ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಕ್ರಿಕೆಟ್ ಚಾಲೆಂಜ್ 2022: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, IPL ಪ್ಲೇಆಫ್ ಜೊತೆಗೆ ಪಂದ್ಯಗಳ ಆಯೋಜನೆ

Womens t20 challenge

2022ರ ಆವೃತ್ತಿಯ ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ಈ ಟೂರ್ನಿಯ ಪಂದ್ಯಗಳನ್ನ ಐಪಿಎಲ್ 2022ರ ಪ್ಲೇ ಆಫ್ ಪಂದ್ಯಗಳ ನಡುವೆ ಆಯೋಜಿಸಲಾಗುವುದು ಎಂದು ಬಿಸಿಸಿಐ ಘೋಷಿಸಿದೆ.

ಈ ಮೊದಲು ಲಕ್ನೋ ಮಹಿಳಾ ಟಿ20 ಚಾಲೆಂಜ್‌ನ ಆತಿಥ್ಯ ವಹಿಸಲಿದೆ ಎಂದು ವರದಿಯಾಗಿತ್ತು, ಆದ್ರೆ ಟೂರ್ನಮೆಂಟ್ ಪುಣೆಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮಂಗಳವಾರ ದೃಢಪಡಿಸಿದೆ.

ಧೋನಿಯ ಆ ಸಿಕ್ಸರ್‌ ನೋಡಿ, ನಾನು ಕ್ರಿಕೆಟ್ ಆಡ್ಬೇಕು ಎಂದು ನಿರ್ಧರಿಸಿದೆ: ಮುಕೇಶ್ ಚೌಧರಿಧೋನಿಯ ಆ ಸಿಕ್ಸರ್‌ ನೋಡಿ, ನಾನು ಕ್ರಿಕೆಟ್ ಆಡ್ಬೇಕು ಎಂದು ನಿರ್ಧರಿಸಿದೆ: ಮುಕೇಶ್ ಚೌಧರಿ

ಕಳೆದ ಸೀಸನ್‌ನಂತೆ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದ್ದು, ಫೈನಲ್‌ ಪಂದ್ಯವು ಇದರಲ್ಲಿ ಒಳಗೊಂಡಿದೆ. ಮೊದಲ ಪಂದ್ಯ 23 ಮೇ ಸಂಜೆ 7.30ಕ್ಕೆ ಪುಣೆಯಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಮೇ 24ರಂದು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಇದಾದ ಬಳಿಕ ಒಂದು ದಿನಗಳ ವಿರಾಮ ನೀಡಲಾಗಿದ್ದು, ಮೂರನೇ ಪಂದ್ಯವು ಮೇ 26ರಂದು ನಡೆಯಲಿದೆ. ಫೈನಲ್ ಪಂದ್ಯವು ಮೇ 28ರಂದು ಆಯೋಜಿಸಲಾಗಿದೆ.

ಬಿಸಿಸಿಐ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು 2018 ರಲ್ಲಿ ಆಯೋಜಿಸಿದಾಗ ಕೇವಲ ಎರಡು ತಂಡಗಳು ಭಾಗವಹಿಸಿದ್ದು, ಒಂದು ಪಂದ್ಯದೊಂದಿಗೆ ಪ್ರಾರಂಭಿಸಿತು. 2019 ರಲ್ಲಿ, ಬಿಸಿಸಿಐ ಮತ್ತೊಂದು ಹೊಸ ತಂಡವನ್ನು ಪರಿಚಯಿಸಿತು, ಅಲ್ಲಿ ಪ್ರತಿ ತಂಡವು ಇನ್ನೊಂದನ್ನು ಒಮ್ಮೆ ಆಡಿತು ಮತ್ತು ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆದವು.

2010 ರಲ್ಲಿ, ಟೂರ್ನಿಯನ್ನ ಯುಎಇಯಲ್ಲಿ ನಡೆಸಲಾಯಿತು, ಆದರೆ ಕಳೆದ ವರ್ಷ ಭಾರತದ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಘರ್ಷಣೆಗೊಂಡಿದ್ದರಿಂದ ಟೂರ್ನಿ ನಡೆಸಲು ಸಾಧ್ಯವಾಗಲಿಲ್ಲ.

ಈ ಟೂರ್ನಿಯನ್ನ ಭವಿಷ್ಯದ ಮಹಿಳಾ ಐಪಿಎಲ್‌ಗೆ ಪೂರ್ವಭಾವಿಯಾಗಿ ನೋಡಲಾಗಿದೆ. 5-6 ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುವ ಮೂಲಕ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದ WIPL ಜಾರಿಯಲ್ಲಿರುತ್ತದೆ ಎಂದು ಬಿಸಿಸಿಐಯಿಂದ ಸೂಚನೆ ಬಂದಿದೆ.

RCB ಹಾಗು CSK ಪಂದ್ಯದಲ್ಲಿ ಗೆಲುವು ಯಾರಿಗೆ | Oneindia Kannada

ಸದ್ಯ, ಮೂರು ತಂಡಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಆದರೆ ಮೂರು ತಂಡಗಳನ್ನು ಇನ್ನೂ ಘೋಷಿಸಲಾಗಿಲ್ಲ. ಟೂರ್ನಿಗೆ ಎಷ್ಟು ವಿದೇಶಿ ಕ್ರಿಕೆಟಿಗರು ಲಭ್ಯವಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, May 4, 2022, 10:14 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X