ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನಕ್ಕೆ ಮೊದಲ ಟೆಸ್ಟ್: ಮೋದಿ ಶುಭಾಶಯ, ದುರಾನಿ ಆಕರ್ಷಣೆ

wishes pouring in twitter for afghanistan first test match

ಬೆಂಗಳೂರು, ಜೂನ್ 14: ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ತನ್ನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದೆ.

ಭಾರತ vs ಆಫ್ಘಾನಿಸ್ತಾನ ಸ್ಕೋರ್ ಕಾರ್

ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳ ಕ್ರಿಕೆಟ್ ಆಟಗಾರರು, ದಿಗ್ಗಜರು, ರಾಜಕೀಯ ನಾಯಕರು ಮತ್ತು ಕ್ರಿಕೆಟ್ ಪ್ರಿಯರು ಅಫ್ಘಾನಿಸ್ತಾನ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಅಫ್ಘಾನಿಸ್ತಾನ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಸಹ ಟ್ವಿಟ್ಟರ್‌ನಲ್ಲಿ ಶುಭಾಶಯ ಸಂದೇಶ ರವಾನಿಸಿದ್ದಾರೆ.

ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕ

ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ನ ಚಾಂಪಿಯನ್‌ಗಳಾದ ನಮ್ಮ ಹೆಮ್ಮೆಯ ಆಟಗಾರರು ಜಗತ್ತಿನ ಶ್ರೇಷ್ಠ ತಂಡದ ವಿರುದ್ಧ ಆಡುತ್ತಿದೆ ಎಂದು ಅವರು ಹೇಳಿದ್ದಾರೆ.

ಬಾಂಧವ್ಯ ಬಲಪಡಿಸಲಿ

ಅಫ್ಘಾನಿಸ್ತಾನದ ಕ್ರಿಕೆಟ್ ತಂಡವು ತನ್ನ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡುತ್ತಿರುವುದಕ್ಕೆ ಆಫ್ಘನ್ ಜನತೆಯನ್ನು ಅಭಿನಂದಿಸುತ್ತೇನೆ.

ಅವರ ಐತಿಹಾಸಿಕ ಪಂದ್ಯವನ್ನು ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ನೀಡಿದೆ. ಎರಡೂ ತಂಡಗಳಿಗೆ ಶುಭ ಹಾರೈಕೆಗಳು! ಕ್ರೀಡೆಯು ನಮ್ಮ ಜನರನ್ನು ಮತ್ತಷ್ಟು ಹತ್ತಿರ ತರುವುದನ್ನು ಮುಂದುವರಿಸಲಿ ಮತ್ತು ಬಾಂಧವ್ಯಗಳನ್ನು ಬಲಪಡಿಸಲಿ ಎಂದು ಮೋದಿ ಆಶಿಸಿದ್ದಾರೆ.

ಆಫ್ಘನ್ ಅಧ್ಯಕ್ಷರ ಶುಭಾಶಯ

ಇದು ಐತಿಹಾಸಿಕ ದಿನ. ಎಲ್ಲ ಆಫ್ಘನ್ನರ ಪರವಾಗಿ ಕ್ರಿಕೆಟ್ ಕ್ರೀಡೆಗೆ ಕೊಡುಗೆ ನೀಡಿದ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಮತ್ತು ಗೌರವ ಅರ್ಪಿಸುತ್ತೇನೆ. ಭಾರತ ಮತ್ತು ಈಗ ಅಫ್ಘಾನಿಸ್ತಾನ ಏಷ್ಯಾದ ಎರಡು ಪ್ರಮುಖ ಕ್ರಿಕೆಟ್ ಶಕ್ತಿಗಳಾಗಿವೆ ಎಂದು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಸಲೀಂ ದುರಾನಿ ಆಕರ್ಷಣೆ

ಈ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಕೇಂದ್ರ ಬಿಂದು ಆಗಿದ್ದರೂ, ಮೊದಲ ದಿನ ಪ್ರಮುಖ ಆಕರ್ಷಣೆಯಾಗಿದ್ದವರು ಮಾಜಿ ಕ್ರಿಕೆಟಿಗ 83 ವರ್ಷದ ಸಲೀಂ ದುರಾನಿ. 29 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಲ್‌ರೌಂಡರ್ ಸಲೀಂ ದುರಾನಿ ಅವರು ಅಫ್ಘಾನಿಸ್ತಾನದಲ್ಲಿ ಜನಿಸಿದ ಭಾರತ ಕ್ರಿಕೆಟ್ ತಂಡದ ಏಕೈಕ ಆಟಗಾರ. ಎಡಗೈ ಸಾಂಪ್ರದಾಯಿಕ ಸ್ಪಿನ್ ಬೌಲರ್ ಆಗಿದ್ದ ಅವರು, ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು.

ಕನಸಿನ ಪಂದ್ಯ

ಅಫ್ಘಾನಿಸ್ತಾನ ತಂಡದ ಆಟಗಾರರ ಕೆಂಪು ಟೋಪಿಗಳನ್ನು ಸಾಲಾಗಿ ಜೋಡಿಸಿಟ್ಟ ಚಿತ್ರವನ್ನು ಹಾಕಿರುವ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಇದು ನೀವು ಕಾಣುತ್ತಿದ್ದ ಕನಸು. ಅಫ್ಘಾನಿಸ್ತಾನಕ್ಕೆ ಮೊದಲ ಟೆಸ್ಟ್ ಪಂದ್ಯ ಎಂದು ಟ್ವೀಟ್ ಮಾಡಿದ್ದಾರೆ.

ಶುಭ ಹಾರೈಸಿದ ರಾಥೋರ್

ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್ ರಾಥೋರ್ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಚೀಫ್ ಎಕ್ಸಿಕ್ಯುಟಿವ್ ಅಬ್ದುಲ್ಲಾ ಅಬ್ದುಲ್ಲಾ ಅವರು ಪಂದ್ಯದ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರ ಕೈಕುಲುಕಿ ಶುಭ ಹಾರೈಸಿದರು.

ಕೊನೆಗೂ ಬಂದ ದೊಡ್ಡ ದಿನ

ದೊಡ್ಡ ದಿನ ಕೊನೆಗೂ ಬಂದಿದೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಎದುರಿಸಲು ಅಫ್ಘಾನಿಸ್ತಾನವು ಸಜ್ಜಾಗಿದೆ ಎಂದು ಆಫ್ಘನ್ ಕ್ರಿಕೆಟ್ ಮಂಡಳಿ ಸಂತಸ ಹಂಚಿಕೊಂಡಿದೆ.

Story first published: Thursday, June 14, 2018, 11:00 [IST]
Other articles published on Jun 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X