ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

27 ರನ್ ಗೆ ಮಲೇಷ್ಯಾ ಆಲೌಟ್: ಭಾರತ ವನಿತೆಯರಿಗೆ 142 ರನ್‌ ಜಯ

Womens Asia Cup: India bundle out Malaysia for 27 in 142-run win

ಕೌಲಾಲಂಪುರ, ಜೂ. 3: ವನಿತಾ ಟಿ20 ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ಅತಿಥೇಯ ಮಲೇಷ್ಯಾವನ್ನು 27ರನ್ನಿಗೆ ಆಲೌಟ್ ಮಾಡಿದ ಭಾರತ ತಂಡ 124ರನ್ ಭರ್ಜರಿ ಜಯ ಗಳಿಸಿದೆ. ಮಿಥಾಲಿ ರಾಜ್ 69 ಎಸೆಗಳಲ್ಲಿ 97 ರನ್ ಸಿಡಿಸಿ ಎದುರಾಳಿಯ ಹೀನಾಯ ಸೋಲಿಗೆ ಕಾರಣರಾದರು.

ಕಿನರಾರಾ ಅಕಾಡೆಮಿ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಹರ್ಮನ್‌ಪ್ರೀತ್ ಕೌರ್ ಬಳಗ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 169 ರನ್‌ ಗಳಿಸಿತು.

ಮಿಥಾಲಿ ಜೊತೆ ನಾಯಕಿ ಕೌರ್(32) ಹಾಗೂ ದೀಪ್ತಿ ಶರ್ಮಾ(18) ತಂಡದ ಮೊತ್ತ ಏರಿಸುವಲ್ಲಿ ಕೊಡುಗೆ ನೀಡಿದರು. ಈ ಸಂದರ್ಭ ಸೃತಿ ಮಂಧನ 4 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಪೇರಿಸಿ ಐನ್ನಾ ಹ್ಯಾಮಿಜಾ ಹಶಿಮ್ ಓವರ್ ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.

ಭಾರತ ನೀಡಿದ್ದ 170 ರನ್ ಚೇಸಿಂಗ್ ಗೆ ಇಳಿದ ಮಲೇಷ್ಯಾ ತಂಡ ದುರ್ಬಲ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು. ಸಶಾ ಆಜ್ಮಿ 9 (10), ದುರೈ ಸಿಂಗಂ 5(21), ಜುಮಿಕಾ ಆಜ್ಮಿ ಅಜೇಯ 4 (15), ಮಾಸ್ ಎಲ್ಯಾಸ 2 (5), ನಧಿರಾ ನಸ್ರುದ್ದೀನ್ 1 (8) ರನ್ ಪೇರಿಸಿದ್ದು ಬಿಟ್ಟರೆ ಉಳಿದೆಲ್ಲರೂ ಸೊನ್ನೆ ಸುತ್ತಿದರು.

ಭಾರತ ಪರ ಉತ್ತಮವಾಗಿ ಬೌಲಿಂಗ್‌ ಮಾಡಿದ ಪೂಜಾ ವಸ್ತ್ರಾಕರ್ ಕೇವಲ 6 ರನ್ನಿಗೆ 3 ವಿಕೆಟ್‌ ಉರುಳಿಸಿದರು. ಪೂನಮ್ ಯಾದವ್‌ ಮತ್ತು ಅನುಜಾ ಪಾಟಿಲ್‌ ತಲಾ 2 ವಿಕೆಟ್‌ ಪಡೆದರೆ, ಶಿಖಾ ಪಾಂಡೆಗೆ ಒಂದು ವಿಕೆಟ್‌ ಲಭಿಸಿತು.

ಇದುವರೆಗೆ ಒಟ್ಟು ಆರು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಜೂನ್ 4ರಂದು ಥಾಯ್ಲೆಂಡ್, 6ರಂದು ಬಾಂಗ್ಲಾದೇಶ, 7ರಂದು ಶ್ರೀಲಂಕಾ ಮತ್ತು 8ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

Story first published: Sunday, June 3, 2018, 19:16 [IST]
Other articles published on Jun 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X