ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಕೌರ್ ಬಳಗಕ್ಕೆ ಮಲೇಷ್ಯಾ ತಂಡದ ಸವಾಲು; ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ 11ರ ಬಳಗ

Womens Asia Cup 2022: India vs Malaysia; Fantasy Dream Team, Prediction Playing 11 And Match Details

ಸೋಮವಾರ (ಅಕ್ಟೋಬರ್ 3) ದಂದು ಶ್ರೀಲಂಕಾದ ಸಿಲ್ಹೆಟ್‌ನಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ 2022 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಮಲೇಷ್ಯಾ ಮಹಿಳಾ ಕ್ರಿಕೆಟ್ ತಂಡವನ್ನು ಎದುರಿಸಲಿದೆ.

ಭಾರತ ತಂಡ ಶನಿವಾರ ಆತಿಥೇಯ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ 41 ರನ್‌ಗಳ ಆಕರ್ಷಕ ಜಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದರೆ, ಭಾನುವಾರ (ಅಕ್ಟೋಬರ್ 2) ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಕೈಯಲ್ಲಿ ಮಲೇಷ್ಯಾ ತಂಡ ಒಂಬತ್ತು ವಿಕೆಟ್‌ಗಳ ದೊಡ್ಡ ಸೋಲನ್ನು ಅನುಭವಿಸಿತು.

Asia Cup 2022: ಜೆಮಿಮಾ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯAsia Cup 2022: ಜೆಮಿಮಾ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ತಮ್ಮ ಮಹಿಳಾ ಏಷ್ಯಾ ಕಪ್ 2022ರ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 41 ರನ್‌ಗಳ ಗೆಲುವು ಸಾಧಿಸಿದ ನಂತರ ಅತ್ಯುತ್ತಮವಾಗಿ ಗಾಯದಿಂದ ರಾಷ್ಟ್ರೀಯ ತಂಡಕ್ಕೆ ಮರಳಿದ್ದಕ್ಕಾಗಿ ಭಾರತೀಯ ಬ್ಯಾಟರ್ ಜೆಮಿಮಾ ರೋಡ್ರಿಗಸ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿದ್ದ ಭಾರತ

ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿದ್ದ ಭಾರತ

ಶನಿವಾರದಂದು ಸಿಲ್ಹೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ತಮ್ಮ ಮೊದಲ ಮಹಿಳಾ ಏಷ್ಯಾ ಕಪ್ 2022 ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರ ಆಕರ್ಷಕ 76 ರನ್ ಮತ್ತು ಬೌಲರ್‌ಗಳು ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಲು ಸಹಾಯ ಮಾಡಿದರು.

"ಏಷ್ಯಾ ಕಪ್‌ಗೆ ಉತ್ತಮ ಆರಂಭ, ಎಲ್ಲಕ್ಕಿಂತ ಹೆಚ್ಚಾಗಿ ನಾನು ಹೆಚ್ಚು ಪ್ರೀತಿಸುವ ತಂಡದೊಂದಿಗೆ ಗಾಯದ ನಂತರ ಮರಳಲು ನನಗೆ ಸಂತೋಷವಾಗಿದೆ. ಈ ಸಮಯದಲ್ಲಿ ನನಗೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ಮರಿಸುತ್ತೇನೆ. ನೀವಿಲ್ಲದೆ ಅದು ಸಾಧ್ಯವಿಲ್ಲ, ನಾವು ಪ್ರದರ್ಶನವನ್ನು ಹೆಚ್ಚಿಸುತ್ತೇವೆ," ಎಂದು ಜೆಮಿಯಾ ರೋಡ್ರಿಗಸ್ ಟ್ವೀಟ್ ಮಾಡಿದ್ದಾರೆ.

ಜೆಮಿಯಾ ರೋಡ್ರಿಗಸ್ ಅವರು ಆಗಸ್ಟ್‌ನಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದರು ಮತ್ತು ಭಾರತದ ಐತಿಹಾಸಿಕ ಇಂಗ್ಲೆಂಡ್ ಪ್ರವಾಸದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿ ಭಾರತೀಯ ಮಹಿಳಾ ತಂಡ ಏಕದಿನ ಸರಣಿಯನ್ನು 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು.

