Asia Cup 2022: ಜೆಮಿಮಾ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಸಿಲ್ಹೆಟ್‌ನಲ್ಲಿ ಶನಿವಾರ ನಡೆದ ಮಹಿಳಾ ಟಿ20 ಏಷ್ಯಾಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ಮಹಿಳಾ ತಂಡವನ್ನು 41 ರನ್‌ಗಳಿಂದ ಸೋಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಿದ ಭಾರತ ತಂಡ ಜೆಮ್ಮಿಯಾ ರೋಡ್ರಿಗಸ್‌ ಅವರ 53 ಎಸೆತಗಳಲ್ಲಿ 76 ರನ್‌ಗಳ ಸಹಾಯದಿಂದ ಆರು ವಿಕೆಟ್‌ಗೆ 150 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ 151 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ದಯಾಲನ್ ಹೇಮಲತಾ (3/15), ಪೂಜಾ ವಸ್ತ್ರಾಕರ್ (2/12) ಅತ್ಯುತ್ತಮ ಬೌಲಿಂಗ್ ಸಹಾಯದಿಂದ 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ (2/15) ಮತ್ತು ರಾಧಾ ಯಾದವ್ (1/15) ವಿಕೆಟ್ ಪಡೆದರು.

Asia Cup 2022: ಭಾರತ ಮಹಿಳಾ ತಂಡಕ್ಕೆ ಲಂಕಾ ಮಹಿಳೆಯರ ಸವಾಲು; ಫ್ಯಾಂಟಸಿ ಡ್ರೀಮ್ ಟಿಂ, ಸಂಭಾವ್ಯ ತಂಡಗಳುAsia Cup 2022: ಭಾರತ ಮಹಿಳಾ ತಂಡಕ್ಕೆ ಲಂಕಾ ಮಹಿಳೆಯರ ಸವಾಲು; ಫ್ಯಾಂಟಸಿ ಡ್ರೀಮ್ ಟಿಂ, ಸಂಭಾವ್ಯ ತಂಡಗಳು

ಭಾರತ ನೀಡಿದ್ದ 151 ರನ್‌ಗಳ ಗುರಿಗೆ ಶ್ರೀಲಂಕಾ ವನಿತೆಯರು ಗಂಭೀರ ಸವಾಲನ್ನು ಒಡ್ಡಲು ಸಾಧ್ಯವಾಗಲಿಲ್ಲ. ಭಾರತ ಮೊದಲು ಬ್ಯಾಟಿಂಗ್ ಮಾಡುವಾಗ ಸ್ಮೃತಿ ಮಂಧಾನ ರೂಪದಲ್ಲಿ ಆರಂಭಿಕ ವಿಕೆಟ್ ಕಳೆದುಕೊಂಡಿತು.

ಶ್ರೀಲಂಕಾದ ಮಲ್ಶಾ ಶೆಹಾನಿ ಸಂವೇದನಾಶೀಲ ಕ್ಯಾಚ್‌ಗೆ ಆರಂಭಿಕ ಜೋಡಿ ಮುರಿದುಬಿತ್ತು ಮತ್ತು ಸ್ಮೃತಿ ಮಂಧಾನ ಔಟಾದ ನಂತರ ಬಂದ ಜೆಮಿಮಾ ರೋಡ್ರಿಗಸ್ ಅವರು ಅರ್ಧಶತಕ ಬಾರಿಸುವ ಮೂಲಕ ಭಾರತವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಇದೇ ವೇಳೆ 10 ರನ್ ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಳ್ಳಬೇಕಾಯಿತು.

ನಂತರ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಉತ್ತಮವಾಗಿ ಆಡಿದರು ಮತ್ತು ಜೆಮಿಮಾ ರೋಡ್ರಿಗಸ್ ಜೊತೆಗೂಡಿ ಕೊನೆಯ ನಾಲ್ಕು ಓವರ್‌ಗಳಲ್ಲಿ ಹೆಚ್ಚಿನ ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿರಿಸಿದರು. 33 ರನ್ ಗಳಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ರಣಸಿಂಘೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಜೆಮಿಮಾ ರೋಡ್ರಿಗಸ್ 53 ಎಸೆತಗಳಲ್ಲಿ 76 ರನ್‌ ಗಳಿಸಿದರು, ಇದರಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿದ್ದವು. ಕೊನೆಯಲ್ಲಿ ಹೆಮಲತಾ 13 ರನ್ ಮತ್ತು ರಿಚಾ ಘೋಷ್ 9 ರನ್ ಗಳಿಸಿದರು. ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಒಟ್ಟುಗೂಡಿಸಿತು.

ಸಂಕ್ಷಿಪ್ತ ಸ್ಕೋರ್:
ಭಾರತ ಮಹಿಳೆಯರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 150 ರನ್ (ಜೆಮಿಮಾ ರೋಡ್ರಿಗಸ್ 76; ಓ ರಣಸಿಂಘೆ 3/32)
ಶ್ರೀಲಂಕಾ ಮಹಿಳೆಯರು: 18.2 ಓವರ್‌ಗಳಲ್ಲಿ 109 ಆಲೌಟ್ (ಹಾಸಿನಿ ಪೆರೇರಾ 30; ದಯಾಲನ್ ಹೇಮಲತಾ 3/15, ಪೂಜಾ ವಸ್ತ್ರಾಕರ್ 2/12).

For Quick Alerts
ALLOW NOTIFICATIONS
For Daily Alerts
Story first published: Saturday, October 1, 2022, 17:18 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X