ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India squad for Women's Asia Cup 2022 : ಹರ್ಮನ್‌ಪ್ರೀತ್ ನಾಯಕತ್ವದ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

Womens Asia Cup 2022: Harmanpreet Kaur Captained Indian Squad Announced By BCCI

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬುಧವಾರ, ಸೆಪ್ಟೆಂಬರ್ 21ರಂದು ಮಹಿಳಾ ಏಷ್ಯಾ ಕಪ್ 2022ರ ಟೂರ್ನಿಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ್ದು, ಪಂದ್ಯಾವಳಿ ಅಕ್ಟೋಬರ್ 1ರಿಂದ ಪ್ರಾರಂಭವಾಗಲಿದೆ.

ಹರ್ಮನ್‌ಪ್ರೀತ್ ಕೌರ್ ಅವರು ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ 15 ಸದಸ್ಯರ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಮಹಿಳಾ ಟಿ20 ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ; ಈ ದಿನ ಭಾರತ-ಪಾಕಿಸ್ತಾನ ಮುಖಾಮುಖಿಮಹಿಳಾ ಟಿ20 ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ; ಈ ದಿನ ಭಾರತ-ಪಾಕಿಸ್ತಾನ ಮುಖಾಮುಖಿ

ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ಟಿ20 ತಂಡದಲ್ಲಿ ಭಾರತ ಯಾವುದೇ ಬದಲಾವಣೆ ಮಾಡಿಲ್ಲ. ವಿಕೆಟ್‌ಕೀಪರ್ ತಾನಿಯಾ ಭಾಟಿಯಾ ಮತ್ತು ಬೌಲರ್ ಸಿಮ್ರಾನ್ ಬಹದ್ದೂರ್ ಅವರನ್ನು ಸ್ಟ್ಯಾಂಡ್‌ಬೈ ಗುಂಪಿಗೆ ಸೇರಿಸಲಾಗಿದೆ. ಈ ಇಬ್ಬರು ಆಟಗಾರರು ಇಂಗ್ಲೆಂಡ್‌ನಲ್ಲಿ ನಡೆದ 3 ಪಂದ್ಯಗಳ ಸರಣಿಗೆ ತಂಡದ ಭಾಗವಾಗಿದ್ದರು.

ಮಹಿಳಾ ಏಷ್ಯಾ ಕಪ್ 2022 ಭಾರತ ತಂಡ:

ಮಹಿಳಾ ಏಷ್ಯಾ ಕಪ್ 2022 ಭಾರತ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್-ಕೀಪರ್), ಸ್ನೇಹ್ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ವಸ್ತ್ರಕರ್, ರಾಜೇಶ್ವರಿ ಗಾಯಕವಾಡ, ರಾಧಾ ಯಾದವ್, ಕೆ.ಪಿ ನವಗಿರೆ

ಸ್ಟ್ಯಾಂಡ್‌ಬೈ ಆಟಗಾರರು: ತನಿಯಾ ಸಪ್ನಾ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್.

ಭಾರತವನ್ನು ಮುನ್ನಡೆಸಲಿದ್ದಾರೆ ಹರ್ಮನ್‌ಪ್ರೀತ್ ಕೌರ್

ಭಾರತವನ್ನು ಮುನ್ನಡೆಸಲಿದ್ದಾರೆ ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್ ಅವರು ಏಷ್ಯಾ ಕಪ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ, ಇದೇ ವೇಳೆ ಭಾರತ ತಂಡವು ಏಷ್ಯನ್ ರಾಷ್ಟ್ರವಾಗಿ ತನ್ನ ಸ್ಥಾನಮಾನವನ್ನು ಉತ್ತಮ ಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ ಭಾರತ ತಂಡದ ಉಪನಾಯಕಿಯಾಗಿ ಮುಂದುವರಿಯಲಿದ್ದಾರೆ.

ಇನ್ನು ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್, ಮೇಘನಾ ಸಿಂಗ್ ಭಾರತದ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ರಾಧಾ ಯಾದವ್, ಸ್ನೇಹ್ ರಾಹಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಬಾಂಗ್ಲಾದೇಶದ ಉಪಖಂಡದ ಪರಿಸ್ಥಿತಿಗಳಿಗೆ ಸ್ಪಿನ್ ವಿಭಾಗದ ಉಸ್ತುವಾರಿ ವಹಿಸಲಿದ್ದಾರೆ.

ಅಕ್ಟೋಬರ್ 7ರಂದು ಪಾಕಿಸ್ತಾನವನ್ನು ಎದುರಿಸಲಿರುವ ಭಾರತ

ಅಕ್ಟೋಬರ್ 7ರಂದು ಪಾಕಿಸ್ತಾನವನ್ನು ಎದುರಿಸಲಿರುವ ಭಾರತ

ಭಾರತ ತಂಡದಲ್ಲಿ ಕೆಪಿ ನವಗಿರೆ ಮತ್ತು ದಯಾಳನ್ ಹೇಮಲತಾ ಅವರನ್ನು ಉಳಿಸಿಕೊಂಡಿದೆ, ರಿಚಾ ಘೋಷ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಹೆಸರಿಸಲಾಗಿದೆ.

ಸಿಲ್ಹೆಟ್‌ನಲ್ಲಿ ಅಕ್ಟೋಬರ್ 1ರಿಂದ 15ರವರೆಗೆ ನಡೆಯಲಿರುವ ಮಹಿಳಾ ಏಷ್ಯಾ ಕಪ್‌ನಲ್ಲಿ 7 ತಂಡಗಳು ಭಾಗವಹಿಸಲಿವೆ. ಶ್ರೀಲಂಕಾ ವಿರುದ್ಧ ಭಾರತ ಮೊದಲ ದಿನವೇ ಅಭಿಯಾನ ಆರಂಭಿಸಲಿದೆ. ಭಾರತವು ಮುಂದಿನ ದಿನಗಳಲ್ಲಿ ಮಲೇಷ್ಯಾ (ಅಕ್ಟೋಬರ್ 3) ಮತ್ತು ಯುಎಇ (ಅಕ್ಟೋಬರ್ 4) ವಿರುದ್ಧ ಸತತ ದಿನಗಳಲ್ಲಿ ಅಕ್ಟೋಬರ್ 7ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಭಾರತ, ಪಾಕಿಸ್ತಾನ, ಆತಿಥೇಯ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ಗುಂಪು-ಹಂತಗಳಲ್ಲಿ ಒಮ್ಮೊಮ್ಮೆ ಪರಸ್ಪರ ವಿರುದ್ಧ ಆಡಲಿವೆ. ರೌಂಡ್-ರಾಬಿನ್ ಹಂತದ ಕೊನೆಯಲ್ಲಿ ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

Story first published: Wednesday, September 21, 2022, 14:32 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X