ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಏಷ್ಯಾಕಪ್ 2022: ಭಾರತ ವಿರುದ್ಧ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11 ಡೀಟೈಲ್ಸ್‌

India women vs Pakistan women

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ರ 13ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ವನಿತೆಯರ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಪಾಕಿಸ್ತಾನ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಸಿಲ್ಹೆಟ್‌ನ ಸಿಲ್ಹೆಟ್‌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ. ಈಗಾಗಲೇ ಲೀಗ್‌ ಹಂತದಲ್ಲಿ ಮೂರಕ್ಕೆ ಮೂರು ಪಂದ್ಯ ಗೆದ್ದಿರುವ ಭಾರತದ ವನಿತೆಯರು ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಪಾಕಿಸ್ತಾನ ವನಿತೆಯರು ಮೂರಕ್ಕೆ ಎರಡು ಪಂದ್ಯ ಜಯಿಸಿ ಎರಡನೇ ಸ್ಥಾನ ಅಲಂಕರಿಸಿದೆ.

ಥಾಯ್ಲೆಂಡ್ ಎದುರು ಸೋತು ಮುಖಭಂಗ ಎದುರಿಸಿರುವ ಪಾಕಿಸ್ತಾನ ವನಿತೆಯರು

ಪಾಕಿಸ್ತಾನ ವನಿತೆಯರ ತಂಡವು ಕಳೆದ ಪಂದ್ಯದಲ್ಲಿ ಇತಿಹಾಸದಲ್ಲಿ ಕಾಣದ ಸೋಲನ್ನ ಅನುಭವಿಸುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದೆ. ಟೂರ್ನಮೆಂಟ್‌ನ 10ನೇ ಪಂದ್ಯದಲ್ಲಿ ಕ್ರಿಕೆಟ್ ಕೂಸು ಥಾಯ್ಲೆಂಡ್‌ ಎದುರು ಸೋಲುವ ಮೂಲಕ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಭಾರೀ ಮುಖಭಂಗ ಎದುರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಿಸ್ಮಾ ಮರೂಫ್ ನೇತೃತ್ವದ ಪಾಕಿಸ್ತಾನ ಮಹಿಳಾ ತಂಡವು ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ ಅಮೀನ್ ಅರ್ಧಶತಕ ದಾಖಲಿಸಿದ್ದು (56) ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟ್ಸ್‌ವುಮೆನ್ ತಂಡಕ್ಕೆ ಆಧಾರವಾಗುವಲ್ಲಿ ವಿಫಲರಾದ್ರು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ಪಾಕಿಸ್ತಾನ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 116ರನ್‌ಗಳಿಸಲಷ್ಟೇ ಶಕ್ತಗೊಂಡಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಥಾಯ್ಲೆಂಡ್ ವನಿತೆಯರು ಉತ್ತಮ ಆರಂಭ ಪಡೆಯದಿದ್ದರೂ ಸಹ ಗೆಲುವಿನ ದಡ ತಲುಪುವಲ್ಲಿ ಯಶಸ್ವಿಯಾದ್ರು. ತಂಡದ ಪರ ಓಪನರ್ ನಾಟ್ಟಾಕಂ ಚಾಂತಂ 51 ಎಸೆತಗಳಲ್ಲಿ 61 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಈಕೆಯ ಪ್ರಮುಖ ಇನ್ನಿಂಗ್ಸ್‌ನಿಂದಾಗಿ ಥಾಯ್ಲೆಂಡ್ ಇನ್ನೊಂದು ಎಸೆತ ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳ ರೋಚಕ ಗೆಲವು ಸಾಧಿಸಿತು. ಹೀಗಾಗಿ ಪಾಕಿಸ್ತಾನ ವನಿತೆಯರು ಭಾರತ ವಿರುದ್ಧದ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಪಂದ್ಯ ಸೋತರೆ ಸೆಮಿಫೈನಲ್ ತಲಪಲು ಕಷ್ಟಸಾಧ್ಯವಾಗಬಹುದು. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಅನ್ನು ಈ ಕೆಳಗೆ ಕಾಣಬಹುದು

ನಾಯಿಗಳು ಬೊಗಳುತ್ತವೇ ಎಂದು ಕಲ್ಲು ಹೊಡೆಯುತ್ತಾ ನಿಲ್ಲಲಾರೆ: ಟೀಕಾಕಾರರ ಬಾಯಿ ಮುಚ್ಚಿಸಿದ ಜಸ್ಪ್ರೀತ್ ಬುಮ್ರಾ!

ಪಾಕಿಸ್ತಾನ ಮಹಿಳಾ ತಂಡದ ಪ್ಲೇಯಿಂಗ್ 11

ಪಾಕಿಸ್ತಾನ ಮಹಿಳಾ ತಂಡದ ಪ್ಲೇಯಿಂಗ್ 11

ಮುನೀಬಾ ಅಲಿ(ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್(ನಾಯಕಿ), ನಿದಾ ದಾರ್, ಆಯೇಶಾ ನಸೀಮ್, ಅಲಿಯಾ ರಿಯಾಜ್, ಒಮೈಮಾ ಸೊಹೈಲ್, ಐಮಾನ್ ಅನ್ವರ್, ಸಾದಿಯಾ ಇಕ್ಬಾಲ್, ತುಬಾ ಹಸನ್, ನಶ್ರಾ ಸಂಧು

ಬೆಂಚ್‌: ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ಸಿದ್ರಾ ನವಾಜ್, ಸದಾಫ್ ಶಮಾಸ್

Ind vs SA 1st ODI: ದ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲಿಗೆ 4 ಪ್ರಮುಖ ಕಾರಣಗಳು

ಭಾರತ ಮಹಿಳಾ ತಂಡದ ಪ್ಲೇಯಿಂಗ್ 11

ಭಾರತ ಮಹಿಳಾ ತಂಡದ ಪ್ಲೇಯಿಂಗ್ 11

ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ದಯಾಲನ್ ಹೇಮಲತಾ, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್‌

ಬೆಂಚ್‌: ಶಫಾಲಿ ವರ್ಮಾ, ಸ್ನೇಹ ರಾಣಾ, ಕಿರಣ್ ನವ್ಗಿರೆ, ಮೇಘನಾ ಸಿಂಗ್‌

Story first published: Friday, October 7, 2022, 13:03 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X