ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್‌ಬ್ಲೇಜರ್ಸ್‌, ಆದ್ರೂ ಫೈನಲ್ ಮಿಸ್

Womens t20

ಐಪಿಎಲ್ 2022ರ ಮಹಿಳಾ ಟಿ20 ಚಾಲೆಂಜ್‌ನ ಮೂರನೇ ಮತ್ತು ಅಂತಿಮ ಗುಂಪು ಹಂತದ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಟ್ರೈಲ್‌ಬ್ಲೇಜರ್ಸ್ 16ರನ್‌ಗಳಿಂದ ಗೆದ್ದು ಬೀಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ವೆಲೋಸಿಟಿ ವರ್ಸಸ್ ಟ್ರೈಲ್‌ಬ್ಲೇಜರ್ಸ್‌ ನಡುವೆ ಈ ಪಂದ್ಯ ನಡೆಯಿತು. 191 ರನ್‌ಗಳ ಗುರಿ ಬೆನ್ನತ್ತಿದ ವೆಲಾಸಿಟಿ ತಂಡ ಪವರ್‌ಪ್ಲೇ ಒಳಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಚಕವಾಗಿ ನಡೆದ ಪಂದ್ಯದಲ್ಲಿ ವೆಲೋಸಿಟಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಲಾಸಿಟಿ ವಿರುದ್ಧ ಟ್ರೈಲ್‌ಬ್ಲೇಜರ್ಸ್‌ ಗೆದ್ದರೂ ಫೈನಲ್ ತಲುಪಲಿಲ್ಲ. ಈ ಪಂದ್ಯಾವಳಿಗಳಲ್ಲಿ ಸೂಪರ್‌ನೋವಾಸ್‌, ಟ್ರೈಲ್‌ಬ್ಲೇಜರ್ಸ್‌ ಮತ್ತು ವೆಲಾಸಿಟಿ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದ್ದರೂ, ನಿವ್ವಳ ರನ್ ರೇಟ್ ಉತ್ತಮವಾಗಿದ್ದ ಸೂಪರ್‌ನೋವಾಸ್ ಅಗ್ರ 2 ರಲ್ಲಿ ಉಳಿದುಕೊಂಡು ಫೈನಲ್ ತಲುಪಿತು.

ವೆಲಾಸಿಟಿ ಪರ ಶಫಾಲಿ ವರ್ಮಾ (15 ಎಸೆತಗಳಲ್ಲಿ 5 ಬೌಂಡರಿ ಸಹಿತ 29) ಮತ್ತು ಕಿರಣ್ ನವಿಗಿರೆ (34 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 69) ಬೌಂಡರಿ ಸಿಡಿಸಿದರು. ಆದ್ರೆ ತಂಡದ ಉಳಿದ ಬ್ಯಾಟರ್‌ಗಳು ವಿಫಲವಾದರು ಮತ್ತು ಕೊನೆಯಲ್ಲಿ ರನ್ ಕಲೆಹಾಕಲು ಬಹಳಷ್ಟು ತತ್ತರಿಸಿದರು. ಟ್ರೈಲ್‌ಬ್ಲೇಜರ್ಸ್‌ ಬೌಲರ್‌ಗಳಾದ ರಾಜೇಶ್ವರಿ ಗಾಯಕ್ವಾಡ್ 2, ಸಲ್ಮಾ, ಪೂನಂ ಯಾದವ್, ಸೋಫಿಯಾ ಡಂಕ್ಲಿ, ರೇಣುಕಾ ಸಿಂಗ್ ಮತ್ತು ಮ್ಯಾಥ್ಯೂಸ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟ್ರಯಲ್ ಬ್ಲೇಜರ್ಸ್ ಬ್ಯಾಟಿಂಗ್‌ನಲ್ಲಿ ಅಮೋಘ ಆಟವಾಡಿತು. ಬ್ಯಾಟಿಂಗ್ ನಲ್ಲಿ ನಾಯಕಿ ಸ್ಮೃತಿ ಮಂಧಾನ ಬಹುಬೇಗನೆ (1 ರನ್) ಔಟಾದರು. ಆದರೆ ನಾಯಕಿ ಔಟಾದರೂ ಸಬ್ಬಿನೇನಿ ಮೇಘನಾ (47 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 73) ಯಾವುದೇ ಪರಿಣಾಮ ಬೀರದೆ ಆಡಿದರು. ಹಾಗೆಯೇ ಜೆಮಿಮಾ ರೋಡ್ರಿಗಸ್ (44 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 66ರನ್) ಬ್ಯಾಟಿಂಗ್ ನಡೆಸಿದರು. ಕೊನೆಯಲ್ಲಿ ಹೇಲಿ ಮ್ಯಾಥ್ಯೂಸ್ (16 ಎಸೆತಗಳಲ್ಲಿ 4 ಬೌಂಡರಿ ಸಹಿತ 27ರನ್) ಮತ್ತು ಡಂಕ್ಲಿ (8 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 19) ರನ್ ಗಳಿಸಿದ್ದರಿಂದ ಟ್ರಯಲ್ ಬ್ಲೇಜರ್ಸ್ 190 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.

ಉಭಯ ತಂಡಗಳ ಪ್ಲೇಯಿಂಗ್ 11

ಟ್ರೈಲ್‌ಬ್ಲೇಜರ್ಸ್ ಪ್ಲೇಯಿಂಗ್ 11: ಸ್ಮೃತಿ ಮಂದಾನ (ನಾಯಕಿ), ಹ್ಯಾಲಿ ಮ್ಯಾಥ್ಯೂಸ್, ಜೆಮಿಮಾ ರೋಡ್ರಿಗಸ್, ಸೋಫಿಯಾ ಡಂಕ್ಲಿ, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಸಲ್ಮಾ ಖಾತುನ್, ಪೂನಂ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್‌

ವೆಲಾಸಿಟಿ ಪ್ಲೇಯಿಂಗ್‌ 11: ಶಫಾಲಿ ವರ್ಮಾ, ನಟ್ಟಕನ್ ಚಂತಮ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಲಾರಾ ವೋಲ್ವರ್ಡ್, ದೀಪ್ತಿ ಶರ್ಮಾ (ನಾಯಕಿ), ಕಿರಣ್ ನವಗಿರೆ, ಸ್ನೇಹಾ ರಾಣಾ, ರಾಧಾ ಯಾದವ್, ಕೇಟ್ ಕ್ರಾಸ್, ಅಯಾಬೊಂಗಾ ಖಾಕಾ, ಸಿಮ್ರಾನ್ ಬಹದ್ದೂರ್

Story first published: Friday, May 27, 2022, 9:40 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X