ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ: ಮೊದಲನೇ ಪಂದ್ಯದಲ್ಲಿ ಅಂಬಾನಿ-ಅದಾನಿ ತಂಡಗಳ ಮುಖಾಮುಖಿ

Womens Premier League Time Table: Mumbai Face Ahmedabad In Opening Match

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 4ರಂದು ಮಹಿಳಾ ಪ್ರೀಮಿಯರ್ ಲೀಗ್‌ಗೆ ಚಾಲನೆ ಸಿಗಲಿದ್ದು, ಮಾರ್ಚ್ 26ಕ್ಕೆ ಅಂತಿಮ ಪಂದ್ಯ ನಡೆಯಲಿದೆ.

ಮೊದಲ ಪಂದ್ಯ ಮಾರ್ಚ್ 4 ರಂದು ನಡೆಯಲಿದ್ದು, ಅದಾನಿ ಒಡೆತನದ ಅಮಮದಾಬಾದ್ ಮತ್ತು ಅಂಬಾನಿ ಒಡೆತನದ ಮುಂಬೈ ನಡುವೆ ನಡೆಯಲಿದೆ. ಇಬ್ಬರು ಪ್ರಮುಖ ಉದ್ಯಮಿಗಳ ಒಡೆತನದ ತಂಡಗಳ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಲಿದೆ.

ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್‌ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್‌ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ

ಫೆಬ್ರವರಿ 2ನೇ ವಾರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಟರ್ನ್ಯಾಷನಲ್ ಲೀಗ್ ಟಿ20 ಫೈನಲ್ ಪಂದ್ಯದ ಬಳಿಕ ಹರಾಜು ಪ್ರಕ್ರಿಯೆ ನಡೆಸುವಂತ ಫ್ರಾಂಚೈಸಿಗಳು ಮನವಿ ಮಾಡಿದ ಬೆನ್ನಲ್ಲೇ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಈ ಮೊದಲು ದೆಹಲಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆಯಲಿವೆ.

ಮುಂಬೈನ ಸಿಸಿಐ ಬಾರ್‍ಬೊನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎಲ್ಲಾ ಪಂದ್ಯಗಳು ನಡೆಸಲು ತೀರ್ಮಾನಿಸಲಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 17 ರಂದು ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ ನಡೆಯಲಿದೆ, ಅದಾದ ಬಳಿಕ ಐಪಿಲ್‌ ಪಂದ್ಯಗಳಿಗೆ ಸಿದ್ಧತೆ ಮಾಡಲಾಗುತ್ತದೆ. ಆದ್ದರಿಂದಲೇ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯಗಳು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಿಲ್ಲ ಎನ್ನಲಾಗಿದೆ.

Womens Premier League Time Table: Mumbai Face Ahmedabad In Opening Match

ಮಾರ್ಚ್ 5 ರಂದು ಬೆಂಗಳೂರು ಪಂದ್ಯ

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್ 4ರಂದು ಮುಂಬೈ ಮತ್ತು ಅಹಮದಾಬಾದ್ ತಂಡಗಳು ಮುಖಾಮುಖಿಯಾದರೆ, ಮಾರ್ಚ್ 5ರಂದು ಬೆಂಗಳೂರು ಮತ್ತು ಡೆಲ್ಲಿ ತಂಡದ ನಡುವೆ ಪಂದ್ಯ ನಡೆಯಲಿದೆ. ಅದೇ ದಿನ ಅಹಮದಾಬಾದ್ ತಂಡ ಲಕ್ನೋ ತಂಡದ ವಿರುದ್ಧ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಸೆಣೆಸಲಿದೆ.

Womens Premier League Time Table: Mumbai Face Ahmedabad In Opening Match

ಒಂದು ಎಲಿಮಿನೇಟರ್ ಪಂದ್ಯ

ವೇಳಾಪಟ್ಟಿಯ ಪ್ರಕಾರ 5 ತಂಡಗಳಲ್ಲಿ ಮೂರು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಗುಂಪು ಹಂತದ ಪಂದ್ಯಗಳಲ್ಲಿ ಅಗ್ರಸ್ಥಾನಿಯಾಗಿರುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದರೆ, ಉಳಿದ ಎರಡು ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಆಡಲಿವೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಎಲಿಮಿನೇಟರ್ ಪಂದ್ಯ ಮಾರ್ಚ್ 24 ರಂದು ಬಾರ್ಬೊನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಾರ್ಚ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಫ್ರಾಂಚೈಸಿ ಒಪ್ಪಂದಗಳಿಗೆ ಸಹಿ ಹಾಕಲು ಐವರು ಮಾಲಿಕರನ್ನು ಬಿಸಿಸಿಐ ಆಹ್ವಾನಿಸಿದೆ.

Story first published: Saturday, February 4, 2023, 2:30 [IST]
Other articles published on Feb 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X