ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women's IPL: ಮಹಿಳಾ ಐಪಿಎಲ್ 2023-27ರ ಮಾಧ್ಯಮ ಹಕ್ಕುಗಳಿಗಾಗಿ ಬಿಡ್ ಆಹ್ವಾನಿಸಿದ ಬಿಸಿಸಿಐ

Womens IPL: BCCI Invites Bids For Media Rights For Womens IPL 2023-27

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ, ಡಿಸೆಂಬರ್ 9ರಂದು 2023-2027ರ ನಡುವಿನ ಐದು ವರ್ಷಗಳ ಅವಧಿಯ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ (WIPL) ಮಾಧ್ಯಮ ಹಕ್ಕುಗಳಿಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.

"2023-2027ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಳ ಮಾಧ್ಯಮ ಹಕ್ಕುಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಪಡೆದುಕೊಳ್ಳಲು ಐಪಿಎಲ್ ಆಡಳಿತ ಮಂಡಳಿಯು ಪ್ರತಿಷ್ಠಿತ ಸಂಸ್ಥೆಗಳಿಂದ ಬಿಡ್‌ಗಳನ್ನು ಆಹ್ವಾನಿಸುತ್ತದೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಹಕ್ಕುಗಳನ್ನು ಖರೀದಿಸುವ ಸಂಸ್ಥೆಯು ಭಾರತೀಯ ಕಂಪನಿಯಾಗಿದ್ದರೆ, ಒಬ್ಬರು 5,90,000 ರೂ. (5,00,000 + 90,000 GST) ಪಾವತಿಸಬೇಕಾಗುತ್ತದೆ. ಒಂದು ವೇಳೆ ವಿದೇಶಿ ಕಂಪನಿಯಾಗಿದ್ದರೆ, 5,00,000 ರೂಪಾಯಿಗೆ ಸಮಾನವಾದ ಮೊತ್ತಕ್ಕೆ ಯುನೈಟೆಡ್ ಸ್ಟೇಟ್ಸ್ ಡಾಲರ್‌ನಲ್ಲಿ (USD) ಪಾವತಿ ಮಾಡಬೇಕಾಗುತ್ತದೆ.

Womens IPL: BCCI Invites Bids For Media Rights For Womens IPL 2023-27


ಅರ್ಹತಾ ಅಗತ್ಯತೆಗಳು, ಬಿಡ್‌ಗಳ ಸಲ್ಲಿಕೆ ಪ್ರಕ್ರಿಯೆ, ಪ್ರಸ್ತಾವಿತ ಮಾಧ್ಯಮ ಹಕ್ಕುಗಳ ಪ್ಯಾಕೇಜ್‌ಗಳು ಮತ್ತು ಸೂಚನೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಟೆಂಡರ್ ಪ್ರಕ್ರಿಯೆಯನ್ನು ನಿಯಂತ್ರಿಸುವ ವಿವರವಾದ ನಿಯಮಗಳು ಮತ್ತು ಷರತ್ತುಗಳು "ಟೆಂಡರ್‌ಗೆ ಆಹ್ವಾನ' (ITT) ಶೀಟ್‌ನಲ್ಲಿ ಒಳಗೊಂಡಿರುತ್ತವೆ.

"ಮರುಪಾವತಿಸಲಾಗದ 5,00,000 ರೂ. ಶುಲ್ಕದ ಪಾವತಿ ಜೊತೆಗೆ ಯಾವುದೇ ಅನ್ವಯವಾಗುವ ಜಿಎಸ್‌ಟಿ ಸೇರಿ ಟೆಂಡರ್ ಆಹ್ವಾನ ಡಾಕ್ಯುಮೆಂಟ್‌ಗಳನ್ನು ಪಡೆದುಕೊಳ್ಳುವ ವಿಧಾನವನ್ನು ಈ ಡಾಕ್ಯುಮೆಂಟ್ ಅನುಬಂಧ A ನಲ್ಲಿ ಪಟ್ಟಿಮಾಡಲಾಗಿದೆ. ಡಿಸೆಂಬರ್ 31, 2022ರವರೆಗೆ ಟೆಂಡರ್ ಖರೀದಿಗೆ ಲಭ್ಯವಿರುತ್ತದೆ," ಎಂದು ಬಿಸಿಸಿಐ ತಿಳಿಸಿದೆ.

IND-W vs AUS-W: ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದ ಟಾಸ್ ವರದಿ, ಆಡುವ 11ರ ಬಳಗIND-W vs AUS-W: ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

ಕಳೆದು ತಿಂಗಳು ಮಹಿಳಾ ಐಪಿಎಲ್ ಆರಂಭಿಸುವುದನ್ನು ಬಿಸಿಸಿಐ ಖಚಿತಪಡಿಸಿತ್ತು. ಪಂದ್ಯಾವಳಿಯು ಆಡುವ 11ರ ಬಳಗದಲ್ಲಿ ಗರಿಷ್ಠ ಐದು ವಿದೇಶಿ ಆಟಗಾರರನ್ನು ಹೊಂದಿರಬೇಕು ಮತ್ತು 22 ಪಂದ್ಯಗಳನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

2018ರಿಂದ ಮಹಿಳೆಯರ ಟಿ20 ಚಾಲೆಂಜ್ ಟ್ರೋಫಿ ಚಾಲನೆಯಲ್ಲಿದೆ ಮತ್ತು ನಾಲ್ಕು ವರ್ಷಗಳಲ್ಲಿ ಮೂರು ಆವೃತ್ತಿಗಳಿಗೆ ಸಾಕ್ಷಿಯಾಗಿದೆ. ಆದರೆ, ಮಹಿಳಾ ಐಪಿಎಲ್ ಇನ್ನೂ ಆಡಿರಲಿಲ್ಲ. ಮಹಿಳಾ ಐಪಿಎಲ್ ಮಹಿಳಾ ಕ್ರಿಕೆಟ್ ಅನ್ನು ಹೇಗೆ ಜನಪ್ರಿಯಗೊಳಿಸಬಹುದು ಎಂಬುದರ ಕುರಿತಾಗಿ ಹಲವು ಭಾರತೀಯ ಮತ್ತು ವಿದೇಶಿ ಕ್ರಿಕೆಟಿಗರು ಮಾತನಾಡಿದ್ದರು.

Story first published: Friday, December 9, 2022, 20:19 [IST]
Other articles published on Dec 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X