ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ 2 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಬಗ್ಗೆ ಮಿಥಾಲಿ ರಾಜ್ ಭರವಸೆ

Women’s T20 Challenge: in next 2 years Hope to have a full-fledged IPL for womens: Mithali Raj

ಐಪಿಎಲ್‌ನಲ್ಲಿ ಲೀಗ್ ಹಂತ ಮುಕ್ತಾಯವಾಗಿದ್ದು ಪ್ಲೇ ಆಫ್‌ ಪಂದ್ಯಗಳು ಆರಂಭವಾಗಲಿದೆ. ಈ ಮಧ್ಯೆ ಬುಧವಾರದಿಂದ ಮಹಿಳಾ ಟಿ20 ಚಾಲೆಂಜ್ ನಡೆಯಲಿರುವುದು ಮತ್ತೊಂದು ಕುತೂಹಲಕಾರಿ ಕದನಕ್ಕೆ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಪ್ರತಿಕ್ರಿಯಿಸಿದ್ದು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ಹಾಗೂ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡಗಳು ಹಣಾಹಣಿ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಮಿಥಾಲಿ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಚೆಂಡು ನೋಡಿ ಬಲವಾಗಿ ಹೊಡಿ: ಟಿ20 ಚಾಲೆಂಜ್‌ಗೆ ಶಫಾಲಿ ರೆಡಿಚೆಂಡು ನೋಡಿ ಬಲವಾಗಿ ಹೊಡಿ: ಟಿ20 ಚಾಲೆಂಜ್‌ಗೆ ಶಫಾಲಿ ರೆಡಿ

"ಮುಂದಿನ ಎರಡು ವರ್ಷಗಳ ಕಾಲ ಮಹಿಳಾ ಟಿ20 ಚಾಲೆಂಜ್ ಮುಂದುವರಿಯಬಹುದು. ಬಳಿಕ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ನಡೆಯುವ ಸಾಧ್ಯತೆಯಿದೆ" ಎಂದು ಮಿಥಾಲಿ ರಾಜ್ ಹೇಳಿದ್ದಾರೆ. ಇದು ಭಾರತೀಯ ದೇಶಿಯ ಆಟಗಾರ್ತಿಯರಿಗೆ ಉನ್ನತ ಪಟ್ಟ ಪ್ರದರ್ಶನ ನೀಡಲು ವೇದಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ಮಿಥಾಲಿ ರಾಜ್ ವ್ಯಕ್ತಪಡಿಸಿದ್ದಾರೆ.

'ಇದು ಈಗ ನಡೆಯುತ್ತಿರುವಂತೆ ವರ್ಷವೂ ನಡೆಯುವ ಅಗತ್ಯವಿದೆ. ಹಾಗಾಗಿ ಇದು ವಾರ್ಷಿಕ ಟೂರ್ನಮೆಂಟ್ ಆಗಲಿದೆ. ಪ್ರತಿ ವರ್ಷವೂ ಈ ವೇದಿಕೆಯನ್ನು ಯುವ ಆಟಗಾರ್ತಿಯರಿಗೆ ಹಾಗೂ ಇತರ ದೇಶೀಯ ಆಟಗಾರ್ತಿಯರು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಪರಸ್ಪರರ ಮಧ್ಯೆ ಸಂವಹನ ಹಾಗೂ ವಿದೇಶಿ ಆಟಗಾರರೊಂದಿಗೆ ಸಂವಹನವನ್ನು ನಡೆಸಲು ಅವಕಾಶ ದೊರೆಯುತ್ತದ" ಎಂದಿದ್ದಾರೆ ಮಿಥಾಲಿ ರಾಜ್

ವುಮೆನ್ಸ್ ಟ20: ಸೂಪರ್ ನೋವಾಸ್ vs ವೆಲಾಸಿಟಿ, ಸಂಭಾವ್ಯ ತಂಡಗಳುವುಮೆನ್ಸ್ ಟ20: ಸೂಪರ್ ನೋವಾಸ್ vs ವೆಲಾಸಿಟಿ, ಸಂಭಾವ್ಯ ತಂಡಗಳು

ಇದೇ ಸಂದರ್ಭದಲ್ಲಿ ಮಿಥಾಲಿ ರಾಜ್ ಈ ಬಾರಿಯ ಕ್ರಿಕೆಟ್ ಆವೃತ್ತಿ ವಿಶೆಷವಾದ ಸವಾಲನ್ನು ಹೊಂದಿದೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಸುದೀರ್ಘ ವಿರಾಮದ ಬಳಿಕ ಮತ್ತೆ ಅಂಗಳಕ್ಕಿಳಿಯುತ್ತಿರುವುದು ಈ ಸವಾಲಿಗೆ ಕಾರಣವಾಗಿದೆ ಎಂದಿದ್ದಾರೆ.

Story first published: Wednesday, November 4, 2020, 14:35 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X