ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್ ಲೀಗ್‌: ಮೊದಲ ಶತಕ ಸಿಡಿಸಿದ ಸ್ಮೃತಿ ಮಂದಾನ

women cricket super league smriti mandhana century

ಮ್ಯಾಂಚೆಸ್ಟರ್, ಆಗಸ್ಟ್ 4: ಭಾರತದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಟಿ20ಯಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದಾರೆ.

ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ಸೂಪರ್‌ ಲೀಗ್‌ನಲ್ಲಿ ಮಂದಾನ 61 ಎಸೆತಗಳಲ್ಲಿ 102 ರನ್‌ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳಿದ್ದವು.

ಟಿ20 : ತ್ವರಿತಗತಿ 50 ಗಳಿಸಿದ ಸ್ಮೃತಿ ಕೊಂಡಾಡಿದ ಟ್ವೀಟ್ ಲೋಕ! ಟಿ20 : ತ್ವರಿತಗತಿ 50 ಗಳಿಸಿದ ಸ್ಮೃತಿ ಕೊಂಡಾಡಿದ ಟ್ವೀಟ್ ಲೋಕ!

ಇದು ಅವರ ಟಿ20 ಜೀವನದ ಮೊದಲ ಶತಕವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಮೂರು ಶತಕಗಳಲ್ಲಿ ಬಾರಿಸಿದ್ದಾರೆ. ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕವೂ ಹೌದು.

ಇಂಗ್ಲೆಂಡ್‌ನ ವೆಸ್ಟರ್ನ್ ಸ್ಟಾರ್ಮ್ ತಂಡದಲ್ಲಿ ಆಡುತ್ತಿರುವ ಸ್ಮೃತಿ ಮಂದಾನ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ 48, 37, 52*, 43* ರನ್ ಗಳಿಸಿದ್ದ ಅವರು, ಈ ಪಂದ್ಯದ ಇನ್ನಿಂಗ್ಸ್‌ಅನ್ನು ಶತಕವಾಗಿ ಪರಿವರ್ತಿಸಿದರು.

ಆದರೆ, ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿ ಸಿಕ್ಸರ್ ಬಾರಿಸಿ ಲಂಕಾಶೈರ್ ಥಂಡರ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಭಾರತದ ಮತ್ತೊಬ್ಬ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಈ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದರು.

ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್‌ನಲ್ಲಿ ಫಿನಿಶ್ ಮಾಡಿದ ಕೌರ್ ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್‌ನಲ್ಲಿ ಫಿನಿಶ್ ಮಾಡಿದ ಕೌರ್

ಮೊದಲು ಬ್ಯಾಟಿಂಗ್ ಮಾಡಿದ ಲಂಕಾಶೈರ್, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಅಮಿ ಸಟ್ಟರ್ಥ್‌ವೇಟ್ ಅಜೇಯ 85 ರನ್ ಗಳಿಸಿದರು.

ಸ್ಮೃತಿ ಮಂದಾನ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟರ್ನ್ ಸ್ಟಾರ್ಮ್ ಈ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ ತಲುಪಿತು.

ಗೆಲುವಿಗೆ ಕೇವಲ ಎರಡು ರನ್ ಬೇಕಿದ್ದಾಗ ಸ್ಮೃತಿ ಔಟಾದರು.

ಕೆಲವು ದಿನಗಳ ಹಿಂದಷ್ಟೇ ಅವರು 18 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಅತಿ ವೇಗದ ಅರ್ಧಶತಕದ ದಾಖಲೆ ನಿರ್ಮಿಸಿದ್ದರು.

Story first published: Saturday, August 4, 2018, 11:36 [IST]
Other articles published on Aug 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X