ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women's T20 Challenge: ಟ್ರೈಲ್‌ಬ್ಲೇಜರ್ಸ್‌ ವಿರುದ್ಧ ಗೆದ್ದು ಬೀಗಿದ ಸೂಪರ್‌ನೋವಾಸ್

Supernovas vs trailblazers

ಹರ್ಮನ್‌ಪ್ರೀತ್‌ ಕೌರ್ ನೇತೃತ್ವದ ಸೂಪರ್‌ನೋವಾಸ್ ಮಹಿಳಾ ಟಿ20 ಚಾಲೆಂಜ್ ಓಪನಿಂಗ್ ಪಂದ್ಯವನ್ನ ಗೆಲ್ಲುವ ಮೂಲಕ ಜಯದ ಅಭಿಯಾನವನ್ನು ಪ್ರಾರಂಭಿಸಿತು. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್‌ಬ್ಲೇಜರ್ಸ್ 49 ರನ್‌ಗಳಿಂದ ಸೋತಿತು. ಈ ಗೆಲುವಿನ ಮೂಲಕ ಹರ್ಮನ್‌ಪ್ರೀತ್ ತಂಡವು ಉತ್ತಮ ರನ್ ರೇಟ್ ಅನ್ನು ಸಂಪಾದಿಸಿದೆ.

ಮಹಿಳಾ ಟಿ20 ಚಾಲೆಂಜ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸೂಪರ್‌ನೋವಾಸ್

ಮಹಿಳಾ ಟಿ20 ಚಾಲೆಂಜ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸೂಪರ್‌ನೋವಾಸ್

ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಿಗದಿತ 20 ಓವರ್‌ಗಳಲ್ಲಿ ಸೂಪರ್‌ನೋವಾಸ್ 163 ರನ್ ಗಳಿಸಿತು. ಹರ್ಮನ್‌ಪ್ರೀತ್ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 36 ರನ್ ಗಳಿಸಿದರು. ಹರ್ಲೀನ್ ಡಿಯೋಲ್ 35, ಡಿಯಾಂಡಾ ಡೋಟಿನ್ 32 ಮತ್ತು ಪ್ರಿಯಾ ಪುನಿಯಾ 22 ರನ್ ಗಳಿಸಿದರು. ಇದು ಮಹಿಳಾ ಟಿ20 ಇತಿಹಾಸದಲ್ಲಿ ಅತಿ ಹೆಚ್ಚಿನ ಮೊತ್ತ ಆಗಿರುವುದು ವಿಶೇಷ.

ಟ್ರೈಲ್‌ಬ್ಲೇಜರ್ಸ್ ಪರ ಹೈಲಿ ಮ್ಯಾಥ್ಯೂಸ್ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಸಲ್ಮಾ ಖಾತುನ್ 30 ರನ್ ನೀಡಿ 2 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್ 4 ಓವರ್‌ಗಳಲ್ಲಿ 34 ರನ್ ನೀಡಿ ಒಂದು ವಿಕೆಟ್ ಪಡೆದರು.

ಎದೆ ನೋವಿನಿಂದ ಮೈದಾನದಿಂದ ಹೊರ ನಡೆದ ಸ್ಟಾರ್ ಕ್ರಿಕೆಟಿಗ: ಆಸ್ಪತ್ರೆಗೆ ದಾಖಲು

ಕೆಟ್ಟ ಆರಂಭ ಪಡೆದ ಸ್ಮೃತಿ ಮಂದಾನ ತಂಡ

ಕೆಟ್ಟ ಆರಂಭ ಪಡೆದ ಸ್ಮೃತಿ ಮಂದಾನ ತಂಡ

ಟ್ರೇಲ್‌ಬ್ಲೇಜರ್‌ಗಳು ಅತ್ಯಂತ ಕೆಟ್ಟ ರೀತಿಯಲ್ಲಿ ಆರಂಭ ಕಂಡಿತು. ಸ್ಮೃತಿ ಮಂಧಾನ ಬಳಗ ಕೇವಲ 10 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಆರಂಭಿಕರು ಮರಳಿದಾಗ ಬ್ಯಾಟಿಂಗ್ ದುರಂತವೇ ನಡೆಯಿತು. ಎರಡನೇ ವಿಕೆಟ್ 6.2 ಓವರ್‌ಗಳಲ್ಲಿ 63 ರನ್‌ಗಳಿಗೆ ಪತನಗೊಂಡಿತು, ಅಲ್ಲಿಂದ ಸ್ಕೋರ್ 11.5 ಓವರ್‌ಗಳಲ್ಲಿ 6 ವಿಕೆಟ್‌ಗೆ 63 ಆಗಿತ್ತು.

