆದ ಹರಾಜು ಪ್ರಕ್ರಿಯೆ 2008ರಲ್ಲಿ ಉದ್ಘಾಟನಾ ಪುರುಷರ ಐಪಿಎಲ್‌ನ ದಾಖಲೆಗಳನ್ನು ಮುರಿದಿದೆ. ನಾವು ಒಟ್ಟು ಬಿಡ್‌ನಲ್ಲಿ 4669.99 ಕೋಟಿ ರೂ. ಗಳಿಸಿದ್ದೇವೆ ಮತ್ತು ಬಿಡ್ ವಿಜೇತರಿಗೆ ಅಭಿನಂದನೆಗಳು," ಎಂದು ಟ್ವೀಟ್ ಮಾಡಿದ್ದಾರೆ.

""ಇದು ಮಹಿಳಾ ಕ್ರಿಕೆಟ್‌ನಲ್ಲಿ ಕ್ರಾಂತಿಯ ಆರಂಭವನ್ನು ಸೂಚಿಸುತ್ತದೆ ಮತ್ತು ನಮ್ಮ ಮಹಿಳಾ ಕ್ರಿಕೆಟಿಗರಿಗೆ ಮಾತ್ರವಲ್ಲದೆ, ಇಡೀ ಕ್ರೀಡಾ ಸಹೋದರತ್ವದ ಮೂಲಕ ಪರಿವರ್ತನೆಯ ಪ್ರಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಮಹಿಳಾ ಐಪಿಎಲ್ ಪಂದ್ಯಾವಳಿ ಮಹಿಳಾ ಕ್ರಿಕೆಟ್‌ನಲ್ಲಿ ಅಗತ್ಯ ಸುಧಾರಣೆಗಳನ್ನು ತರುತ್ತದೆ ಮತ್ತು ಎಲ್ಲವನ್ನೂ ಒಳಗೊಳ್ಳುವ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ. ಅದು ಪ್ರತಿಯೊಬ್ಬ ಪಾಲುದಾರರಿಗೆ ಪ್ರಯೋಜನವನ್ನು ನೀಡುತ್ತದೆ,'' ಎಂದು ಸುದೀರ್ಘವಾಗಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಐಪಿಎಲ್ ತಂಡಗಳ ಬಿಡ್ ಗೆದ್ದ ಐದು ಫ್ರಾಂಚೈಸಿಗಳು

ಮಹಿಳಾ ಐಪಿಎಲ್ ತಂಡಗಳ ಬಿಡ್ ಗೆದ್ದ ಐದು ಫ್ರಾಂಚೈಸಿಗಳು

1) ಅದಾನಿ ಸ್ಪೋರ್ಟ್ಸ್‌ಲೈನ್ ಪ್ರೈ. ಲಿಮಿಟೆಡ್ (ಅಹಮದಾಬಾದ್) - 1289 ಕೋಟಿ ರೂ.

2) ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ (ಮುಂಬೈ) - 912.99 ಕೋಟಿ

3) ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ (ಬೆಂಗಳೂರು) - 901 ಕೋಟಿ ರೂ.

4) JSW GMR ಕ್ರಿಕೆಟ್ ಪ್ರೈ. ಲಿಮಿಟೆಡ್ (ದೆಹಲಿ) - 810 ಕೋಟಿ ರೂ.

5) ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈ. ಲಿಮಿಟೆಡ್ (ಲಕ್ನೋ) - 757 ಕೋಟಿ ರೂ.

Story first published: Wednesday, January 25, 2023, 21:58 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X