ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳೆಯರ ಐಪಿಎಲ್ ಬಗ್ಗೆ ಖಚಿತ ನಿರ್ಧಾರ ತಿಳಿಸಿದ ಸೌರವ್ ಗಂಗೂಲಿ

Women’s Ipl Is Very Much On: Bcci President Sourav Ganguly

ಐಪಿಎಲ್ ಆಯೋಜನೆಯ ಸಿದ್ಧತೆಯ ಮಧ್ಯೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಮತ್ತೊಂದು ಮಹತ್ವದ ನಿರ್ಧಾರವನ್ನು ಸ್ಪಷ್ಟಪಡಿಸಿದರು. ಕಳೆದೆರಡು ವರ್ಷಗಳಂತೆ ಈ ಬಾರಿಯೂ ಐಪಿಎಲ್​ ಸಂದರ್ಭದಲ್ಲೇ ಮಹಿಳೆಯರ ಮಿನಿ ಐಪಿಎಲ್​ ಟೂರ್ನಿಯೂ ನಡೆಯಲಿದೆ ಎಂದು ಗಂಗೂಲಿ ಖಚಿತಪಡಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಟೂರ್ನಿಯನ್ನು ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ನವೆಂಬರ್ 8ರವರೆಗೆ ನಡೆಸುವ ತೀರ್ಮಾನವಾಗಿದೆ. ಈ ಟೂರ್ನಿಯ ಪ್ಲೇ-ಆಫ್​ ಹಂತದ ವೇಳೆಯಲ್ಲಿ ಮಹಿಳೆಯರ ಮಿನಿ ಐಪಿಎಲ್​ ಕೂಡ ನಡೆಸುವ ನಿರ್ಧಾರ ಬಿಸಿಸಿಐನದ್ದು. ಈ ಕಿರು ಟೂರ್ನಿ ಕೂಡ ಯುಎಇಯಲ್ಲೇ ನಡೆಯಲಿದ್ದು ಈ ಮೂಲಕ ಮಹಿಳಾ ಕ್ರಿಕೆಟ್​ ಆಟವನ್ನು ತಾನು ಕಡೆಗಣಿಸುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ರವಾನಿಸಿದೆ.

ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ವ್ಯಕ್ತಪಡಿಸಿದ ರಹಾನೆಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ವ್ಯಕ್ತಪಡಿಸಿದ ರಹಾನೆ

ಮಹಿಳೆಯರಿಗೆ ಐಪಿಎಲ್​ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರವೂ ಆಯೋಜನೆಗೊಳ್ಳಲಿದೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರುವ ಮಹಿಳಾ ಕ್ರಿಕೆಟಿಗರಿಗೆ ಈಗಾಗಲೆ ಶಿಬಿರ ಆರಂಭಗೊಳ್ಳಬೇಕಾಗಿತ್ತಾದರೂ, ದೇಶದಲ್ಲಿನ ಕರೊನಾ ಪರಿಸ್ಥಿತಿಯಿಂದಾಗಿ ಇದು ಸಾಧ್ಯವಾಗಿಲ್ಲ.

ಕರೊನಾ ಹಾವಳಿಯಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಸದ್ಯ ಬಂದ್​ ಆಗಿದೆ. ಆದರೆ ನಾವು ಯೋಜನೆಯೊಂದನ್ನು ಹೊಂದಿದ್ದೇವೆ. ಮಹಿಳಾ ಕ್ರಿಕೆಟಿಗರಿಗೂ ಶಿಬಿರವನ್ನು ಆಯೋಜಿಸುವುದಂತೂ ಖಚಿತ ಎಂದು ಗಂಗೂಲಿ ತಿಳಿಸಿದ್ದಾರೆ.

'ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ''ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ'

ಮುಂದಿನ ವರ್ಷ ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ 2 ಪೂರ್ಣ ಪ್ರಮಾಣದ ಸರಣಿಗಳನ್ನು ಆಡುವ ಯೋಜನೆಯನ್ನು ಬಿಸಿಸಿಐ ರೂಪಿಸುತ್ತಿದೆ ಎನ್ನಲಾಗಿದೆ.

Story first published: Monday, August 3, 2020, 9:55 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X