ಭಾರತ vs ಮಲೇಷ್ಯಾ ಪಂದ್ಯದ ವಿವರಗಳು

ಭಾರತ vs ಮಲೇಷ್ಯಾ ಪಂದ್ಯದ ವಿವರಗಳು

ಭಾರತ ಮಹಿಳಾ ತಂಡ vs ಮಲೇಷ್ಯಾ ಮಹಿಳಾ ತಂಡ, ಏಷ್ಯಾ ಕಪ್ ಪಂದ್ಯದ ಸಂಖ್ಯೆ 6

ಸ್ಥಳ: ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

ದಿನಾಂಕ ಮತ್ತು ಸಮಯ: ಅಕ್ಟೋಬರ್ 3ರಂದು ಮಧ್ಯಾಹ್ನ 1 ಗಂಟೆಗೆ (ಭಾರತೀಯ ಕಾಲಮಾನ)

ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್

ಭಾರತ ಮಹಿಳಾ ತಂಡ vs ಮಲೇಷ್ಯಾ ಮಹಿಳಾ ತಂಡ ಫ್ಯಾಂಟಸಿ ಡ್ರೀಮ್ ಟೀಂ

ಭಾರತ ಮಹಿಳಾ ತಂಡ vs ಮಲೇಷ್ಯಾ ಮಹಿಳಾ ತಂಡ ಫ್ಯಾಂಟಸಿ ಡ್ರೀಮ್ ಟೀಂ

ವಿಕೆಟ್ ಕೀಪರ್: ರಿಚಾ ಘೋಷ್

ಬ್ಯಾಟರ್ಸ್: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಎಲ್ಸಾ ಹಂಟರ್

ಆಲ್‌ರೌಂಡರ್‌ಗಳು: ದೀಪ್ತಿ ಶರ್ಮಾ, ಮಾಸ್ ಎಲಿಸಾ, ಡಬ್ಲ್ಯೂ ದುರೈಸಿಂಗಮ್

ಬೌಲರ್‌ಗಳು: ರೇಣುಕಾ ಸಿಂಗ್, ರಾಧಾ ಯಾದವ್, ಸಾಶಾ ಅಜ್ಮಿ

ನಾಯಕಿ: ಸ್ಮೃತಿ ಮಂಧಾನ

ಉಪನಾಯಕಿ: ದೀಪ್ತಿ ಶರ್ಮಾ

ಭಾರತ ಮಹಿಳಾ ತಂಡ vs ಮಲೇಷ್ಯಾ ಮಹಿಳಾ ತಂಡ ಸಂಭಾವ್ಯ ಆಡುವ 11ರ ಬಳಗ

ಭಾರತ ಮಹಿಳಾ ತಂಡ vs ಮಲೇಷ್ಯಾ ಮಹಿಳಾ ತಂಡ ಸಂಭಾವ್ಯ ಆಡುವ 11ರ ಬಳಗ

ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ದಯಾಲನ್ ಹೇಮಲತಾ, ರಿಚಾ ಘೋಷ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಧಾ ಯಾದವ್

ಮಲೇಷ್ಯಾ ಮಹಿಳಾ ತಂಡ: ಎಲ್ಸಾ ಹಂಟರ್, ನುರಿಲ್ಯಾ ನಟಾಸ್ಯಾ, ಮಹಿರಾ ಇಜ್ಜಾತಿ ಇಸ್ಮಾಯಿಲ್, ಸಶಾ ಅಜ್ಮಿ, ಐನ್ನಾ ಹಮೀಜಾ ಹಾಶಿಮ್, ಮಾಸ್ ಎಲಿಸಾ, ಡಬ್ಲ್ಯೂ ಎ ದುರೈಸಿಂಗಮ್(ನಾಯಕಿ), ವಾನ್ ಜೂಲಿಯಾ, ಜೆ ಇಂಟಾನ್, ಐಸ್ಯಾ ಎಲೀಸಾ, ನೂರ್ ದಾನಿಯಾ ಸ್ಯುಹದಾ

Story first published: Monday, October 3, 2022, 12:25 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X