ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!

With Smith, Warner in, I think Australia will win: Shane Warne

ಲಂಡನ್‌, ಮೇ 27: ಈ ಬಾರಿ ವಿಶ್ವಕಪ್‌ ಗೆಲ್ಲೋರು ಯಾರು ಎಂದು ಈಗಾಗಲೇ ಕ್ರಿಕೆಟ್‌ ಪಂಡಿತರೆಲ್ಲಾ ಲೆಕ್ಕಾಚಾರ ಹಾಕಿ ಆತಿಥೇಯ ಇಂಗ್ಲೆಂಡ್‌ ಅಥವಾ ಟೀಮ್‌ ಇಂಡಿಯಾ ಚಾಂಪಿಯನ್ಸ್‌ ಪಟ್ಟಕ್ಕೇರಲಿದೆ ಎಂದು ಹೇಳ ತೊಡಗಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

ಇದಕ್ಕೆ ತಾವೇನು ಕಮ್ಮಿಯಿಲ್ಲ ಎಂದಿರುವ ಆಸ್ಟ್ರೇಲಿಯಾ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌, ಜುಲೈ 14ರಂದು ಇತಿಹಾಸ ಪ್ರಸಿದ್ಧ ಲಾರ್ಡ್‌ ಕ್ರೀಡಾಂಗಣದಲ್ಲಿ ಆರೊನ್‌ ಫಿಂಚ್‌ ಸಾರಥ್ಯದ ಕಾಂಗರೂ ಪಡೆ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಭವಿಷ್ಯ ನುಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!

ವಾರ್ನ್‌ ಪ್ರಕಾರ ಕೇವಲ ಅಂಕಿ ಅಂಶಗಳಿಂದ ಮಾತ್ರವಲ್ಲ ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರಂತಹ ಬಲಿಷ್ಠ ಆಟಗಾರರ ಪುನರಾಗಮನದಿಂದಾಗಿ ತಂಡವು ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ದೊಡ್ಡ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡದ ಗುಣಮಟ್ಟ ಮತ್ತೊಂದು ಹಂತದಲ್ಲಿರುತ್ತದೆ. ಹೀಗಾಗಿ ಸಹಜವಾಗಿಯೇ ತಂಡ ಚಾಂಪಿಯನ್ಸ್‌ ಪಟ್ಟ ಪಡೆಯುವ ಉತ್ತಮ ಅವಕಾಶ ಹೊಂದಿದೆ ಎಂದೂ ವಾರ್ನ್‌ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

"ಪ್ರತಿಯೊಬ್ಬರಿಗೂ ಆಸ್ಟ್ರೇಲಿಯಾ ತಂಡ ಒಂದು ಸಾಮಾನ್ಯ ತಂಡಂತೆ ಕಾಣುತ್ತಿದೆ. ಏಕೆಂದರೆ ತಂಡವು ಕಳೆದ 12 ತಿಂಗಳ ಅವಧಿಯಲ್ಲಿ ಕಳಪೆ ಆಟವಾಡಿದೆ. ಆದರೆ, ಕಳೆದ ಎರಡು ತಿಂಗಳ ಅವಧಿಯಲ್ಲಿ ಆಸೀಸ್‌ ಪಡೆ ಏಕದಿನ ಕ್ರಿಕೆಟ್‌ನಲ್ಲಿ ಲಯಕ್ಕೆ ಮರಳಿದೆ. ಹಿಂದೆಲ್ಲಾ ಅಬ್ಬರಿಸಿದ್ದ ಆಸ್ಟ್ರೇಲಿಯಾ ತಂಡದಂತೆ ಆಲೋಚಿಸಲು ಈಗಿನ ತಂಡ ಆರಂಭಿಸಿದೆ. ಯಾವುದೇ ಹಂತದಲ್ಲಿ ಪ್ರಶಸ್ತಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಗಳಿಸಿದೆ,'' ಎಂದು ಹೇಳಿದ್ದಾರೆ.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

"ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಆಟವಾಡಿದ್ದು, ಸಹಜವಾಗಿಯೇ ಫೇವರಿಟ್ಸ್‌ ಪಟ್ಟ ಪಡೆದಿವೆ. ಆದರೆ, ವಿಶ್ವಕಪ್‌ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನ ಗಮನಿಸಿದರೆ ಕಳೆದ 6 ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡ 4 ಬಾರಿ ಪ್ರಶಸ್ತಿ ಗೆದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ವಿಶ್ವಕಪ್‌ ಗೆಲ್ಲುತ್ತದೆ ಎಂಬುದು ನನ್ನ ಅನಿಸಿಕೆ,'' ಎಂದು ಸಾರ್ವಕಾಲಿಕ ಶ್ರೇಷ್ಠ ಲೆಗ್‌ಸ್ಪಿನ್ನರ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

"ಆದರೂ ಆಸ್ಟ್ರೇಲಿಯಾ ತಂಡ ಈ ಬಾರಿ ಭಾರತ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಗಳನ್ನು ಮಣಿಸಬೇಕಿದೆ. ನನ್ನ ಪ್ರಕಾರ ಫೇವರಿಟ್ಸ್‌ ಭಾರತವೂ ಅಲ್ಲ ಇಂಗ್ಲೆಂಡ್‌ ತಂಡವೂ ಅಲ್ಲ. ಏಕೆಂದರೆ, ಸ್ಟೀವನ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ ಅವರಂತಹ ಬಲಿಷ್ಠ ಆಟಗಾರರು ಮರಳಿರುವುದರಿಂದ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ,'' ಎಂದಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

"ಸ್ಮಿತ್‌ ಅದ್ಭುತ ಆಟಗಾರ. ಕಳೆದ ವರ್ಷ ಮಾರ್ಚ್‌ನಲ್ಲಿ ನಿಮ್ಮನ್ನು ವಿಶ್ವದ 5 ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳು ಯಾರೆಂದು ಕೇಳಿದ್ದರೆ, ಕೊಹ್ಲಿ, ಡಿ'ವಿಲಿಯರ್ಸ್‌, ಸ್ಟೀವ್‌ ಸ್ಮಿತ್‌, ವಾರ್ನರ್‌ ಹಾಗೂ ಕೇನ್‌ ವಿಲಿಯಮ್ಸನ್‌ ಎಂದು ಹೇಳುತ್ತಿದ್ದಿರಿ. ಇದರಲ್ಲೇ ಗಮನಿಸಿದರೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಟಾಪ್‌ 5ನಲ್ಲಿ ಇದ್ದಾರೆ. ಅವರಿಬ್ಬರು ಇಲ್ಲದೇ ಇದಿದ್ದರೆ ಅದು ತಂಡಕ್ಕೆ ಬಹುದೊಡ್ಡ ನಷ್ಟ,'' ಎಂದು ಆಸ್ಟ್ರೇಲಿಯಾ ತಂಡದಲ್ಲಿ ಸ್ಮಿತ್‌ ಮತ್ತು ವಾರ್ನರ್‌ ಅವರ ಮಹತ್ವದ ಕುರಿತಾಗಿ ವಾರ್ನ್‌ ಮಾತನಾಡಿದ್ದಾರೆ.

Story first published: Monday, May 27, 2019, 18:06 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X