8 ವಿಕೆಟ್ ನಷ್ಟಕ್ಕೆ 94ರನ್ ಹಾಗೂ ಕೊನೆಗೆ ಟ್ರಯಲ್ ಬ್ಲೇಜರ್ಸ್ 9 ವಿಕೆಟ್ ಕಳೆದುಕೊಂಡು 114 ರನ್‌ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕಿ ಸ್ಮೃತಿ ಮಂದಾನ 23 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 34 ರನ್ ಗಳಿಸಿದರು. ಹೈಲಿ ಮ್ಯಾಥ್ಯೂಸ್ 18, ಜೆಮಿಮಾ ರೋಡ್ರಿಗಸ್ 24 ರನ್ ಗಳಿಸಿದರು. ರೇಣುಕಾ ಸಿಂಗ್ 14 ರನ್ ಗಳಿಸಿದ್ದಾರೆ. ಇವರ ಬಳಿಕ ಯಾರೂ ಎರಡಂಕಿಯ ಸಂಖ್ಯೆಯನ್ನ ತಲುಪಲಾಗಲಿಲ್ಲ.

ರಿಷಭ್ ಪಂತ್‌ಗೆ 1.63 ಕೋಟಿ ರೂಪಾಯಿ ಮೋಸ ಮಾಡಿದ ಹರಿಯಾಣ ಕ್ರಿಕೆಟರ್: ಕೇಸ್ ದಾಖಲು

Rishab Pantಗೆ 1.63 ಕೋಟಿ ಮೋಸ ಮಾಡಿದವರು ಯಾರು? | OneIndia Kannada
ನಾಲ್ಕು ವಿಕೆಟ್ ಕಬಳಿಸಿದ ಪೂಜಾ ವಸ್ತ್ರಾಕರ್

ನಾಲ್ಕು ವಿಕೆಟ್ ಕಬಳಿಸಿದ ಪೂಜಾ ವಸ್ತ್ರಾಕರ್

ಸೂಪರ್‌ನೋವಾಸ್ ಪರ ಸೂಪರ್ ಆಗಿ ಬೌಲಿಂಗ್ ಮಾಡಿದ ಪೂಜಾ ವಸ್ತ್ರಾಕರ್ 4 ಓವರ್ ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಅವರು ಅತ್ಯುತ್ತಮ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸೋಫಿ ಎಕ್ಲೆಸ್ಟೋನ್ 19ಕ್ಕೆ 2 ಮತ್ತು ಅಲಾನಾ ಕಿಂಗ್ 30ಕ್ಕೆ 2 ವಿಕೆಟ್ ಪಡೆದರು.

ಇನ್ನು ಮೇಘನಾ ಸಿಂಗ್ 3 ಓವರ್‌ಗಳಲ್ಲಿ 16 ರನ್ ನೀಡಿ ಒಂದು ವಿಕೆಟ್ ಪಡೆದರು. ಸೂಪರ್ನೋವಾಸ್‌ನ ನೆಟ್‌ ರನ್‌ರೇಟ್‌ +2.450, ಟ್ರೈಲ್‌ಬ್ಲೇಜರ್ಸ್‌ ನೆಟ್‌ ರನ್‌ರೇಟ್‌ ಮೈನಸ್ (-) 2.450 ಗಳಷ್ಟಿತ್ತು. ಮಂಗಳವಾರ ಮಧ್ಯಾಹ್ನ 3.30ಕ್ಕೆ ಸೂಪರ್‌ನೋವಾಸ್ ಮುಂದೆ ದೀಪ್ತಿ ಶರ್ಮಾ ನೇತೃತ್ವದ ವೆಲಾಸಿಟಿ ತಂಡವು ಮುಖಾಮುಖಿಯಾಗಲಿದೆ. ಮುಂದಿನ ವರ್ಷದಿಂದ ಮಹಿಳಾ ಐಪಿಎಲ್‌ಗೂ ಮುನ್ನ ಮಹಿಳಾ ಟಿ20 ಚಾಲೆಂಜ್ ನಡೆಯುತ್ತಿರುವುದು ಇದೇ ಕೊನೆಯ ಬಾರಿ.

Story first published: Tuesday, May 24, 2022, 0:10 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X